
ಮಂಗಳೂರು: ಸೆ.20ರಂದು ಟಿಎಂಎ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ರಾಜ್ಯ ದೇವಾಡಿಗರ ಶತಮಾನೋತ್ಸವ ಕಾರ್ಯಕ್ರಮ ಬೆಳಗ್ಗಿನಿಂದ ರಾತ್ರಿಯವರೆಗೆ ನಿರಂತರವಾಗಿ ನಡೆಯಲಿದೆ ಎಂದು ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷ ಅಶೋಕ್ ಮೊಯಿಲಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

ಅಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಡಾ. ಕೆ.ವಿ. ದೇವಾಡಿಗ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಕೆ.ವಿ. ದೇವಾಡಿಗ, ಶತಮಾನೋತ್ಸವ ಆಚರಣೆ ಗೌರವಾಧ್ಯಕ್ಷರಾದ ಹರೀಶ್ ಶೇರಿಗಾರ್, ಮುಖ್ಯ ಅತಿಥಿಗಳಾಗಿ ಡಾ.ದೇವರಾಜ್ ಕೆ., ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಕರುಣಾಕರ ಎಂ.ಹೆಚ್., ವಿಶ್ವ ದೇವಾಡಿಗ ಮಹಾಮ೦ಡಲದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಕುವೆಂಪು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಡಾ. ಬಿ.ಎಸ್. ಶೇರಿಗಾರ್, ವಿಶ್ವ ದೇವಾಡಿಗ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್, ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ಬಾರ್ಕೂರು ಇದರ ಅಧ್ಯಕ್ಷಅಣ್ಣಯ್ಯ ಬಿ. ಶೇರಿಗಾರ್, ದೇವಾಡಿಗ ಸಂಘ ಮುಂಬೈ ಅಧ್ಯಕ್ಷ ರವಿ ಸುಬ್ಬಯ್ಯ ದೇವಾಡಿಗ, ಮಂಗಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಜೆ. ದೇವಾಡಿಗ, ನಾರಾಯಣ್ ಎಂ. ದೇವಾಡಿಗ, ದಿನೇಶ್ ಕುಮಾರ್ ದೇವಾಡಿಗ, ಬಾಬು ದೇವಾಡಿಗ ಆಂಗ್ಲಮೊಗರು ಮಾಜಿ ಪ್ರಾಂಶುಪಾಲರು, ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರು, ಭಾಸ್ಕರ್ ಶೇರಿಗಾರ್, ಸ್ಥಾಪಕ ಅಧ್ಯಕ್ಷರು, ಆಲ್ ಅಮೆರಿಕನ್ ತುಳು ಅಸೋಸಿಯೇಷನ್ (AATA) ಉಸಾ, ದಿನೇಶ್ ಚಂದ್ರಶೇಖರ್ ದೇವಾಡಿಗ ನಾಗೂರು ಅಧ್ಯಕ್ಷರು, ಕುಂದಾಪುರ ದೇವಾಡಿಗ ಮಿತ್ರ, ಆಲೂರು ರಘುರಾಮ ದೇವಾಡಿಗ, ಟ್ರಸ್ಟಿ ಸದಸ್ಯರು, ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು, ನಾಗರಾಜ್ ದೇವಾಡಿಗ ಪಡುಕೋಣೆ, ಅಧ್ಯಕ್ಷರು, LG ಫೌಂಡೇಶನ್, ಸುರೇಶ್ ಚಂದಪ್ಪ ದೇವಾಡಿಗ, ದುಬೈ, ಶೇಖರ್ ದೇವಾಡಿಗ ಸಾಯಿ ನಿಧಿ ಗ್ರೂಪ್ ಆಫ್ ಹೋಟೆಲ್ಸ್ ಮು೦ಬೈ, ಅಶೋಕ್ ಮೊಯ್ಲಿ ಅಧ್ಯಕ್ಷರು ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮ೦ಗಳೂರು ಇವರು ಪಾಲ್ಗೊಳ್ಳಲಿದ್ದಾರೆ.

ಸಂಜೆ 5:30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ.ಎಂ. ವೀರಪ್ಪ ಮೊಯ್ಲಿ ಮಾಜಿ ಮುಖ್ಯಮ೦ತ್ರಿಗಳು, ಗೌರವ ಅತಿಥಿಗಳಾಗಿ ಯು.ಟಿ. ಖಾದರ್, ಡಿ. ವೇದವ್ಯಾಸ ಕಾಮತ್, ಹರೀಶ್ ಶೇರಿಗಾರ್, ಗೌರವಾಧ್ಯಕ್ಷರು ಶತಮಾನೋತ್ಸವ ಆಚರಣಾ ಸಮಿತಿ, ಡಾ.ದೇವರಾಜ್ ಕೆ. ಗೌರವಾಧ್ಯಕ್ಷರು, ವಿಷನ್ ಮಂಗಳ ಯೋಜನೆ ಶತಮಾನೋತ್ಸವ ಆಚರಣೆ, ಅಶೋಕ್ ಮೊಯ್ಲಿ ಅಧ್ಯಕ್ಷರು, ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ.), ಮಂಗಳೂರು, ಮುಖ್ಯ ಅತಿಥಿಗಳಾಗಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞ, ಡಾ.ಎ. ಶ್ರೀನಿವಾಸ್ ರಾವ್, ಕುಲಾಧಿಪತಿಗಳು ಶ್ರೀನಿವಾಸ್ ಕಾಲೇಜು, ವಿಶಾಲ್ ಹೆಗ್ಡೆ ಕುಲಾಧಿಪತಿಗಳು ನಿಟ್ಟೆ, ಡಾ.ಸಿ.ಪಿ. ಹಬೀಬ್ ರಹ್ಮಾನ್, ಎಂ.ಎನ್. ರಾಜೇಂದ್ರ ಕುಮಾರ್, ಅಧ್ಯಕ್ಷರು SCDCC ಬ್ಯಾಂಕ್, ಡಾ. ಎ.ಜೆ ಶೆಟ್ಟಿ, ಅಧ್ಯಕ್ಷರು ಎ.ಜೆ. ಗ್ರೂಪ್ ಆಫ್ ಕಂಪೆನೀಸ್, ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷರು, ಬ೦ಟರ ಯಾನೆ ನಾಡವರ ಮಾತೃಸಂಘ, ರೊನಾಲ್ಡ್ ಮಾರ್ಟಿಸ್ ವ್ಯವಸ್ಥಾಪಕ ನಿರ್ದೇಶಕರು, ಬ್ಲೂ ರಾಯಲ್ ಗ್ರೂಪ್ ದುಬೈ, ಸರ್ವೋತ್ತಮ ಶೆಟ್ಟಿ ಅಧ್ಯಕ್ಷರು, ಕರ್ನಾಟಕ ಸ೦ಘ ಅಬುಧಾಬಿ, ಗಣೇಶ್ ಶೆಟ್ಟಿ, ಜಗನ್ನಾಥ್ ಶೇರಿಗಾರ್, ಸಂಜೀತ್ ಶೆಟ್ಟಿ, ಕರುಣಾಕರ ಎಂ.ಹೆಚ್ ಅಧ್ಯಕ್ಷರು, ಶತಮಾನೋತ್ಸವ ಆಚರಣಾ ಸಮಿತಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು ಸಾಂಪ್ರದಾಯಿಕ ವಾದ್ಯಗಳ ಸಂಗಮದಲ್ಲಿ ನಾಗೇಂದ್ರ ಕುಡುಪು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಉದಯ್ ಶೇರಿಗಾರ್, ಅಲೆವೂರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಅವರ ತಂಡದಿಂದ ಸಾಂಪ್ರದಾಯಿಕ ವಾದ್ಯಗಳ ಅಪೂರ್ವ ಸಂಗಮ ಚೆಂಡೆ + ನಾಗಸ್ವರ + ಉಡುಕೆ + ಡೋಲು ಇದರ ವಿಶೇಷ ಪ್ರದರ್ಶನ ನಡೆಯಲಿದೆ.

ಪತ್ರಿಕಾಗೋಷ್ಟಿಯಲ್ಲಿ ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಕರುಣಾಕರ ಎಂ.ಹೆಚ್.,ಹರೀಶ್ ಶೇರಿಗಾರ್, ಡಾ.ದೇವರಾಜ್ ಕೆ, ವೀಣಾ ಗಣೇಶ್, ಗೀತಾ ಕಲ್ಯಾಣಪುರ, ಲೋಹಿತಾಕ್ಷ ಮರೋಳಿ ಮತ್ತಿತರರು ಉಪಸ್ಥಿತರಿದ್ದರು.
