ಉಳ್ಳಾಲ-ಸೋಮೇಶ್ವರ ರೆಸಾರ್ಟ್ ಈಜುಕೊಳದಲ್ಲಿ ಮೂವರು ವಿದ್ಯಾರ್ಥಿನಿಯರ ದಾರುಣ ಅಂತ್ಯ!

ಮಂಗಳೂರು: ಉಳ್ಳಾಲ ಸೋಮೇಶ್ವರ್ರದಲ್ಲಿನ ಖಾಸಗಿ ಬೀಚ್ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿದ ಘಟನೆ ನಡೆದಿದೆ.
ಮೈಸೂರು ಮೂಲದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ನಿಶಿತ ಎಂಡಿ (21), ಪಾರ್ವತಿ ಎಸ್ (20) ಹಾಗೂ ಕೀರ್ತನಾ ಎನ್ (21) ಮೃತ ಯುವತಿಯರು. ಶನಿವಾರ ಬೆಳಗ್ಗೆ ಬೀಚ್ ರೆಸಾರ್ಟ್‌ಗೆ ಆಗಮಿಸಿ ಮೂವರು ಯುವತಿಯರು ಕೊಠಡಿ ಪಡೆದಿದ್ದರು. ಈಜಲೆಂದು ಈಜುಕೊಳಕ್ಕೆ ತೆರಳಿದ್ದ ವೇಳೆ ಮುಳುಗಿ ಸವನ್ನಪ್ಪಿದ್ದಾರೆ.

error: Content is protected !!