ಮಂಗಳೂರು: ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರ ಸಂಘಟನೆ ಮತ್ತು ಶ್ರೇಯೋಭಿವೃದ್ಧಿಗಾಗಿ ಪ್ರಥಮ ಬಾರಿಗೆ ಇದೇ ಬರುವ ಫೆ.12ರಿಂದ 14ರವರೆಗೆ ಪ್ರಥಮ ಬಾರಿಗೆ ಮಂಗಳೂರು ನಗರದ ಉರ್ವ ಕ್ರಿಕೆಟ್ ಮೈದಾನದಲ್ಲಿ ಹೊನಲು ಬೆಳಕಿನ “ದೈವಜ್ಞ ಯೂನಿಟಿ ಕಪ್” ಹೊನಲು ಬೆಳಕಿನ ಪಂದ್ಯಾಟ ನಡೆಯಲಿದೆ ಎಂದು ಅಧ್ಯಕ್ಷರಾದ ಎಂ.ಪ್ರಶಾಂತ್ ಶೇಟ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೈವಜ್ಞ ಸಮಾಜದ ಮೊದಲ ಪಂದ್ಯಾಟ ಇದಾಗಿದ್ದು ಸುಮಾರು 12 ಜಿಲ್ಲೆಗಳಿಂದ ಸುಮಾರು 330 ಆಟಗಾರರು ಭಾಗವಹಿಸಲಿರುವರು ಎಂದು ತಿಳಿಸಿದ್ದಾರೆ. ಈ ಪಂದ್ಯಾಟದ ಉಧ್ಘಾಟನೆಯನ್ನು ಪದ್ಮ ಆರ್. ಶೇಟ್ ಹಾಗೂ ಮಾಜಿ ಕ್ರಿಕೆಟ್ ಆಟಗಾರರಾದ ಶಿವಪ್ರಸಾದ್ ಮಂಜುನಾಥ ಶೇಟ್ ರವರು ನಡೆಸಲಿರುವವರರೆಂದು ತಿಳಿಸಿದ್ದಾರೆ.
ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಿಗೆ ಮೊದಲ ಬಹುಮಾನ 99,000 ಸಾವಿರ, ರನ್ನರ್ಸ್ 49,000 ಹಾಗೂ ಉತ್ತಮ ಆಟಗಾರ 5000 ಉತ್ತಮ ಕ್ಯಾಚ್ 5000, ಉತ್ತಮ ಪರ್ಫಾರ್ಮರ್ ಗೆ 5000 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ.
14 ರಂದು ಸಂಘನಿಕೇತನದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು, ಕೈಗಾರಿಕಾ ಉದ್ಯಮಿ ಮತ್ತು ಸಮಾಜ ಸೇವಕ ದಯಾನಂದ ನೇತಾಳ್ಕರ್ ಬೆಳಗಾವಿ ಹಾಗೂ ಶಾಸಕ ಡಿ.ವೇದವ್ಯಾಸ್ ಕಾಮತ್ ರವರು ಸಭಾ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆಯಲ್ಲಿ ಉಪಸ್ಥಿತರಿರುವರು ಎಂದು ತಿಳಿಸಿದರು.
ಸಂಜೆ 5ರಿಂದ 6.30ರವರೆಗೆ ಸಂಗೀತ ಮನೋರಂಜನೆ ಕಾರ್ಯಕ್ರಮ ನಡೆಯಲಿದ್ದು ಈ ಸಂಧರ್ಭದಲ್ಲಿ ದೈವಜ್ಞ ಸಮಾಜದ ಮೂವರು ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ನಿಶಾಂತ್ ಕುಮಾರ್, ಕಾರ್ಯದರ್ಶಿ ಎಂ.ಎಸ್. ಗುರುರಾಜ ಶೇಟ್, ಉಪಕಾಯದರ್ಶಿ ಅರ್ಜುನ್ ಡಿ.ಶೇಟ್, ಎಸ್.ಪ್ರವೀಣ್ ಕುನಾರ್ ರೇವಣಕರ್, ಎಸ್.ಸುಬ್ರಹ್ಮಣ್ಯ ಶೇಟ್ ಹಾಗೂ ರಾಘವೇಂದ್ರ ಶೇಟ್ ರವರು ಉಪಸ್ಥಿತರಿದ್ದರು.