ಮಂಗಳೂರು: ಸ್ತ್ರೀ ಜಾಗೃತಿ ಸಮಿತಿ ಮತ್ತು ಮಹಿಳಾ ಗೃಹ ಕಾರ್ಮಿಕರ ಸಬಲೀಕರಣ ಯೋಜನೆ ಮಂಗಳೂರು ಇದರ 13ನೇ ವಾರ್ಷಿಕೋತ್ಸವ ಹೊಸ ಬೆಳಕು ಕಾರ್ಯಕ್ರಮ ಕುಂಜತ್ತಬೈಲ್ ಎಚ್ ಎಂ.ಸಿ ಮೈದಾನದಲ್ಲಿ ನಡೆಯಿತು.
13ನೇ ವಾರ್ಷಿಕೋತ್ಸವ ಹೊಸ ಬೆಳಕು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಕಲಿ ಯುಗದಲ್ಲಿ ಸಂಘಟನೆಗಿಂತ ದೊಡ್ಡದಾದ ಶಕ್ತಿ ಇನ್ನೋಂದು ಇಲ್ಲ. ಗೃಹ ಕಾರ್ಮಿಕರು ಸಂಘಟಿತರಾಗಿದ್ದು ಉತ್ತಮ ಬೆಳವಣಿಗೆ. ನನ್ನ ಜೀವನದಲ್ಲಿ ಗೃಹ ಕಾರ್ಮಿಕರ ಸಂಘಟನೆ ಅಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪ್ರಥಮ ಎಂದು ಹೇಳಿದರು.
ಮಂಗಳೂರು ನಗರ ಪಾಲಿಕೆಯ ಸದಸ್ಯ ಶರತ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಂಸಾದ್ ಕುಂಜತ್ತಬೈಲ್ ರವರು ನಿರಂತರ ಮಕ್ಕಳು ಮತ್ತು ಮಹಿಳೆಯರ ಪರ ಹೋರಾಟ ನಡೆಸುತ್ತಾ ಬಂದವರು. ಅವರಿಗೆ ನಾವೆಲ್ಲರೂ ಪ್ರೊತ್ಸಾಹ ನೀಡಬೇಕು ಎಂದು ಹೇಳಿದರು.
ಸ್ತ್ರೀ ಜಾಗೃತಿ ಸಮಿತಿ, ಗೃಹ ಕಾರ್ಮಿಕರ ಹಕ್ಕುಗಳ ಯೂನಿಯನ್ ಕಾರ್ಯದರ್ಶಿ ಗೀತಾ ಮೆನನ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ ಸರಕಾರ ಗೃಹ ಕಾರ್ಮಿಕರಿಗೆ ಲೇಬರ್ ಕಾಡ್೯ ನೀಡಿಲ್ಲ. ಅಧಿವೇಶನದಲ್ಲಿ ಗೃಹ ಕಾರ್ಮಿಕರ ಬಗ್ಗೆ ಚರ್ಚೆಯಾಗಬೇಕು. ಮಂಗಳೂರು ಬೆಂಗಳೂರು ಬೆಳಗಾವಿ ಗಳಲ್ಲಿ ಗೃಹ ಕಾರ್ಮಿಕ ಸಂಘಟನೆ ಸ್ಥಾಪಿಸುವಲ್ಲಿ ನಾವು ಯಶಸ್ವಿಯಾಗಿದೆವೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಗೃಹ ಕಾರ್ಮಿಕರ ಸಂಘ ಸ್ಥಾಪಿಸುವ ಮೂಲಕ ಗೃಹ ಕಾರ್ಮಿಕರ ಪರ ಹೋರಾಟ ಮುಂದುವರಿಸುತ್ತೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ನಗರ ಪಾಲಿಕೆಯ ಮಾಜಿ ಮೇಯರ್ ಸುನಂದ ಬೋಳೂರು ರವರಿಗೆ “ಹೊಸಬೆಳಕು ಪ್ರಶಸ್ತಿ-2024” ಪ್ರದಾನ ಮಾಡಲಾಯಿತು.
ಕಾವೂರು ಪೋಲಿಸ್ ಠಾಣಾಧಿಕಾರಿ ನಳಿನಾಕ್ಷಿ, ದ.ಕ ಉಪವಿಭಾಗದ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತಾವ್ರೂ,
ಶಿಶು ಮತ್ತು ಮಹಿಳಾ ಯೋಜನಾಧಿಕಾರಿ ಶ್ವೇತಾ, ಕರ್ನಾಟಕ ರಾಜ್ಯ ಆಹಾರ ಅಯೋಗದ ಸದಸ್ಯ ಸುಮಂತ್, ಮಾಜಿ ಶಾಸಕ ಮೊಯ್ದಿನ್ ಬಾವಾ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಲತಾ. ಆರ್ ಕೋಟ್ಯಾನ್, ಕುಂಜತ್ತಬೈಲ್ ನಂದಿನಿ ಮಹಿಳಾ ಮಂಡಲ ಅಧ್ಯಕ್ಷ ಗೀತ ಶೇಖರ್, ಸಮಾಜ ಸೇವಕಿ ನಂದಪಾಯಸ್, ಜ್ಯೋತಿನಗರದ ವಿದ್ಯಾ ಜೋತಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಸಿಸ್ಟರ್ ವಿಜಯ ಕ್ರಾಸ್ತ ಎ.ಸಿ, ಸ್ಥಳೀಯ ವೈಧ್ಯೆ ಡಾ. ಧೃತಿ, ಕುಂಜತ್ತಬೈಲ್ ರಂಗಸ್ವರೂಪ(ರಿ) ಅಧ್ಯಕ್ಷ ರಹ್ಮಾನ್ ಖಾನ್ ಕುಂಜತ್ತಬೈಲ್ ಅತಿಥಿಯಾಗಿ ಭಾಗವಹಿಸಿದರು.
ಸಂಚಾಲಕಿ ಡಾ.ಸಂಸಾದ್ ಕುಂಜತ್ತಬೈಲ್, ಅಧ್ಯಕ್ಷ ಸೀತಮ್ಮ, ಕಾರ್ಯದರ್ಶಿ ಕವಿತಾ ಶ್ರೀರಾಮ್, ಉಪಸ್ಥಿತರಿದ್ದರು.
ಭಾರತಿ ಕುಂಜತ್ತಬೈಲ್ ಸ್ವಾಗತಿಸಿದರು. ಶರತ್ ಜ್ಯೋತಿನಗರ ವಂದಿಸಿದರು.
ಕಾರ್ಯಕ್ರಮ ಉಸ್ತುವಾರಿ ಹನಿಷಾ ಸವಾದ್ ಮತ್ತು ಶಿವಪ್ರಸಾದ್ ಕುಡ್ಲ ಕಾರ್ಯಕ್ರಮ ನಿರೂಪಿಸಿದರು.