ನಟಿ ಶರಣ್ಯ ಶೆಟ್ಟಿ ಹೆಸರಲ್ಲಿ ಹಣಕ್ಕಾಗಿ ಬೇಡಿಕೆ!

ಬೆಂಗಳೂರು: ಹಿರೋಯಿನ್ ಹೆಸರಲ್ಲಿ ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನಕಲಿ ನಂಬರ್ ತೆಗೆದುಕೊಂಡು ಅದಕ್ಕೆ ನಟಿ ಫೋಟೋ ಹಾಕಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ನಟಿ ಶರಣ್ಯ ಶೆಟ್ಟಿ ಹೆಸರು ಬಳಸಿ‌ ವಂಚನೆ ಮಾಡುತ್ತಿದ್ದಾರೆ.

ಶರಣ್ಯ ಶೆಟ್ಟಿಯ ಡಿಪಿಯನ್ನು ಫೋಟೋಗೆ ಹಾಕಿಕೊಂಡು‌ ವಂಚನೆ ನಡೆಸಲಾಗುತ್ತಿದೆ. ಸ್ವಲ್ಪ ಹಣದ‌ ಅವಶ್ಯಕತೆ ಇತ್ತು ಹೀಗಾಗಿ ಹಣ ಇದ್ದರೆ ಕಳಿಸಿ ಎಂದು ವಂಚಕರು ಮೆಸೇಜ್ ಕೂಡ ಮಾಡಿದ್ದಾರೆ. ಬೇರೆ ನಕಲಿ‌ ನಂಬರ್ ಪಡೆದುಕೊಂಡು ಅದರಲ್ಲಿ ಶರಣ್ಯ ಶೆಟ್ಟಿಯ ಹೆಸರು ಬರುವಂತೆ ಮಾಡಿ ಡಿ.ಪಿ ಹಾಕಿದ್ದಾರೆ . ನಂತರ ಇಂತಿಷ್ಟು ಹಣ ಬೇಕು ಎಂದು ಕೇಳಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತಮ್ಮ ಅಸಲಿ ಖಾತೆಯಲ್ಲಿ ನಟಿ‌ ಶರಣ್ಯ ಬರೆದುಕೊಂಡಿದ್ದಾರೆ. ಇದೊಂದು ನಕಲಿ ವಾಟ್ಸ್ ಆ್ಯಪ್‌, ಅದನ್ನು ನಂಬಿ ಯಾರು ಹಣ ಕಳಿಸಬೇಡಿ. ಅಂತಹ ಖದೀಮರ ವಿರುದ್ಧ ನಾನು ಸೈಬರ್ ಕ್ರೈಂ ನಲ್ಲಿ ದೂರು‌ ನೀಡುತ್ತೇನೆ ಎಂದು ಹೇಳಿದ್ದಾರೆ ನಟಿ.

error: Content is protected !!