ಮೇ 4ರಂದು “ಆಡ್ ಬ್ಲೂ” ಫಿಲ್ಲಿಂಗ್ ಸ್ಟೇಷನ್ ಕುಳಾಯಿ ಬಳಿ ಶುಭಾರಂಭ

ಸುರತ್ಕಲ್: ಕೇರಳದ ನಂಬರ್ 1 ಇಂಜಿನ್ ಆಯಿಲ್ ಆಡ್ ಬ್ಲೂ ತನ್ನ ಫಿಲ್ಲಿಂಗ್ ಸ್ಟೇಷನ್ ಅನ್ನು ಮೇ 4ರಿಂದ ಕುಳಾಯಿ ಬಳಿ ಶುಭಾರಂಭಗೊಳಿಸಲಿದೆ ಎಂದು ಮುಹಮ್ಮದ್ ಸುಹೈಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
200 ಸಿಸಿ ಯಿಂದ ಹೆಚ್ಚಿನ ಯಾವುದೇ ವಾಹನಗಳಿಗೆ ಈ ಆಯಿಲ್ ಅನ್ನು ಬಳಕೆ ಮಾಡಬಹುದಾಗಿದೆ. “ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಆಡ್ ಬ್ಲೂ ಪೂರೈಕೆಯಾಗುತ್ತಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಫಿಲ್ಲಿಂಗ್ ಸ್ಟೇಷನ್ ಗೆ ಅನುಮತಿ ಸಿಕ್ಕಿದೆ. ಬಿಎಸ್ 4, 6 ಮಾದರಿಯ ಲಾರಿ, ಬಸ್, ಟ್ರಕ್ ಗಳಿಗೆ 100% ಪ್ರೀಮಿಯಂ ಗುಣಮಟ್ಟದ ಆಯಿಲ್ ಇದಾಗಿದ್ದು ಟ್ರಕ್ ಮಾಲಕರಿಗಾಗಿ ಇದು ಪೂರಕವಾಗಿದೆ” ಎಂದು ಹೇಳಿದರು.
ಗಲ್ಫ್, ಇಂಡಿಯನ್ ಆಯಿಲ್ ಬ್ರಾಂಡ್ ನಷ್ಟೇ ಗುಣಮಟ್ಟ ಹೊಂದಿರಲಿದ್ದು ಬೆಲೆ ಕೂಡ ಸಾಮಾನ್ಯವಾಗಿರಲಿದೆ. 5, 20 ಲೀಟರ್ ಕ್ಯಾನ್ ಗಳಲ್ಲಿ ಮಾತ್ರವಲ್ಲದೆ 210 ಲೀ. ಬ್ಯಾರೆಲ್, 1000 ಲೀ. ಐಬಿಸಿ ಟ್ಯಾಂಕ್ ಕೂಡ ಲಭ್ಯವಿರಲಿದೆ ಎಂದವರು ಹೇಳಿದರು.
ಮೇ 4ರಂದು ಬೆಳಗ್ಗೆ 11 ಗಂಟೆಗೆ ಸಯ್ಯದ್ ಕೆ ಎಸ್ ಅಟ್ಟಕ್ಕೋಯ ತಂಞಳ್ ಕುಂಬೋಳ್, ಸಯ್ಯದ್ ಜಾಫರ್ ಸಯ್ಯದ್ ತಂಞಳ್ ಕುಂಬೋಳ್, ಕಾಟಿಪಳ್ಳ ಚಾಮುಂಡೇಶ್ವರಿ ಗುಳಿಗ ಸನ್ನಿಧಾನದ ಪ್ರಧಾನ ಅರ್ಚಕ ಅಶೋಕ್ ಅಮೀನ್ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಹಾಜರಿರಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಆಟೋಗ್ರೇಡ್ ಫ್ರಾಂಚೈಸಿ ಮಾಲಕ ಮುಹಮ್ಮದ್ ಸುಹೈಲ್, ಝೋನಲ್ ಜನರಲ್ ಮೆನೇಜರ್ ಅಶ್ವಿನ್, ಕೇರಳ ಸೇಲ್ಸ್ ಮೆನೇಜರ್ ಸೂರಜ್, ದಕ್ಷಿಣ ಭಾರತ ಸೇಲ್ಸ್ ಕೋ ಆರ್ಡಿನೇಟರ್ ಫಹಾರ್, ಸೇಲ್ಸ್ ಎಕ್ಸಿಕ್ಯೂಟಿವ್ ಅನಿಲ್ ಉಪಸ್ಥಿತರಿದ್ದರು.

error: Content is protected !!