“ಸರ್ವಧರ್ಮ ಬಾಂಧವ್ಯದ ಮೂಲಕ ಗ್ರಾಮೀಣ ಭಾಗದಲ್ಲಿ ಜಾನಪದ ಕ್ರೀಡೆಗಳಿಗೆ ಪ್ರೋತ್ಸಾಹ ಶ್ಲಾಘನೀಯ”

ಮುಲ್ಕಿ: ಪತ್ತೆರೆ ಕೂಟ ಪಕ್ಷಿಕೆರೆ ವತಿಯಿಂದ ಗ್ರಾಮ ಉಚ್ಚಯ ಕಾರ್ಯಕ್ರಮ ಪಕ್ಷಿಕೆರೆ ಸಂತ ಜೂದರ ಇಗರ್ಜಿಯ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಪಕ್ಷಿಕೆರೆ ಚರ್ಚ್ ಧರ್ಮ ಗುರುಗಳಾದ ಮೆಲ್ವಿನಿ ನೋರಾನ್ಹಾ ವಹಿಸಿ ಆಶೀರ್ವಚನ ನೀಡಿ ಸರ್ವಧರ್ಮದ ಬಾಂಧವ್ಯದ ಮೂಲಕ ಗ್ರಾಮೀಣ ಭಾಗದಲ್ಲಿ ಜಾನಪದ ಕ್ರೀಡೆಗಳಿಗೆ ಪ್ರೋತ್ಸಾಹ ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಪಕ್ಷಿಕೆರೆ ಜುಮ್ಮಾ ಮಸೀದಿಯ ಧರ್ಮ ಗುರುಗಳಾದ ಇಬ್ರಾಹಿಂ ಪಾಲಿಲಿ, ತುಳು ಜಾನಪದ ವಿದ್ವಾಂಸ ಕೆ.ಕೆ ಪೇಜಾವರ, ವಿದ್ವಾನ್ ಪಂಜ ವಾಸುದೇವ ಭಟ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಉದ್ಯಮಿ ದಾಮೋದರ ಭಂಡಾರಿ, ಮುಲ್ಕಿ ವಲಯ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಶೆಟ್ಟಿ ಕಿಲೆಂಜೂರು, ಮಾದವ ಕೆರೆಕಾಡು, ಉದ್ಯಮಿ ಮೊಹಮ್ಮದ್ ನೂರಾನಿಯಾ, ವಲೇರಿಯನ್ ತಾವ್ರೋ, ಜಾರ್ಜ್ ಡಿಸೋಜಾ, ಪತ್ತೆರಕೂಟ ಸಮಿತಿಯ ಕಿರಣ್ ಕುಮಾರ್ ಬೊಳ್ಳೂರು, ಅಶ್ವಿನ್ ಬಿ ಆಳ್ವ, ಚೇತನ್ ರೋಡ್ರಿಗಸ್, ಜಾಕ್ಸನ್ ಪಕ್ಷಿಕೆರೆ, ಪ್ರಶಾಂತ್ ಪಕ್ಷಿಕೆರೆ ಮತ್ತಿತರರರು ಉಪಸ್ಥಿತರಿದ್ದರು.
ಬಳಿಕ ಗ್ರಾಮೀಣ ಕ್ರೀಡಾಕೂಟದ ಉದ್ಘಾಟನೆಯನ್ನು ದಾಯ್ಜಿವಲ್ಡ್ ಮುಖ್ಯಸ್ಥ ವಾಲ್ಟರ್ ನಂದಳಿಕೆ ನೆರವೇರಿಸಿದರು ನೆರವೇರಿಸಿದರು. ಪತ್ರಕರ್ತ ವರಮಾನಂದ ಸಾಲ್ಯಾನ್ ನಿರೂಪಿಸಿದರು
ಕಾರ್ಯಕ್ರಮದಲ್ಲಿ ವಿಭಿನ್ನ ಸ್ಪರ್ಧೆಗಳು , ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಿತು
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಕೆಮ್ರಾಲ್ ಗ್ರಾಮ ಪಂಚಾಯತ್ ನಿಂದ ಗ್ರಾಮ ಉಚ್ಚಯ ನಡೆಯುವ ವೇದಿಕೆ ತನಕ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಮೆರವಣಿಗೆ ನಡೆಯಿತು.

error: Content is protected !!