ಮಂಗಳೂರು: ನೀರುಮಾರ್ಗ ಸಮೀಪದ ಪಡು ಭಟ್ರಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಠಾಬಂಧ ಬ್ರಹ್ಮಕಲಶೋತ್ಸವ ಮಾ.27ರಂದು ಆರಂಭಗೊಂಡು ಮಾ.30ರವರೆಗೆ ಬ್ರಹ್ಮರ್ಷಿ ವೇದಮೂರ್ತಿ ಕುಡುಪು ಶ್ರೀ ನರಸಿಂಹ ತಂತಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದರು.
ಮಾ.27ರಿಂದ ಬೆಳಿಗ್ಗೆ 8.00ರಿಂದ ಆಚರ್ಯಾದಿ ಋತ್ವಿಜರ ಆಗಮನ, ಸಾಮೂಹಿಕ ದೇವತಾ ಪ್ರಾರ್ಥನೆ, ಗಣಪತಿ ಹೋಮ, 11.00ರಿಂದ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಸಂಜೆ ಗಂಟೆ 6.00ರಿಂದ ಆಚಾರ್ಯಾದಿ ಋತ್ವಿಗ್ವರಣ ಪ್ರಾಸಾರ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ. ರಾತ್ರಿ ಗಂಟೆ 7.30ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಮಾ.28ರಂದು ಪೂರ್ವಾಹ್ನ 6.00ರಿಂದ ಧಾರ್ಮಿಕ ಕಾರ್ಯಕ್ರಮಗಳು. ಚಂಡಿಕಾಯಾಗ ಆರಂಭ. ಮಧ್ಯಾಹ್ನ ಗಂಟೆ 12.00ಕ್ಕೆ ಚಂಡಿಕಾಯಾಗದ ಪೂರ್ಣಾಹುತಿ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಂಜೆ ಗಂಟೆ 6.00ರಿಂದ ದುರ್ಗಾನಮಸ್ಕಾರ ಪೂಜೆ, ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ.
ಮಾ.29ರಂದು ಬೆಳಗ್ಗೆ 6.00ರಿಂದ ಧಾರ್ಮಿಕ ಕಾರ್ಯಕ್ರಮಗಳು, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6.00ರಿಂದ ಧಾರ್ಮಿಕ ಕಾರ್ಯಕ್ರಮ, ರಾತ್ರಿ ಗಂಟೆ 7.30ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಮಾ.30ರಂದು ಬೆಳಗ್ಗೆ 8.30ರಿಂದ ಶ್ರೀ ದೇವರಿಗೆ ಕಲಶಾಭಿಷೇಕ ಪ್ರಾರಂಭವಾಗಲಿದೆ. ಬೆಳಗ್ಗೆ 9.10ರಿಂದ ವೃಷಭ ಲಗ್ನ ಸುಮುಹೂರ್ತದಲ್ಲಿ 10.10ರ ಸಮಯ ಶ್ರೀ ದುರ್ಗಾಪರಮೇಶ್ವರೀ ದೇವರಿಗೆ “ಬ್ರಹ್ಮಕಲಶಾಭಿಷೇಕ” ಪ್ರಸನ್ನ ಪೂಜೆ, ರಕ್ತಶ್ವರೀ ಪ್ರತಿಷ್ಟೆ ಕಲಶಾಭಿಷೇಕ, ಬೆಳಗ್ಗೆ ಗಂಟೆ 11.30ಕ್ಕೆ ಶ್ರೀ ದೇವರಿಗೆ ಮಹಾಪೂಜೆ, ಪಲ್ಲಪೂಜೆ, ಮಧ್ಯಾಹ್ನ ಗಂಟೆ 12.00ರಿಂದ ಮಹಾ ಅನ್ನಸಂತರ್ಪಣೆ, ವೈದಿಕ ಮಂತ್ರಾಕ್ಷತೆ ನಡೆಯಲಿದೆ. ಸಂಜೆ ಗಂಟೆ 6.00ಕ್ಕೆ ಶ್ರೀ ದೇವರಿಗೆ ರಂಗಪೂಜೆ, ರಾತ್ರಿ ಗಂಟೆ 7.30ರಿಂದ ಅನ್ನಸಂತರ್ಪಣೆ ನೆರವೇರಲಿರುವುದು.
ಸಾಂಸ್ಕೃತಿಕ ಕಾರ್ಯಕ್ರಮಗಳು
ಮಾ.27ರ ಗುರುವಾರ ಸಂಜೆ 4ರಿಂದ ಭಜನೆ 5.30ರಿಂದ ಸಭಾ ಕಾರ್ಯಕ್ರಮ. ಪಡು ಶ್ರೀ ವಿಶ್ವೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿಯ ಸದಸ್ಯರಿಂದ ಅನೃತ್ಯ ವೈಭವ, ಹಾಸ್ಯ ಪ್ರಹಸನ, ಮಾ.28ರಂದು ಬೆಳಗ್ಗೆ 9ರಿಂದ ಭಜನಾ ಕಾರ್ಯಕ್ರಮ, ಸಂಜೆ ಪರಿಂದ 8ರ ವರೆಗೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಲಿ ಹಾಗೂ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 8.00ರಿಂದ ಲಕುಮಿ ತಂಡದ ಕುಸಾಲ್ದ ಕಲಾವಿದರು ಮಂಗಳೂರು ಇವರು ಅಭಿನಯಿಸುವ ʻಒರಿಯಾಂಡಲಾ ಸರಿ ಬೋಡುʼ ತುಳು ಹಾಸ್ಯಮಯ ನಾಟಕ, ಪ್ರಾಯೋಜಕರು:ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಹಾಗೂ ಮಹಿಳಾ ಭಜನಾ ಮಂಡಳಿ ಪಡು ಭಟ್ರಕೋಡಿ,
ಮಾರ್ಚ್ 29ರಂದು ಭಜನಾ ಕಾರ್ಯಕ್ರಮ, ಸಂಜೆ 6.00ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಇವರಿಂದ “ಶ್ರೀ ದೇವಿ ಮಹಾತ್ಮೆ) (ಸೇವಾಕರ್ತರು: ಶ್ರೀಮತಿ ಮತ್ತು ಶ್ರೀ ಬಿ. ಚಿತ್ತರಂಜನ್ ರೈ “ಆಶ್ರಯ” ಪಡು),
ಮಾ.30ರಂದು ಬೆಳಗ್ಗೆ ನಾನಾ ತಂಡಗಳಿಂದ ಭಜನೆ, ಮಧ್ಯಾಹ್ನ 2ರಿಂದ 4.30 ಕಲರ್ಸ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ್ ಆಚಾರ್ಯ ಬಳಗದವರಿಂದ ಸಂಗೀತ ಗಾನ ಸಂಭ್ರಮ. ಮಾ.30ರಂದು ಸಂಜೆ 6.30ರಿಂದ ಸಭಾ ಕಾರ್ಯಕ್ರಮ. ರಾತ್ರಿ 8.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಮ್ಮ ಕಲಾವಿದೆರ್ ಬೆದ್ರ ತಂಡದ ಉಮೇಶ್ ಮಿಜಾರ್ ಬಳಗದವರಿಂದ ತೆಲಿಕೆದ ಗೊಂಚಿಲ್ ನಾನ್ ಸ್ಟಾಪ್ ಕಾಮಿಡಿ ಶೋ ನಡೆಯಲಿದೆ
ಮಾ.27ರಂದು ಹೊರೆಕಾಣಿಕೆ ಮೆರವಣಿಗೆ
ಮಾ.27ರಂದು ಸಂಜೆ ಗಂಟೆ 3ಕ್ಕೆ ನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಿಂದ, ಬೊಂಡಂತಿಲ ಕಲ್ಲುಡೇಲು ಕಲ್ಲುಡೇಲು ಶ್ರೀ ಸದಾಶಿವ ದೇವಸ್ಥಾನದಿಂದ, ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದಿಂದ, ಉಳಾಯಿಬೆಟ್ಟು ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನ, ಪರ್ಮಂಕಿ ಶ್ರೀ ಸದಾಶಿವ ದೇವಸ್ಥಾನದಿಂದ, ಮಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರೆಕಾಣಿಕೆ ಹೊರಟು ಪಡು ಬದಿನಡಿ ಶ್ರೀ ಅರಸು ಮುಂಡಿತ್ತಾಯ ಕ್ಷೇತ್ರದಲ್ಲಿ ಸೇರುವುದು. ಸಂಜೆ 4.00ಕ್ಕೆ ಬದಿನಡಿ ದೈವಸ್ಥಾನದಿಂದ ವೈಭವದ ಹಸಿರು ಹೊರೆಕಾಣಿಕೆ ಆರಂಭವಾಗಿ ಸಂಜೆ 5.30ಕ್ಕೆ ಪಡು ಭಟ್ರಕೋಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಆಗಮಿಸಲಿದೆ.
.