ಮುಲ್ಕಿ: ಇಲ್ಲಿನ ಒಡೆಯರಬೆಟ್ಟು ಮನೆತನದ ಹಿರಿಯ ಸದಸ್ಯರುಗಳಲ್ಲಿ ಒಬ್ಬರಾದ ಉಮಾ ಪುಂಡಲೀಕ ಕಾಮತ್(87) ಅಲ್ಪ ಕಾಲದ ಅಸೌಖ್ಯದಿಂದ ಶಿವಮೊಗ್ಗದ ಪುತ್ರನ ಮನೆಯಲ್ಲಿ ಸೋಮವಾರ ರಾತ್ರಿ ನಿಧನ ಹೊಂದಿದರು.
ಅವರು ಓರ್ವ ಪುತ್ರಿ ಹಾಗೂ ಮೂವರು ಪುತ್ರರನ್ನು ಅಗಲಿದ್ದು ಸಂಗೀತ ವಿಶಾರದೆಯಾಗಿ, ವಿಶೇಷ ಕಸೂತಿ ಪರಿಣಿತೆಯಾಗಿ, ಪಾಕ ಸಿದ್ದಹಸ್ತೆಯಾಗಿ ಯುವ ಜನತೆಗೆ ಸಹೃದಯ ತಾಯಿಯಾಗಿ ಸಂಪನ್ಮೂಲವ್ಯಕ್ತಿಯಾಗಿ ಮಹಿಳಾ ಸಮಾಜ ಮುಂದಾಳುವಾಗಿ ಪ್ರಸಿದ್ದರಾಗಿದ್ದರು.