
ಮಂಗಳೂರು: ಕೆಲವು ದಿನಗಳ ಹಿಂದೆ ಎಂ ಆರ್ ಪಿ ಎಲ್ ನಲ್ಲಿ ನಡೆದ ಸ್ಪೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗುತ್ತಿಗೆ ಆಧಾರಿತ ಕಾರ್ಮಿಕ ರಾಜೇಶ್ ಡಿ’ಸಿಲ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ದುರಂತದ ದಿನದಂದೇ ಸಾವನ್ನಪ್ಪಿರುವ ಹಳೆಯಂಗಡಿಯ ಮನೀಶ್ ಕರ್ಕಡ ಕುಟುಂಬಕ್ಕೆ ನೀಡಿದಂತೆ ರಾಜೇಶ್ ಕುಟುಂಬಕ್ಕೂ ಒಂದು ಕೋಟಿ 20 ಲಕ್ಷ ರೂಪಾಯಿ ಪರಿಹಾರ ಧನವನ್ನು MRPL ಆಡಳಿತ ನೀಡಬೇಕು. ದುರಂತಕ್ಕೆ ಕಾರಣವಾದ ಅಂಶಗಳ ಪ್ರಾಥಮಿಕ ತನಿಖಾ ವರದಿಯನ್ನು ಬಹಿರಂಗ ಪಡಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
