ಕಿನ್ನಿಗೋಳಿ: ಆಧುನಿಕ ಯುಗದಲ್ಲಿ ಸಾವಯವ ಕೃಷಿ ಪದಾರ್ಥಗಳನ್ನು ಪ್ರೋತ್ಸಾಹಿಸು ಅಗತ್ಯತೆ ಇದೆ ಎಂದು ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸೂರ್ಯಕುಮಾರ್ ಹಳೆಯಂಗಡಿ ಹೇಳಿದರು ಅವರು ಕಿನ್ನಿಗೋಳಿಯ ಸರಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ನಡೆದ ಮಾವು ಹಲಸು ಮೇಳದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮೇಳದಲ್ಲಿ ವಿವಿಧ ಬಗೆಯ ಹಲಸು,ಮಾವು, ಹಲಸಿನ ವಿವಿಧ ಪದಾರ್ಥಗಳು, ತರಕಾರಿ ಬೀಜಗಳು, ಹಪ್ಪಳ ಸಂಡಿಗೆ ಮತ್ತಿತರ ಪದಾರ್ಥಗಳ ಅಂಗಡಿಗಳು ಇದ್ದು ಹೆಚ್ಚಾಗಿ ಸಾವಯವ ಪದಾರ್ಥಗಳ ಮಳಿಗೆಗಳು ಇದ್ದವು. ಕಾರ್ಯಕ್ರಮದಲ್ಲಿ
ಯೋಗೀಶ್ ಆಚಾರ್ಯ, ಪುರುಶೋತ್ತಮ ಕೋಟ್ಯಾನ್, ಪ್ರಥ್ವಿರಾಜ್ ಆಚಾರ್, ದಿನೇಶ್ ಆಚಾರ್ಯ, ಸ್ವರಾಜ್ ಶೆಟ್ಟಿ, ಮಿಥುನ್ ಕೊಡೆತ್ತೂರು, ಪ್ರಭಾಕರ ಆಚಾರ್ಯ, ಪದ್ಮನಾಭ ಶೆಟ್ಟಿ, ದಾಮೋದರ ಶೆಟ್ಟಿ, ಶಶಿಕಲಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.