ಮೂಲ್ಕಿ: ಪರಿಸರ ಯೋಗ್ಯ ಕಟ್ಟಡ ನಿರ್ಮಾಣ ( ಗ್ರೀನ್ ಬಿಲ್ಡಿಂಗ್ )ಹಾಗೂ ಪರಿಣಿತ ವಿಜ್ಞಾನ ಸಲಹೆ /ಪ್ರಮಾಣ ಪತ್ರ ನೀಡುವ Confederation of Indian Industry ( CII) ನವ ದೆಹಲಿ ನ ಅಂಗ ಸಂಸ್ಥೆ ಆದ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್, ಹೈದರಾಬಾದನ ಸದಸ್ಯರಾಗಿ ಶಾರದಾ ಅಸೋಸಿಯೇಟ್ಸ್ ಮುಲ್ಕಿ ಇದರ ಮುಖ್ಯಸ್ಥರು ಹಾಗೂ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮುಲ್ಕಿ ಇದರ ಸ್ಥಾಪಕ ಅಧ್ಯಕ್ಷ ಇಂಜಿನಿಯರ್ ಮುಲ್ಕಿ ಜೀವನ್ ಕೆ ಶೆಟ್ಟಿ ನೇಮಕ ಹೊಂದಿದ್ದಾರೆ.
1996 ರಿಂದ ಅನೇಕ ಕಟ್ಟಡ ನಿರ್ಮಾಣದ ಅನುಭವ ಹೊಂದಿದ ಶ್ರೀಯುತರು ನಿಟ್ಟೆ ಮಹಾಲಿಂಗ ಅಡ್ಯಂತಾಯ ತಾಂತ್ರಿಕ ವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿದ್ದಾರೆ.