ಸುರತ್ಕಲ್: ನಿನ್ನೆ ಮಂಗಳೂರಿನ ಇಂದಿರಾ ಭವನದಲ್ಲಿ ನಡೆದ ಎನ್ ಎಸ್ ಯುಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಕಾರ್ಯಕಾರಿಣಿ ಸಭೆ ಚಿಂತನ ಮಂಥನ ದಲ್ಲಿ ಭಾಗವಹಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಎನ್ ಎಸ್ ಯು ಐ ರಾಜ್ಯ ಉಸ್ತುವಾರಿ ಇನಾಯತ್ ಅಲಿ ಅವರು ಮಾತನಾಡಿದರು.
“ದಕ್ಷಿಣ ಕನ್ನಡ ಜಿಲ್ಲೆ ಕೋಮು ಸೂಕ್ಷ್ಮ ಜಿಲ್ಲೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ದಕ್ಷಿಣ ಕನ್ನಡ ಜಿಲ್ಲೆ ಶಾಂತಿಪ್ರಿಯರ ಹಾಗೂ ಸೌಹಾರ್ದತೆಯ ನಾಡು. ಕೆಲವೇ ಕೆಲವು ಕೋಮುವಾದಿ ಮನಸ್ಥಿತಿಗಳಿಂದ ಇಂದು ಜಿಲ್ಲೆಯ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವಂತಹ ಕೆಲಸಗಳು ನಡೆಯುತ್ತಿವೆ. ವಿದ್ಯಾರ್ಥಿ ಶಕ್ತಿ ನಾಡಿನ ಭವಿಷ್ಯ. ಎನ್ ಎಸ್ ಯು ಐ ಅನ್ನು ಬಲಿಷ್ಠವಾಗಿ ಸಂಘಟಿಸುವ ಮೂಲಕ ಕೋಮುವಾದವನ್ನು ಹಿಮ್ಮೆಟ್ಟಿಸಿ ಸಾಮರಸ್ಯಪೂರ್ಣ ಜಿಲ್ಲೆ ಕಟ್ಟುವಲ್ಲಿ ವಿದ್ಯಾರ್ಥಿ ಮಿತ್ರರು ಮಹತ್ವದ ಪಾತ್ರ ವಹಿಸಬೇಕಾಗಿದೆ” ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ರವರು ಉಪಸ್ಥಿತರಿದ್ದರು. ಇವರ ಜೊತೆಗೆ ರಾಜ್ಯ ಪದಾಧಿಕಾರಿಗಳಾದ ಫಾರೂಕ್ ಬಯಾಬೆ, ಸುಹಾನ್ ಆಳ್ವ, ಅನ್ವಿತ್ ಕಟೀಲ್, ಭರತ್ ರಾಮ್, ಆಶಿತ್ ಜಿ ಪೆರೇರಾ, ವಿಧ್ಯಾರ್ಥಿ ಮುಖಂಡರಾದ ನಿಖಿಲ್ ಪೂಜಾರಿ, ಪ್ರತೀಶ್ ಭಂಡಾರಿ, ಸಾಹಿಲ್ ಎ.ಕೆ, ಮೊಹಮ್ಮದ್ ತಹ್ಷೀರ್, ಅಮಾನ್ ಪೂಜಾರಿ, ಕೀರ್ತನ್ ಗೌಡ, ಅಬ್ದುಲ್ ರಹಮಾನ್ ಹಾಗೂ ಇತರರು ಉಪಸ್ಥಿತರಿದ್ದರು.