ಯುವಕನ ಚಿಕಿತ್ಸೆಗೆ “ಶಿವಸಂಜೀವಿನಿ” ನೆರವು!

ಮುಲ್ಕಿ: ಪಕ್ಷಿಕೆರೆ ಕಾಪಿಕಾಡು ನಿವಾಸಿ ಬಡಕುಟುಂಬದ ರವಿ ತನ್ನ ತಂದೆ  ತಾಯಿಗೆ ಆಧಾರಸ್ತಂಭವಾಗಿದ್ದು,ಕೆಲಸಕ್ಕೆ ತೆರಳಿದ್ದ ವೇಳೆ ರಕ್ತದೊತ್ತಡ ಕಡಿಮೆಯಾಗಿ ಅಲ್ಲೇ ಕುಸಿದು ಪ್ರಜ್ಞಾಹೀನ ಸ್ಥಿತಿಗೆ ತಲುಪಿ ಇದೀಗ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ತಲೆಯ ಭಾಗದ ಸರ್ಜರಿ ನಡೆಸಬೇಕಾಗಿರುವ ಕಾರಣ ಲಕ್ಷಾಂತರ ರೂಪಾಯಿ ಖರ್ಚಾಗಬಹುದು..ಅಷ್ಟು ದೊಡ್ಡ ಮೊತ್ತದ ಹಣ ಹೊಂದಿಸುವಲ್ಲಿ ಇವರ ತಂದೆ ತಾಯಿ ಅಶಕ್ತರಾಗಿದ್ದು ನಮ್ಮ ಶಿವಸಂಜೀವಿನಿಯ ಸಹಾಯಕ್ಕಾಗಿ ವಿನಂತಿಸಿಕೊಂಡಿದ್ದಾರೆ ಆದ್ದರಿಂದ ರವಿಯವರ ಮನೆಗೆ ಹೋಗಿ ಶಿವಸಂಜೀವಿನಿ ವತಿಯಿಂದ ರೂ.25,000 ಸಹಾಯಧನವನ್ನು ನೀಡಲಾಯಿತು. ಪದಾಧಿಕಾರಿಗಳು ಉಪಸ್ಥಿತರಿದ್ದರು.
error: Content is protected !!