“ಸತೀಶ್‌ ಜಾರಕಿಹೊಳಿ ಮೇಲಿನ ED ದಾಳಿ ಪ್ರಜಾಪ್ರಭುತ್ವದ ಮೇಲಿನ ದಾಳಿ“

ಮಂಗಳೂರು: ಕರ್ನಾಟಕ ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸೇರಿದ ಮನೆ ಮತ್ತು ಕಚೇರಿಗಳಿಗೆ ಸೆಪ್ಟೆಂಬ‌ರ್ 9 ಮತ್ತು 10ರಂದು 36 ಗಂಟೆಗಳ ಕಾಲ 21 ಕಡೆ ED ದಾಳಿ ನಡೆಸಲಾಗಿತ್ತು. ಇದು ಅವರ ರಾಜಕೀಯ ಯಶಸ್ಸು ಮತ್ತು ತಂತ್ರಗಾರಿಕೆಯನ್ನು ಸಹಿಸದ ಕೇಂದ್ರ ಸರ್ಕಾರವು ಈ ಹಿಂದೆ ವಿಪಕ್ಷ ನಾಯಕರ ಆತ್ಮವಿಶ್ವಾಸ ಕುಗ್ಗಿಸಲು ಮಾಡಿದ ಕುತಂತ್ರದಂತೆ, ಈ ದಾಳಿಯೂ ಆಗಿದೆ ಎಂದು ದಿನೇಶ್ ಮೂಳೂರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
2021ರಲ್ಲಿ ರಾಜ್ಯದಲ್ಲಿ ಬಿಜೆಪಿ ಆಡಳಿತ ಇರುವಾಗ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಅಂತಿಮ ಹಂತದವರೆಗೆ ಕಠಿಣ ಸ್ಪರ್ಧೆ ನೀಡಿದ ಜಾರಕಿಹೊಳಿ ಅವರ ಮೇಲೆ ಒಂದು ಕಣ್ಣು ಆಗಲೇ ಕೇಂದ್ರ ಸರ್ಕಾರ ಇಟ್ಟಿರಬಹುದು.
ಆಮೇಲೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಉತ್ತರ ಕರ್ನಾಟಕದಲ್ಲಿ ಅನೇಕ ಶಾಸಕರ ಆಯ್ಕೆಗೆ ಜಾರಕಿಹೊಳಿ ಅವರ ಪ್ರಭಾವ ಇದ್ದದ್ದು ಮಾತ್ರವಲ್ಲದೆ, ಬಿಜೆಪಿಯ ಮಾಜಿ ಮುಖ್ಯಮಂತ್ರಿ ಪುತ್ರ ಸ್ಪರ್ಧೆ ಮಾಡಿದ ಶಿಗ್ಗಾವಿ ಉಪಚುನಾವಣೆಯಲ್ಲಿ ಒಬ್ಬ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯನ್ನು ಗೆಲ್ಲಿಸಿದ್ದು ಅವರ ರಾಜಕೀಯ ತಂತ್ರಗಾರಿಕೆಗೆ ಹಿಡಿದ ಕೈಗನ್ನಡಿ ಮತ್ತು ಸಹಜವಾಗಿ ಬಿಜೆಪಿಯನ್ನು ನಿದ್ದೆಗೆಡಿಸಿದ್ದು ಅಷ್ಟೇ ಸತ್ಯ. ಮೌಡ್ಯಮುಕ್ತ ಸಮಾಜಕ್ಕೆ ತನ್ನ ವೈಚಾರಿಕ ವಿಷಯಗಳ ಮೂಲಕ ತಕ್ಕ ಉತ್ತರ ಕೊಡುತ್ತಿರುವ, ದಲಿತ ಸಮುದಾಯದಿಂದ ಬಂದಿರುವ ಇವರ ವಿರುದ್ಧ ಮೌಡ್ಯ ಬಿತ್ತಿ ರಾಜಕೀಯ ಬೇಳೆ ಬೇಯಿಸುತ್ತಿರುವ ಬಿಜೆಪಿ-ಸಂಘ ಪರಿವಾರಕ್ಕೆ ಇವರ ಮೇಲೆ ವೈರತ್ನ ಬಿದ್ದಿರುವುದಕ್ಕೆ ಮತ್ತೊಂದು ಕಾರಣ.
ಈ ಹಿಂದೆ ದಲಿತ ನಾಯಕಿ ಮಾಯಾವತಿ, ಹಿಂದುಳಿದ ವರ್ಗದ ಲಾಲು ಪ್ರಸಾದ್ ಯಾದವ್ ವಿರುದ್ಧವೂ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿ ಅವರ ರಾಜಕೀಯ ಮುಗಿಸಿದ್ದು ಒಂದು ವಿಧಾನ. ಆದರೆ, ಇನ್ನೊಂದು ಕಡೆ ಅದೇ ತನಿಖಾ ಸಂಸ್ಥೆಗಳು ವಾಷಿಂಗ್ ಮೆಷಿನ್‌ನಂತೆ ಕಾರ್ಯನಿರ್ವಹಿಸಿ ವಿಪಕ್ಷಗಳ ಪ್ರಮುಖ ನಾಯಕರನ್ನು ಬಿಜೆಪಿಗೆ ಸೇರಿಸಿ ಶಾಸಕ, ಸಂಸದ, ಮಂತ್ರಿ, ಮುಖ್ಯಮಂತ್ರಿ ಮಾಡಿದ ಉದಾಹರಣೆ ಕೂಡ ಇದೆ. ಮುಖ್ಯವಾಗಿ ಅಜಿತ್ ಪವಾ‌ರ್, ಅಶೋಕ್ ಚವಾಣ್, ಹಿಮಂತ ಬಿಸ್ನಾ, ಸುವೆಂದು ಅಧಿಕಾರಿ. ಆದರೆ ಕರ್ನಾಟಕದಲ್ಲಿ ಆ ಪ್ರಯೋಗಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆಯೂ ಆದ ಉದಾಹರಣೆ ಇದೆ. ಆದರೂ ಹಠ ಬಿಡದೆ ಮತ್ತೊಂದು ಹಂತದಲ್ಲಿ ಜಾರಕಿಹೊಳಿ ಅವರ ಮೇಲೆ ED ದಾಳಿ ಈಗ ಆಗಿದೆ. ಇದನ್ನು ನಾವೆಲ್ಲರೂ ಖಂಡಿಸುತ್ತೇವೆ“ ಎಂದರು.

ಪತ್ರಿಕಾಗೋಷ್ಟಿಯಲ್ಲಿ ನವೀನ್ ರೈ ಚೆಲ್ಯಡ್ಕ, ಕೆ.ಎಸ್.ಸತೀಶ್ ಕುಮಾರ್, ಜಯರಾಮ್ ಪೂಜಾರಿ, ಅನ್ಸರುದ್ದಿನ್ ಸಾಲ್ಮರ ಉಪಸ್ಥಿತರಿದ್ದರು.

error: Content is protected !!