ಕಿನ್ನಿಗೋಳಿ: ತನ್ನದೇ ಮೂವರು ಮಕ್ಕಳನ್ನು ಬಾವಿಗೆ ದೂಡಿ ಕೊಲೆಗೈದಿದ್ದ ಪಾಪಿ ಅಪ್ಪನಿಗೆ ಮರಣ ದಂಡನೆ ವಿಧಿಸಿದ ನ್ಯಾಯಾಲಯ!

ಸುರತ್ಕಲ್: ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ತಂದೆಯೋರ್ವ ತನ್ನ ಮೂರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದಿದ್ದ ಘಟನೆ 2022ರ ಜೂನ್ 23ರಂದು ಮೂಲ್ಕಿ ಠಾಣಾ ವ್ಯಾಪ್ತಿಯ ಎಸ್ ಕೋಡಿ ಬಳಿ ನಡೆದಿತ್ತು.
ತಂದೆ ವಿಜೇಶ್ ಶೆಟ್ಟಿಗಾರ್ ಎಂಬಾತ ಮಕ್ಕಳಾದ ರಶ್ಮಿತಾ(14), ಉದಯ್ (11), ದಕ್ಷಿತ್ (04)ರನ್ನು ಬಾವಿಗೆ ತಳ್ಳಿ ಕೊಂದು ಹಾಕಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಸಾರಿದ್ದು ಆತನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕೌಟುಂಬಿಕ ಸಮಸ್ಯೆ ಘಟನೆಗೆ ಕಾರಣ ಎನ್ನಲಾಗಿದ್ದು, ಮಕ್ಕಳನ್ನು ಬಾವಿಗೆ ತಳ್ಳಿದ ಬಳಿಕ ವಿಜೇಶ್ ಶೆಟ್ಟಿಗಾರ್ ತನ್ನ ಪತ್ನಿಯನ್ನು ಎಳೆದುಕೊಂಡು ಹೋಗಿ ಒಟ್ಟಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಸ್ಥಳೀಯರು ತಕ್ಷಣ ಧಾವಿಸಿ ವಿಜೇಶ್ ಮತ್ತು ಆತನ ಪತ್ನಿಯನ್ನ ರಕ್ಷಿಸಿದ್ದರೂ ಮೂವರು ಮಕ್ಕಳು ಮಾತ್ರ ಅದಾಗಲೇ ಸಾವನ್ನಪ್ಪಿದ್ದರು.ವಿಜೇಶ್ ಪದ್ಮನ್ನೂರು ಬಳಿ ಹೂವಿನ ವ್ಯಾಪಾರ ‌ನಡೆಸುತ್ತಿದ್ದ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.
ಈ ಪ್ರಕರಣವು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 32 ಸಾಕ್ಷಿದಾರರನ್ನು ವಿಚಾರಿಸಲಾಗಿರುತ್ತದೆ. ಈ ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿಯ ವಿರುದ್ಧ ಅಪರಾಧವು ಸಾಬೀತಾಗಿದೆ
ಎಂದು ತೀರ್ಮಾನಿಸಿ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಂಧ್ಯಾ ಎಸ್
ಭಾರತೀಯ ದಂಡ ಸಂಹಿತೆ ಕಲಂ:“ 302 ರಡಿಯ ಅಪರದಕ್ಕೆ ಗಲ್ಲು ಶಿಕ್ಷೆ ಮತ್ತು ಭಾರತೀಯ ದಂಡ ಸಂಹಿತೆ ಕಲಂ: 307 ರಡಿಯ ಅಪರದಕ್ಕೆ 10 ವರ್ಷಗಳ ಕಾರಾಗೃಹವಾಸದ ಶಿಕ್ಷೆಯನ್ನು
ವಿಧಿಸಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಎಲ್ಲಾ ಸಾಕ್ಷಿದಾರರ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕರಾದ ಮೋಹನ್ ಕುಮಾರ್ బి ಅವರು ವಾದವನ್ನು ಮಂಡಿಸಿದ್ದಾರೆ.

error: Content is protected !!