ಕುಳಾಯಿ: ಚಾಲಕನಿಲ್ಲದೆ ಹೋಟೆಲ್ ಗೆ ನುಗ್ಗಿದ ಟ್ಯಾಂಕರ್, ಕಾರ್ ಬೈಕ್ ರಿಕ್ಷಾ ನಜ್ಜುಗುಜ್ಜು!!

ಸುರತ್ಕಲ್ : ರಸ್ತೆ ಬದಿ ನಿಲ್ಲಿಸಿದ್ದ ಟ್ಯಾಂಕರ್ ಏಕಾಏಕಿ ಚಲಿಸಿ ಹೆದ್ದಾರಿ ದಾಟಿ ಹೋಟೆಲ್ ಗೆ ನುಗ್ಗಿ ಪಕ್ಕದಲ್ಲಿದ್ದ ರಿಕ್ಷಾ ಕಾರ್ ಬೈಕ್ ಗಳನ್ನು ಅಪ್ಪಚ್ಚಿ ಮಾಡಿದ ಘಟನೆ ಹೊನ್ನಕಟ್ಟೆ ಜಂಕ್ಷನ್ ನಲ್ಲಿ ಗುರುವಾರ ರಾತ್ರಿ ನಡೆದಿದೆ.
ಕುಳಾಯಿ ಗುಡ್ಡೆ ಹೋಗುವ ರಸ್ತೆಯಲ್ಲಿ ಟ್ಯಾಂಕರ್ ನಿಲ್ಲಿಸಿ ಚಾಲಕ ಹೋಟೆಲ್ ಗೆ ಹೋಗಿದ್ದು ಈ ವೇಳೆ ಟ್ಯಾಂಕರ್ ಸರಣಿ ಅಪಘಾತ ಮಾಡಿದೆ. ಅದೃಷ್ಟವಶಾತ್ ಸ್ಥಳದಲ್ಲಿದ್ದವರು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.

error: Content is protected !!