ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ 201ಕಾಲೇಜು 4 ಲಕ್ಷ ವಿದ್ಯಾರ್ಥಿಗಳಿರುತ್ತಾರೆ. ಈ ಭಾರಿ ಮಾರ್ಚ್ 15 ರಿಂದ 18, 2025 ರವರೆಗೆ ಶಿವಮೊಗ್ಗದ ಜೆಎನ್‌ಎನ್‌ಸಿಇಯಲ್ಲಿ ನಡೆದ ವಿಟಿಯು 26 ನೇ ಅಂತರ ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಶಿಪ್ ನಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ಮಂಗಳೂರು ಇವರು ಹೊಸ ಚರಿತ್ರೆ ಬರೆದಿದೆ.
ಈ ವಿಶ್ವವಿದ್ಯಾಲಯದ ಅಡಿಯಲ್ಲಿ ಮಾನ್ಯ ಶಾಸಕರಾದ ಶ್ರೀ ಮಂಜುನಾಥ ಭಂಡಾರಿ ರವರ ನೇತೃತ್ವದಲ್ಲಿ 2007- 2008 ರಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜು ಮಂಗಳೂರಿನಲ್ಲಿ ಸ್ಥಾಪನೆಯಾಗಿರುತ್ತದೆ.
2008-2009ರಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆರಂಭಿಸಿದ್ದು ಅಂದಿನಿಂದ ಇಂದಿನವರೆಗೆ ಸುಮಾರು 16 ಕ್ರೀಡಾಕೂಟದಲ್ಲಿ ಭಾಗವಹಿಸಿದ ಸುಮಾರು 8 ಬಾರಿ ಓವರ್ ಆಲ್ ಚಾಂಪಿಯನ್ 5 ರನ್ನರ್ಸ್ ಹಾಗೂ 3ನೇ ಭಾರಿ 4 ನೇ ಸ್ಥಾನ ಪಡೆದಿದೆ.
ಇಷ್ಟೊಂದು ಬಾರಿ ಚಾಂಪಿಯನ್ ಆದ ಬೇರೊಂದು ಕಾಲೇಜು ವಿಶ್ವವಿದ್ಯಾಲಯ ಇತಿಹಾಸದಲ್ಲಿಲ್ಲ. ಅದಲ್ಲದೆ,
1. ಪುರುಷರು ವಾಲಿಬಾಲ್ – 7 ಬಾರಿ
2. ಮಹಿಳೆಯರು ವಾಲಿಬಾಲ್ 8 ಬಾರಿ
3. ಥ್ರೋಬಾಲ್ – 9 ಬಾರಿ ರಾಜ್ಯ 4 ಬಾರಿ
4. ಮಹಿಳೆಯರು ಕರಾಟೆ ಚಾಂಪಿಯನ್‌ಗಳು-1 ಬಾರಿ
5. ಭಾರ ಎತ್ತುವುದು – ಮಹಿಳೆಯರು5 ಬಾರಿ ಪುರುಷರು 4 ಬಾರಿ
6. ಮಹಿಳೆಯರು ಪವರ್‌ಲಿಫ್ಟಿಂಗ್ 4 ಬಾರಿ ಪುರುಷರು 2 ಬಾರಿ
7. ಅತ್ಯುತ್ತಮ ಮೈಕಟ್ಟು – 1 ಬಾರಿ
8. ಈಜು ಓಟಗಾರರು 1 ಬಾರಿ
9. ಕುಸ್ತಿ – 5 ಪದಕಗಳು
10. ಚೆಸ್, ಕ್ರಿಕೆಟ್ ಹಾಕಿ,ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ 4 ಬಾರಿ
11. ಪ್ರತೀ ವರ್ಷ 10-14 ವಿದ್ಯಾರ್ಥಿಗಳು ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ WUSHU- ಬೆಳ್ಳಿ ಪದಕ ಹಾಗೂ ಹಲವಾರು ಪದಕಗಳನ್ನು ಪಡೆದಿರುತ್ತಾರೆ.
ರಾಜ್ಯದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದು ಎಂಬುದಾಗಿ ಹೆಸರು ಪಡೆದಿರುವ ಸಹ್ಯಾದ್ರಿ ಕಾಲೇಜ್ ವಿದ್ಯಾಲಯದ ಮಟ್ಟದಲ್ಲಿ ಹಲವಾರು ರಾಂಕ್ ಗಳಿಸಿರುತ್ತದೆ ಅಲ್ಲದೆ ಪ್ಲೇಸ್ಮೆಂಟ್ ಅಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುತ್ತದೆ. ಅತೀ ಹೆಚ್ಚು ಸಂಬಳ 48 ಲಕ್ಷ ಅದರ ವಿದ್ಯಾರ್ಥಿಗಳಿಗೆ ದೊರಕಿರುವುದು ಕಾಲೇಜಿನ ಗುಣಮಟ್ಟವನ್ನು ತೋರಿಸುತ್ತದೆ.
ಶಿಕ್ಷಣದೊಂದಿಗೆ ಕ್ರೀಡಾ, ಕೌಶಲ್ಯವನ್ನು ಕೊಡುವುದು ಕಾಲೇಜಿನ ಮುಖ್ಯನಿರ್ಣಯಗಳಲ್ಲಿ ಒಂದಾಗಿರುತ್ತದೆ. ಈ ಕಾಲೇಜಿನ ಅಭಿವೃದ್ಧಿಗೆ ದುಡಿಯುತ್ತಿರುವ ಕಾಲೇಜಿನ ಚೇರ್ಮನ್ ಹಾಗೂ ಶಾಸಕರಾದ ಶ್ರೀ ಮಂಜುನಾಥ ಭಂಡಾರಿ ಅವರು ಹಾಗೂ ಅವರೊಂದಿಗೆ ಎಲ್ಲಾ ಟ್ರಸ್ಟಿಗಳು , ಪ್ರಾಂಶುಪಾಲರು ಹಾಗೂ ಶಿಕ್ಷಕ ವರ್ಗ ಮುಖ್ಯವಾಗಿ ಈ ಕೀರ್ತಿಯನ್ನು ಗಳಿಸಲು ಮಾರ್ಗದರ್ಶನ ನೀಡುತ್ತಿರುವ ದೈಹಿಕ ನಿರ್ದೇಶಕರಾದ ಶ್ರೀ ಕರ್ಣ ಕುಮಾರ್ ಕೆ.ಎಸ್. ಹಾಗೂ ಶ್ರೀಮತಿ ರಮ್ಯಾ ಪಿ. ಹಾಗೂ ಇದಕ್ಕಿಂತ ಮುಂಚೆ ಮಾರ್ಗದರ್ಶನ ನೀಡಿದಂತಹ ಶ್ರೀಮತಿ ನಿತೀಶ ರೊಡ್ರಿಗಸ್ ಮತ್ತು ಶ್ರೀ ಸದಾನಂದ ಗೌಡ ಇವರ ಮಾರ್ಗದರ್ಶನ ವಿದ್ದು ಈ ಸಾಧನೆಯಲ್ಲಿ ಇವರೆಲ್ಲರ ಸಹಕಾರ ಇರುತ್ತದೆ.