ಸೂರಿಂಜೆಯಲ್ಲಿ ದೀಪಾವಳಿಯ ಮೆರುಗು ಹೆಚ್ಚಿಸಲು “ಗೂಡುದೀಪ” ಸ್ಪರ್ಧೆ

ಮಂಗಳೂರು: ಸೂರಿಂಜೆಯಲ್ಲಿನ ಶ್ರೀ ಶಿರಿಡಿ ಸಾಯಿ ಬಾಬಾ ಮಂದಿರದಲ್ಲಿ ಶ್ರೀ ಶಿರಿಡಿ ಸಾಯಿ ಫ್ರೆಂಡ್ಸ್ ಆಯೋಜನೆಯಲ್ಲಿ ದೀಪಾವಳಿ ಹಬ್ಬದ ಮೆರುಗನ್ನು ಹೆಚ್ಚಿಸಲು “ಗೂಡುದೀಪ” ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸೂರಿಂಜೆ, ಕಾಟಿಪಳ್ಳ, ಕೃಷ್ಣಾಪುರ, ಕಿನ್ನಿಗೋಳಿ, ಪಕ್ಷಿಕೆರೆ, ಚೇಳಾಯರು, ಶಿಬರೂರು, ಕೈಕಂಬ, ಕುತ್ತೆತ್ತೂರು ಪರಿಸರ ದವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ.
ದಿನಾಂಕ 3.11.24 ರ ಸಾಯಂಕಾಲ 4 ಗಂಟೆಯಿಂದ 7 ಗಂಟೆವರೆಗೂ ತಾವು ತಯಾರಿಸಿದ ಗೂಡುದೀಪವನ್ನು ತಂದು ಮಂದಿರದ ಆಯೋಜಕರು ನಿಗದಿಪಡಿಸಿದ ಸ್ಥಳದಲ್ಲಿ ಅಳವಡಿಸುವುದು.
ಗೂಡು ದೀಪವನ್ನು ತಮ್ಮ ತಮ್ಮ ಜಾಗದಲ್ಲಿ ತಯಾರಿಸಿ ತರಬಹುದಾಗಿದೆ.
ಪರಿಸರಸ್ನೇಹಿ ಮತ್ತು ಸಾಂಪ್ರದಾಯಿಕ ಗೂಡುದೀಪಕ್ಕೆ ಆದ್ಯತೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರೇಕ್ಷಕರಿಗೆ ಮತ ನೀಡಲು ವ್ಯವಸ್ಥೆ ಕಲ್ಪಿಸಲಾಗುವುದು.
ಪ್ರೇಕ್ಷಕರು ನೀಡಿದ ಮತಗಳ ಆಧಾರದ ಮೇಲೆ ಪ್ರಥಮ, ದ್ವಿತೀಯ, ತೃತೀಯ ಹಾಗೂ 10 ಇತರೇ ವಿಜೇತರೆಂದು ಘೋಷಿಸಿ ಬಹುಮಾನ ವಿತರಿಸಲಾಗುವುದು.
ಗೂಡುದೀಪ ಸ್ಪರ್ಧೆಗೆ ಭಾಗವಹಿಸಲು ಇಚ್ಚಿಸುವವರು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ನಿಮ್ಮ ಹೆಸರು, ಮೊಬೈಲ್ ನಂಬರ್ ಮತ್ತು ಊರು ದಿನಾಂಕ 30.10.2024 ರ ಒಳಗಾಗಿ ವಾಟ್ಸ್ ಅಪ್ ಮುಖಾಂತರ ಕಳುಹಿಸಬೇಕೆಂದು ವಿನಂತಿ.
ಮೊಬೈಲ್ ಸಂಖ್ಯೆ : 8197574625.
ಮೊದಲನೇ ಬಹುಮಾನ : ರೂ. 5000
ಎರಡನೇ ಬಹುಮಾನ ರೂ. 3000
ತೃತೀಯ ಬಹುಮಾನ ರೂ. 2000
10 ಸಮಾಧಾನಕರ ಬಹುಮಾನಗಳು ಇರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

error: Content is protected !!