ಮಹತ್ವಾಕಾಂಕ್ಷಿ ಯೋಜನೆ “ರೋಹನ್ ಸಿಟಿ” ಬುಕ್ಕಿಂಗ್ ಗೆ ಚಾಲನೆ!

ಮಂಗಳೂರು: ಕಳೆದ ೨೯ ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ರೋಹನ್ ಕಾರ್ಪೊರೇಶನ್ ಇದೀಗ ಮಂಗಳೂರಿನ ಬಿಜೈ ಮುಖ್ಯ ರಸ್ತೆಯಲ್ಲಿ ಅತ್ಯಾಧುನಿಕ ಸೌಕರ್ಯಗಳ ‘ರೋಹನ್ ಸಿಟಿ’ ಸಮುಚ್ಛಯವನ್ನು ಅಭಿವೃದ್ಧಿಪಡಿಸುತ್ತಿದೆ. ಪ್ರಾಥಮಿಕ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಇದೀಗ ಬುಕ್ಕಿಂಗ್‌ ಗೆ ವಿದ್ಯುಕ್ತವಾಗಿ ಚಾಲನೆಯನ್ನು ನೀಡಲಾಗುತ್ತಿದೆ ಎಂದು ರೋಹನ್ ಕಾರ್ಪೋರೇಶನ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ರೋಹನ್ ಮೊಂತೆರೊ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಹಕಾರ ರತ್ನ’ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಈ ಸಮುಚ್ಚಯದ ಸಹಪ್ರವರ್ತಕ ರಾಗಿದ್ದಾರೆ ಎಂದರು.
೩.೫ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ರೋಹನ್ ಸಿಟಿ- ರೋಹನ್ ಕಾರ್ಪೊರೇಶನ್ನ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಅತ್ಯಾಧುನಿಕ ಭದ್ರತಾ ವ್ಯವಸ್ಥೆ, ನಿರಂತರ ವಿದ್ಯುತ್ ಮತ್ತು ನೀರು ಸರಬರಾಜು, ಯಾಂತ್ರೀಕೃತ ವಾಹನ ನಿಲುಗಡೆ, ಹಸಿರುವನ ಮತ್ತು ವಾಯು ವಿಹಾರಕ್ಕೆ ಕಾಲುದಾರಿಯನ್ನು ಹೊಂದಿದೆ. ವಸತಿಗಾಗಿ ೬ ಲಕ್ಷ ಚದರ ಅಡಿ, ವಾಣಿಜ್ಯ ಮಳಿಗೆಗಳಿಗಾಗಿ ೨ ಲಕ್ಷ ಚದರ ಅಡಿಯನ್ನು ಕಾಯ್ದಿರಿಸಲಾಗಿದೆ. ವಿವಿಧ ವಿಸ್ತೀರ್ಣ ಮತ್ತು ವಿನ್ಯಾಸದಲ್ಲಿ ಒಟ್ಟು ೫೪೬, ಸಿಂಗಲ್, ಡಬಲ್ ಮತ್ತು ತ್ರೀ ಬೆಡ್‌ರೂಂ ಪ್ಲ್ಯಾಟ್‌ಗಳು ಹಾಗೂ ೨೮೪ ವಾಣಿಜ್ಯ ಮಳಿಗೆಗಳು ಮಾರಾಟಕ್ಕಿವೆ ಎಂದು ತಿಳಿಸಿದರು.
ವಾಣಿಜ್ಯ ಮಳಿಗೆಯಲ್ಲಿ ಎರಡು ಜತೆ ಸರ್ವೀಸ್ ಎಸ್ಕಲೇಟರ್, ೬ ಹೈಸ್ಪೀಡ್ ಸ್ವಯಂಚಾಲಿತ ಸರ್ವೀಸ್ ಮತ್ತು ಪ್ಯಾಸೆಂಜರ್ ಲಿಫ್ಟ್, ಇಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಪಾಯಿಂಟ್ಸ್, ಸಾಕಷ್ಟು ಫಲಕ ಸ್ಥಳಗಳು, ಎರಡು ಹಂತಗಳಲ್ಲಿ ೩೫,೦೦೦ ಚದರ ಅಡಿ ಹೈಪರ್ ಮಾರುಕಟ್ಟೆ, ಚಿಲ್ಲರೆ ಅಂಗಡಿಗಳು, ಸಗಟು ಅಂಗಡಿಗಳು, ಕಾರ್ಪೊರೇಟ್ ಹಾಗೂ ಇತರ ಕಚೇರಿಗಳು, ಸುರಕ್ಷಿತ ಮಕ್ಕಳ ಆಟದ ಸ್ಥಳ, ಹಾಗೂ ಸ್ವಯಂಚಾಲಿತ ಚೇಂಜ್ ಓವರ್‌ನೊಂದಿಗೆ ಶೇ.೧೦೦ ಡೀಸೆಲ್ ಜನರೇಟರ್ ಪವರ್ ಬ್ಯಾಕಪ್ ಮತ್ತು ಒಟ್ಟು ೧,೪೮೬ ಚತುಶ್ಚಕ್ರ ಮತ್ತು ೩೯೫ ದ್ವಿಚಕ್ರ ಯಂತೀಕೃತ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದೆ ಎಂದು ತಿಳಿಸಿದರು.
ರೋಹನ್ ಸಿಟಿಯ ಪ್ರಧಾನ ಆಕರ್ಷಣೆ: ಮಂಗಳೂರು ಸ್ಮಾರ್ಟ್ ಸಿಟಿಯ ಪ್ರಪ್ರಥಮ ಅಂತಾರಾಷ್ಟ್ರೀಯ ದರ್ಜೆಯ ಸಿಟಿ ಕ್ಲಬ್ ರೋಹನ್ ಸಿಟಿಯ ಪ್ರಧಾನ ಆಕರ್ಷಣೆಯಾಗಲಿದೆ. ವಿಶಾಲ ವಿಶ್ರಾಂತಿ ಕೊಠಡಿಗಳು, ಸ್ವಾಗತ ಆವರಣ, ವಿದ್ಯಾರ್ಥಿಗಳ ಚಟುವಟಿಕೆ ಕೊಠಡಿ, ಅತ್ಯಾಧುನಿಕ ಗ್ರಂಥಾಲಯ, ಬಾರ್, ಕಾಫಿ ಶಾಪ್, ಫೈನ್ ಡೈನ್ ಫ್ಯಾಮಿಲಿ ರೆಸ್ಟೋರೆಂಟ್, ಜಾಗಿಂಗ್ ಟ್ರ್ಯಾಕ್, ಸೀನಿಯರ್ ಸಿಟಿಜನ್ ಪಾರ್ಕ್, ಈಜುಕೊಳ, ಸ್ನೂಕರ್ ಟೇಬಲ್, ಟೇಬಲ್ ಟೆನ್ನಿಸ್, ವೀಡಿಯೊ ಗೇಮ್ಸ್ ವಲಯ, ೩ಡಿ ಥಿಯೇಟರ್, ಸುಸಜ್ಜಿತ ಜಿಮ್, ಸ್ಪಾ, ಯುನಿಸೆಕ್ಸ್ ಸಲೂನ್, ಏರೋಬಿಕ್ ಹಾಗೂ ಯೋಗ ಕೊಠಡಿ, ಕಾನ್ಫರೆನ್ಸ್ ಹಾಲ್, ವಿವಿಧೋದ್ದೇಶ ಹಾಲ್, ಸಭಾಂಗಣ, ಒಳಾಂಗಣ ಕಾರ್ಡ್ ರೂಮ್, ಬೋರ್ಡ್ ರೂಮ್ ಮತ್ತಿತರ ವೈಶಿಷ್ಟ್ಯಗಳನ್ನೊಳಗೊಂಡ ಸಂಪೂರ್ಣ ಹವಾನಿ ಯಂತ್ರಿತ ಸಿಟಿ ಕ್ಲಬ್, ೩೬೫ ದಿನಗಳು ಹಾಗೂ ದಿನವಿಡಿ ತೆರೆದಿರುತ್ತದೆ. ಸಮುಚ್ಛಯಕ್ಕೆ ತನ್ನದೇ ಮಳೆ ನೀರು ಕೊಯ್ಲು ವ್ಯವಸ್ಥೆ, ಘನ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆ, ಸೌರಶಕ್ತಿ ವ್ಯವಸ್ಥೆ, ಮತ್ತು ಅಗ್ನಿಶಾಮಕ ವ್ಯವಸ್ಥೆ ಇರಲಿದೆ.
ರೋಹನ್ ಸಿಟಿಗೆ ರೇರಾ ಹಾಗೂ ಕ್ರೆಡೈ ಮಾನ್ಯತೆಯಿದ್ದು, ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳ ಅನುಮೋದನೆ ಇರುವುದರಿಂದ ಗ್ರಾಹಕರಿಗೆ ಸಾಲ ಸೌಲಭ್ಯ ಸುಲಭವಾಗಲಿದೆ. ಜೊತೆಗೆ ೩೨ ಸಾವಿರ ರೂ. (ಷರತ್ತುಗಳು ಅನ್ವಯ) ಮಾಸಿಕ ಕಂತಿನಲ್ಲಿ ಫ್ಲ್ಯಾಟ್ ಖರೀದಿಸಲು ನಿರ್ಮಾಣ ಸಂಸ್ಥೆ ವತಿಯಿಂದ ವಿಶೇಷ ಯೋಜನೆ ರೂಪಿಸಲಾಗಿದೆ. ಇದರಿಂದ ಸಾಕಷ್ಟು ಉದ್ಯೋಗಾ ವಕಾಶವನ್ನು ಸೃಷ್ಟಿಸಲಾಗುತ್ತಿದೆ. ಹೆಚ್ಚಿನ ವಿವರಗಳಿಗಾಗಿ ರೋಹನ್ ಕಾರ್ಪೊರೇಶನ್, ಮುಖ್ಯ ರಸ್ತೆ, ಬಿಜೈ, ಮಂಗಳೂರು ಮಾರಾಟ ಕಚೇರಿಗೆ ಭೇಟಿ ನೀಡಬಹುದು ಅಥವಾ ದೂ.ಸಂ.: ೯೮೪೫೪೯೦೧೦೦ ಸಂಪರ್ಕಿಸಬಹುದು ಎಂದರು.
ಸಹ ಪ್ರವರ್ತಕ ಸಂಸ್ಥೆಗಳ ಪ್ರತಿನಿಧಿಗಳಾದ ಮೇಘರಾಜ್, ಅಲ್ವಿನ್ ಡಿಸೋಜ, ಮಾಧ್ಯಮ ಸಂಪರ್ಕ ಪ್ರತಿನಿಧಿ ಟೈಟಸ್ ನರೋನ್ಹಾ ಉಪಸ್ಥಿತರಿದ್ದರು.

error: Content is protected !!