ಸಾನಿಯಾ ಮಿರ್ಜಾ ಸಹೋದರಿ ಆಯೋಜಿಸಿದ ರಮಜಾನ್‌ ಎಕ್ಸ್‌ಪೋದಲ್ಲಿ ಫೈರಿಂಗ್

ಹೈದರಾಬಾದ್: ಟೆನಿಸಾ ತಾರೆ ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಪ್ರತಿ ವರ್ಷ ರಮಜಾನ್ ತಿಂಗಳಲ್ಲಿ ದವತ್ ಇ ರಮಜಾನ್ ಪ್ರದರ್ಶನ ಮತ್ತು ಮಾರಾಟ ಎಕ್ಸ್‌ಪೋ ಆಯೋಜಿಸುತ್ತಾರೆ. ಆದರೆ ಈ ಬಾರಿ ಎಕ್ಸ್‌ಪೋದಲ್ಲಿ ಗುಂಡಿನ ದಾಳಿಯಾಗಿದೆ. ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಹೈದರಾಬಾದ್‌ನಲ್ಲಿ ರಮಜಾನ್ ತಿಂಗಳ ವೇಳೆ ಹಲವು ಫುಡ್ ಎಕ್ಸ್‌ಪೋ ಆಯೋಜನೆಗೊಳ್ಳುತ್ತದೆ. ಈ ಪೈಕಿ ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಆಯೋಜಿಸುವ ದವತ್ ಇ ರಂಜಾನ್ ಎಕ್ಸ್‌ಪೋ ಅತ್ಯಂತ ಜನಪ್ರಿಯವಾಗಿದೆ. ಆಹಾರ ಮಳಿಗೆ ಸೇರಿದಂತೆ ಹಲವು ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗಳನ್ನು ತೆರೆಯಲಾಗುತ್ತದೆ. ಪರ್ಫ್ಯೂಮ್ ಶಾಪ್ ಹಾಗೂ ಆಟಿಕೆ ಶಾಪ್ ಮಾಲೀಕರ ನಡುವೆ ಸಣ್ಣ ವಿಚಾರಕ್ಕೆ ಜಗಳ ಶುರುವಾಗಿದೆ. ಈ ಜಗಳ ತಾರಕಕ್ಕೇರಿದ್ದು, ರಿವಾಲ್ವರ್ನಲ್ಲಿ ಎರಡು ಸುತ್ತು ಗುಂಡಿನ ದಾಳಿ ನಡೆಸಲಾಗಿದೆ.

Sania Mirza s sister Anam Mirza had organized a party called Daawat e Ramadan

ಈ ಪ್ರಕರಣ ಸಂಬಂಧ ಗುಂಡು ಹಾರಿಸಿದ ಹಸ್ಸೇ ಬುದ್ದೀನ್‌ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆಕ್ರೋಶಗೊಂಡ ಹೆಸ್ಸೇ ಬುದ್ದಿನ ವಾಗ್ವಾದ ಮುಗಿದ ಬೆನ್ನಲ್ಲೇ ರಿವಾಲ್ವರ್ ಮೂಲಕ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಪೊಲೀಸರು ಆಗಮಿಸಿ ಆರೋಪಿ ಹಸ್ಸೇ ಬುದ್ದೀನ್‌ನ ಅರೆಸ್ಟ್ ಮಾಡಿದ್ದಾರೆ. ಬಂಧಿತ ಹಸ್ಸೇ ಬುದ್ದೀನ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಅನ್ನೋ ಮಾಹಿತಿಯೂ ಬಹಿರಂಗವಾಗಿದೆ.

Anam Mirza with Sania Mirza

ಹಸ್ಸೇ ಬುದ್ದೀನ್ ಅಲಿಯಾ ಹೈದರ್ ಲೈಸೆನ್ಸ್ ಗನ್ ಮೂಲಕ ದಾಳಿ ನಡೆಸಿದ್ದಾರೆ. ಬೆದರಿಸಲು ಈ ದಾಳಿ ನಡೆಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಆದರೆ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಈ ಜಗಳ ಹಾಗೂ ದಾಳಿಯ ಹಿಂದಿನ ಉದ್ದೇಶದ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮಾರ್ಚ್ 29ರಂದ ಈ ಘಟನೆ ನಡೆದಿದೆ.

error: Content is protected !!