ದೈಗೋಳಿ ಸಾಯಿನಿಕೇತನ ಆಶ್ರಮದಲ್ಲಿ ಸರಳವಾಗಿ ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿಕೊಂಡ ಶಾಸಕ ಮಂಜುನಾಥ ಭಂಡಾರಿ

ಮಂಗಳೂರು: ಗ್ರಾಮ ಸ್ವರಾಜ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷರಾದ ಡಾ.ಮಂಜುನಾಥ ಭಂಡಾರಿಯವರ ಹುಟ್ಟುಹಬ್ಬವನ್ನು ದೈಗೋಳಿಯ ಸಾಯಿನಿಕೇತನ ಆಶ್ರಮದಲ್ಲಿ ಅನ್ನದಾನ ಮಾಡುವ ಮೂಲಕ ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಡಾ.ಮಂಜುನಾಥ ಭಂಡಾರಿಯವರು ಆಶ್ರಮದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವೈಯಕ್ತಿಕ ನೆಲೆಯಲ್ಲಿ ₹50,000 ದೇಣಿಗೆ ನೀಡಿದರು. ಅಲ್ಲದೆ, ಮುಂದಿನ ದಿನಗಳಲ್ಲಿಯೂ ಆಶ್ರಮದ ಕಾರ್ಯಗಳಿಗೆ ಅಗತ್ಯ ಸಹಾಯ ಮತ್ತು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಗ್ರಾಮ ಸ್ವರಾಜ್ ಪ್ರತಿಷ್ಠಾನ ಇದರ ಮಂಗಳೂರು ಅದ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ,ಕೋಶಾಧಿಕಾರಿ ಹಾಗೂ ಮಾಜಿ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ,ಮಂಗಳೂರು ಗ್ಯಾರಂಟಿ ಅನು಼ಷ್ಠಾನ ಸಮಿತಿ ಅದ್ಯಕ್ಷರಾದ ಸುರೇಂದ್ರ ಕಂಬಳಿ, ಮಾಜಿ ಮೇಯರ್ ಮಹಾಬಲ ಮಾರ್ಲ, ಮಂಗಳೂರು ಮಹಾನಗರ ಪಾಲಿಕೆಯ ವಿರೋದ ಪಕ್ಷದ ಮಾಜಿ ನಾಯಕರಾದ ಅನಿಲ್ ಕುಮಾರ್, ಸುನಿಲ್ ಪೂಜಾರಿ ಮಂಗಳೂರು, ರಾಕೇಶ್ ದೇವಾಡಿಗ ಮಂಗಳೂರು ಇಚ್ಛಿತ್ ಶೆಟ್ಟಿ ಕುಂದಾಪುರ, ರವಿ ಶೆಟ್ಟಿ ಉಡುಪಿ ಉಪಸ್ಥಿತರಿದ್ದರು.

Advt
error: Content is protected !!