“ಕ್ರೀಡೆಯಿಂದ ಸೌಹಾರ್ದತೆ ಸಾಧ್ಯ” -ಇನಾಯತ್ ಅಲಿ

ಸುರತ್ಕಲ್: “ಸ್ವಸ್ಥ ಸಮಾಜವು ನಿರ್ಮಾಣವಾಗಬೇಕಿದ್ದರೆ ಯುವಕರು ದೈಹಿಕವಾಗಿ ಆರೋಗ್ಯವಂತರಾಗಬೇಕು. ಇದಕ್ಕೆ ಕ್ರೀಡಾ ಚಟುವಟಿಕೆಗಳು ಪೂರಕವಾದ ವ್ಯಾಯಾಮವಾಗಿದೆ” ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೇಳಿದರು.
“ಕ್ರೀಡೆಯಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ವ್ಯಾಯಾಮ ಸಿಗುವುದರಿಂದ, ಉದ್ಯೋಗದ ಅವಕಾಶ ಮತ್ತು ದುಡಿಯಲು ಉತ್ತಮ ಆರೋಗ್ಯ ಪ್ರಾಪ್ತವಾಗುತ್ತದೆ. ಜತೆಗೆ ಕ್ರೀಡೆಯಿಂದ ಸೌಹಾರ್ದಯುತವಾದ ಬಾಳ್ವೆ ಸಾಧ್ಯವಿದೆ” ಎಂದವರು ಹೇಳಿದರು.

ಅವರು ನಗರದ ಉರ್ವ ಮೈದಾನದಲ್ಲಿ ನ್ಯಾಶನಲ್ ಮಾರ್ಕೆಟ್ ಫ್ರೆಂಡ್ಸ್ ಆಯೋಜನೆ ಮಾಡಿದ್ದ ಕ್ರೀಡಾಕೂಟದಲ್ಲಿ ಕ್ರೀಡಾ ಸಾಧಕರನ್ನು ಸಮ್ಮಾನಿಸಿ ಮಾತಾಡಿದರು. ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!