ಮಂಗಳೂರು: ನಗರದ ಕುಟುಂಬ ವೈದ್ಯರ ಸಂಘಟನೆ( ಎಂಬಿಬಿಎಸ್ ಜನರಲ್ ಪ್ರಾಕ್ಟೀಷನರ್ಸ್) ಯ ಆಶ್ರಯದಲ್ಲಿ ಜರುಗಿದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನ ನರಮಾನಸಿಕ ವಿಭಾಗದ ತಜ್ಞರಾದ ಡಾ ರಾಹುಲ್ ಮಾಧವ ರಾವ್ ಮಾತಾಡುತ್ತಾ, ನರ ಹಾಗೂ ಮಾನಸಿಕ ರೋಗಗಳ ಪತ್ತೆ ಹಚ್ಚುವಿಕೆ ಹಾಗೂ ನಿಬಾವಣೆಯಲ್ಲಿ ಕುಟುಂಬ(mbbs) ವೈದ್ಯರ ಪಾತ್ರ ದೊಡ್ಡದು ಎಂಬ ಅಭಿಪ್ರಾಯ ಪಟ್ಟರು. ಸಂಕಿರಣದ ಸಂಚಾಲಕರಾದ ಹಿರಿಯ ನರ ಮಾನಸಿಕ ರೋಗಗಳ ತಜ್ಞ ಡಾ ಮಾಧವ ರಾವ್ ಗೋಷ್ಠಿಯಲ್ಲಿ ತಜ್ಞ ಮಾಹಿತಿ ಹಂಚಿಕೊಂಡರು.
ಇಪ್ಪತ್ತರ ಸಂಭ್ರಮದಲ್ಲಿ ಇರುವ ಮಂಗಳೂರು ಕುಟುಂಬ ವೈದ್ಯರ ಸಂಘಟನೆ, ನೂರು ವರ್ಷಗಳ ಹೊಸ್ತಿಲಲ್ಲಿ ಇರುವ ಐಎಂಎ ಯ ಕುಟುಂಬ ವೈದ್ಯರ ( ima ಕಾಲೇಜ್ ಆಫ್ ಜನರಲ್ ಪ್ರಾಕ್ಟೀಸ್) ರಾಜ್ಯ ಸಮ್ಮೇಳನವನ್ನ ಹನ್ನೆರಡು ವರ್ಷಗಳ ಬಳಿಕ ಮಂಗಳೂರಲ್ಲಿ ಅಕ್ಟೋಬರ್ ೨೦ ರಂದು ಹಮ್ಮಿಕೊಳ್ಳಲಾಗಿದೆ ಎಂದು ಕುಟುಂಬ ವೈದ್ಯರ ಸಂಘಟನೆಯ ಅದ್ಯಕ್ಷರೂ, ಸಮ್ಮೇಳನದ ಅದ್ಯಕ್ಷರೂ ಆದ ಡಾ ಎಂ ಅಣ್ಣಯ್ಯ ಕುಲಾಲ್ ಉಳತೂರು ತಿಳಿಸಿದರು.
ಸಮ್ಮೇಳನದ ವಿಚಾರ ಸಂಕಿರಣ ಉದ್ಘಾಟನೆ ಹಾಗೂ ಸಮ್ಮೇಳನದ ಉದ್ಘಾಟನೆಗೆ ಆರೋಗ್ಯ ಹಾಗೂ ಹೃದಯ ತಜ್ಞ ಸಂಸದ ಡಾ ಸಿ ಏನ್ ಮಂಜುನಾಥ್, ಆರೋಗ್ಯ ಮಂತ್ರಿ ಡಾ ದಿನೇಶ್ ಗುಂಡೂರಾವ್. ಸ್ಪೀಕರ್ ಶ್ರೀ ಯು ಟಿ ಖಾದರ್, ಸಂಸದರಾದ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶ್ರೀ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಡಾ ಭರತ್ ಶೆಟ್ಟಿ, ಮೇಯರ್ ಡಾ ಸುಧೀರ್ ಶೆಟ್ಟಿ, ಸ್ಥಳೀಯ ಕಾರ್ಪೋರೇಟರ್ ಶ್ರೀ ವಿನಯ್ ರಾಜ್ ಜೊತೆ ರಾಜ್ಯ ಕೆಯೆಂಸಿ ಅಧ್ಯಕ್ಷರಾದ ಡಾ ಯೋಗಾನಂದ ರೆಡ್ಡಿ , ಐಎಂಎ ಮತ್ತು ಐಎಂಎ ಸಿಜಿಪಿ ಯ ರಾಷ್ಟ್ರ ರಾಜ್ಯ ಹಾಗೂ ಮಂಗಳೂರಿನ ಪದಾದಿಕಾರಿಗಳು ಭಾಗವಹಿಸುತ್ತಾರೆ. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 300 ಕ್ಕೂ ಅಧಿಕ ಕುಟುಂಬ ವೈದ್ಯರು ಹಾಗೂ ಆಸಕ್ತ ಎಂಬಿಬಿಎಸ್ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಡಾ ಸದಾಶಿವ ಪೋಲಾನಯ ಅವರ ಗೌರವ ಅದ್ಯಕ್ಷತೆಯಲ್ಲಿ ಸಮಿತಿಯನ್ನ ರಚಿಸಲಾಗಿದ್ದು, ಡಾ ಜಿಕೆ ಭಟ್ ಸಂಕಬಿತ್ತಿಲು ಸಂಘಟನಾ ಕಾರ್ಯದರ್ಶಿಯಾಗಿ, ಡಾ ಜೆ ಎನ್ ಭಟ್ ಗೋಷ್ಠಿಗಳ ಉಸ್ತುವಾರಿಯಾಗಿ, ಡಾ ಶೇಖರ್ ಪೂಜಾರಿ ಕೋಶದಿಕಾರಿಯಾಗಿ ಇತರ ಸಮಿತಿಯ ಸದಸ್ಯರ ಜೊತೆ ಸಮ್ಮೇಳನದ ಯಶಸ್ಸಿಗಾಗಿ ದುಡಿಯುತ್ತಿದ್ದು ಸರ್ವರೂ ಸಹಕರಿಸಬೇಕುಎಂದು ಅದ್ಯಕ್ಷ ಡಾ ಕುಲಾಲ್ ಮನವಿ ಮಾಡಿಕೊಂಡರು. ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.