ಉಡುಪಿಯಿಂದ ಭಾರತದಾದ್ಯಂತ: ಭೌತಿಕ ಗಡಿಗಳನ್ನು ಮೀರಿದ ಶ್ರೀಕೃಷ್ಣ ಮಠದ ಜನ್ಮಾಷ್ಟಮಿ ಸಂಭ್ರಮ

ಉಡುಪಿ , 10ಸೆಪ್ಟೆಂಬರ್ 2026: ಭಾರತದ ಪ್ರಸಿದ್ಧ ಕೃಷ್ಣ ಆರಾಧನಾ ಕೇಂದ್ರವಾದ ಉಡುಪಿ ಶ್ರೀಕೃಷ್ಣ ಮಠದ ಪವಿತ್ರ ಜನ್ಮಾಷ್ಟಮಿ ಆಚರಣೆಯಲ್ಲಿ ಈ ಬಾರಿ ದೇಶ-ವಿದೇಶಗಳ ಸಾವಿರಾರು ಭಕ್ತರು ‘ಶ್ರೀ ಮಂದಿರ್’ ಆ್ಯಪ್ ಮೂಲಕ ಭಾಗವಹಿಸಿ ಪುನೀತರಾದರು. ಭೌತಿಕವಾಗಿ ಉಡುಪಿಗೆ ಬರಲು ಸಾಧ್ಯವಾಗದ ಭಕ್ತರಿಗಾಗಿ ಅರ್ಘ್ಯಪ್ರದಾನ, ಕೃಷ್ಣಮಂತ್ರ ಮಹಾಯಜ್ಞ, ವಿಶೇಷ ಅಭಿಷೇಕ ಹಾಗೂ ಅನ್ನದಾನ ಸೇವೆಗಳನ್ನು ಆನ್‌ಲೈನ್ ಮೂಲಕ ಸಮರ್ಪಿಸಲು ವಿಶೇಷ ಸೌಲಭ್ಯ ಕಲ್ಪಿಸಲಾಗಿತ್ತು.

ಉಡುಪಿ ಮಠದಲ್ಲಿ ಭಗವಾನ್ ಕೃಷ್ಣನನ್ನು ‘ಬಾಲಕೃಷ್ಣ’ನ ರೂಪದಲ್ಲಿ ಆರಾಧಿಸಲಾಗುತ್ತದೆ. ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಈ ವಿಗ್ರಹವನ್ನು ‘ನವಗ್ರಹ ಕಿಂಡಿ’ಯ ಮೂಲಕ ದರ್ಶನ ಪಡೆಯುವುದು ಇಲ್ಲಿನ ತಲೆತಲಾಂತರಗಳ ಸಂಪ್ರದಾಯ. ಜೂನ್ ತಿಂಗಳಿನಿಂದ ಉಡುಪಿ ಮಠದೊಂದಿಗೆ ಕೈಜೋಡಿಸಿರುವ ಶ್ರೀ ಮಂದಿರ್ ಆ್ಯಪ್ ಮೂಲಕ ಇದುವರೆಗೆ 10,000ಕ್ಕೂ ಹೆಚ್ಚು ಭಕ್ತರು ಪೂಜೆ ಮತ್ತು ಸೇವೆಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಜನ್ಮಾಷ್ಟಮಿಯಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ಮಠದ ಪಾರಂಪರಿಕ ವಿಧಿವಿಧಾನಗಳಂತೆಯೇ ಅಧಿಕೃತ ಅರ್ಚಕರು ಈ ಎಲ್ಲಾ ಪೂಜೆಗಳನ್ನು ನೆರವೇರಿಸಿದರು.

ಉಡುಪಿಯನ್ನು ‘ಅನ್ನಬ್ರಹ್ಮ ಕ್ಷೇತ್ರ’ ಎಂದೇ ಕರೆಯಲಾಗುತ್ತಿದ್ದು, ನಿರಂತರ ಅನ್ನದಾನಕ್ಕೆ ಇಲ್ಲಿ ವಿಶೇಷ ಮಹತ್ವವಿದೆ. ಅಷ್ಟಮಠಗಳ ‘ಪರ್ಯಾಯ’ ಹಸ್ತಾಂತರದ ವೇಳೆ ‘ಅಕ್ಷಯ ಪಾತ್ರೆ’ ಹಾಗೂ ಬೆಳ್ಳಿಯ ‘ಸಟ್ಟುಗ’ವನ್ನು (ಸೌಟು) ಹಸ್ತಾಂತರಿಸುವ ಸಂಪ್ರದಾಯವೂ ಇದನ್ನೇ ಸೂಚಿಸುತ್ತದೆ. ಈ ಜನ್ಮಾಷ್ಟಮಿಯಲ್ಲಿ ಭಕ್ತರು ಆನ್‌ಲೈನ್ ಮೂಲಕ ಅನ್ನದಾನ ಸೇವೆಯಲ್ಲಿ ಭಾಗವಹಿಸಿ ಪುಣ್ಯಕಟ್ಟಿಕೊಂಡರು.

 

“ಭಕ್ತರು ದೇವಾಲಯಕ್ಕೆ ಪ್ರಯಾಣಿಸಲು ಸಾಧ್ಯವಾಗದಿದ್ದಾಗ ತಂತ್ರಜ್ಞಾನವು ಆ ಅಂತರವನ್ನು ಕಡಿಮೆ ಮಾಡುತ್ತದೆ. ಆದರೆ, ದೇವಾಲಯದ ಮೂಲ ಸಂಪ್ರದಾಯ ಮತ್ತು ಅರ್ಚಕರು ನಡೆಸುವ ಪೂಜಾ ಕೈಂಕರ್ಯಗಳಿಗೆ ತಂತ್ರಜ್ಞಾನ ಪರ್ಯಾಯವಾಗಲಾರದು. ಭಕ್ತರನ್ನು ದೇವಾಲಯದ ಆಚರಣೆಗಳೊಂದಿಗೆ ಬೆಸೆಯುವುದಷ್ಟೇ ನಮ್ಮ ಉದ್ದೇಶ,” ಎಂದು ಶ್ರೀ ಮಂದಿರ್ ಆ್ಯಪ್‌ನ ಸಂಸ್ಥಾಪಕ ಮತ್ತು ಸಿಇಒ ಪ್ರಶಾಂತ್ ಸಚಾನ್ ತಿಳಿಸಿದರು.

‘ಆ್ಯಪ್ಸ್ ಫಾರ್ ಭಾರತ್’ (AppsForBharat) ಸಂಸ್ಥೆಯ ಶ್ರೀ ಮಂದಿರ್ ಆ್ಯಪ್ ಪ್ರಸ್ತುತ ದೇಶಾದ್ಯಂತ 100ಕ್ಕೂ ಹೆಚ್ಚು ಪ್ರಮುಖ ದೇವಾಲಯಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಡಿಜಿಟಲ್ ದರ್ಶನ, ಪೂಜೆ, ಚಢಾವಾ ಹಾಗೂ ಪ್ರಸಾದ ವಿತರಣೆಯ ಮೂಲಕ ಧಾರ್ಮಿಕ ಸೇವೆಗಳನ್ನು ಭಕ್ತರ ಮನೆ ಬಾಗಿಲಿಗೆ ತಲುಪಿಸುತ್ತಿದೆ.

Advt
error: Content is protected !!