ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಡ್ರಗ್ಸ್ ಜಾಗೃತಿ ಅಭಿಯಾನ


ಉಳ್ಳಾಲ
: ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ ಕಿನ್ಯ ಇದರ ವತಿಯಿಂದ ಡ್ರಗ್ಸ್ ವಿರುದ್ಧ ಜನ ಜಾಗೃತಿ ಅಭಿಯಾನ ಮತ್ತು ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ಕಿನ್ಯ ಅಲ್ ಅಮೀನ್ ಸಭಾಂಗಣದಲ್ಲಿ ನಡೆಯಿತು.

ಡ್ರಗ್ಸ್ ವಿರುದ್ಧ ಜನ ಜಾಗೃತಿ ಅಭಿಯಾನ ಮತ್ತು ರಕ್ತದಾನ ಶಿಬಿರ, ಸಾರಿಗೆ ಇಲಾಖೆಯಿಂದ ಮಾಹಿತಿ ಶಿಬಿರಕ್ಕೆ ಆಯುಷ್ ಜಿಲ್ಲಾ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್ ಕಿನ್ಯ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಯುವ ಸಮುದಾಯ ನಮ್ಮ ದೇಶದ ಭವಿಷ್ಯವಾಗಿದೆ. ಯುವಕರನ್ನು ಕೆಡುಕಿನಕ್ಕೆ ಹೋಗದಂತೆ ನಿಯಂತ್ರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಆರೀಫ್ ಕಿನ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ರಫೀಕ್ ಮಾಸ್ಟರ್ ಅತೂರು ಭಾಗವಹಿಸಿ ಡ್ರಗ್ಸ್ ವಿರುದ್ದ ಜಾಗೃತಿ ‌ಮೂಡಿಸಿದರು.

ಈ ಸಂದರ್ಭದಲ್ಲಿ ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಫಾರೂಕ್ ಕಿನ್ಯ, ಸಂಶುಲ್ ಉಲಮಾ ದಾರುಸ್ಸಲಾಮ್ ವಾದಿತೈಬ ಇದರ ಕೋಶಾಧಿಕಾರಿ ಅಬುಸಾಲಿ ಹಾಜಿ, ನ್ಯಾಯವಾದಿ ಶೈಕ್ ಇಸಾಕ್ ದೇರಳಕಟ್ಟೆ, ಕಿನ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಜಿಲ್ಲಾ ಕೆಡಿಪಿ ಸದಸ್ಯ ಹಮೀದ್ ಕಿನ್ಯ, ಟ್ರಾಫಿಕ್ ಇನ್ಸ್ಪೆಕ್ಟರ್ ಓಂದಾಸ್,ಯೆನೆಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ರಕ್ತ ನಿಧಿ ಮುಖ್ಯಸ್ಥೆ ಡಾ ಮೇಘನ, ,ಗೋಲ್ಡನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಅಬ್ಬಾಸ್ ಹಾಜಿ, ಕಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷ ಆಸೀಫ್ ಲೋನವಾಲ,ಕುತುಬಿಯ ಓಲ್ಡ್ ಸ್ಟೂಡೆಂಟ್ ಅಸೋಸಿಯೇಷನ್ ಅಧ್ಯಕ್ಷ ಅಶ್ರಫ್, ಅನ್ಸಾರುಲ್ ಮಸಾಕೀನ್ ಕಾರ್ಯದರ್ಶಿ ಮುಶಾಹಿದ್ ಬೆಳರಿಂಗೆ,ಅಜಾದ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷೊ ಜಲೀಲ್ ಕುರಿಯ, ಅನ್ಸಾರುಲ್ ಮುಸ್ಲಿಮೀನ್ ಅಧ್ಯಕ್ಷ ಹನೀಫ್ ಮೀಂಪ್ರಿ, ಶೇಖ್ ಮರ್ಕಝ್ ಅಧ್ಯಕ್ಷ ಅಬೂಬಕ್ಕರ್ ಉಪಸ್ಥಿತರಿದ್ದರು. ಸದಸ್ಯ ಅಬ್ಬಾಸ್ ಕಿನ್ಯ ಸ್ವಾಗತಿಸಿದರು. ಸದಸ್ಯ ಇಬ್ರಾಹಿಂ ಖಲೀಲ್ ಕಿನ್ಯ ವಂದಿಸಿದರು. ಕಾರ್ಯದರ್ಶಿ ಪ್ರೋ. ಅಶ್ರಫ್ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು.

error: Content is protected !!