ಮಂಗಳೂರು: ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಗ್ರಾಹಕರೊಬ್ಬರು ಬ್ಲಿಂಕ್ ಇಟ್ ಆನ್ ಲೈನ್ ಪ್ಲಾಟ್ ಫಾರ್ಮ್ ನಿಂದ ಖರೀದಿಸಿದ್ದ ಮೊಟ್ಟೆಯಲ್ಲಿ ಹುಳ ಇರುವ ಕುರಿತು ದೂರು ನೀಡಿರುವ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಅರೋಗ್ಯ ಇಲಾಖೆ ಅಧಿಕಾರಿಗಳ ತಂಡ ಫಳ್ನೀರ್ ನಲ್ಲಿರುವ ಫಳ್ನೀರ್ ಸ್ಕ್ವೇರ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ Blink It ಆನ್ಲೈನ್ ಮಾರಾಟ ಸಂಸ್ಥೆಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಈ ವೇಳೆ ಒಡೆದ ಮೊಟ್ಟೆ ಇರುವ ಪ್ಯಾಕೆಟ್ ಗಳನ್ನು ಪತ್ತೆ ಹಚ್ಚಲಾಗಿದ್ದು ತಕ್ಷಣವೇ ತೆರವುಗೊಳಿಸಲು ಸೂಚಿಸಲಾಯಿತು.

ಆಹಾರ ಸಾಮಗ್ರಿ ಸಂಗ್ರಹಣಾಗಾರವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಉದ್ದೇಶದಿಂದ ಮಳಿಗೆಯ ಸಂಗ್ರಹಣ ಕೋಣೆಯನ್ನು ತಾತ್ಕಾಲಿಕವಾಗಿ ಮುಚ್ಚಿಸಿ ಸೀಲ್ ಮಾಡಲು ನಿರ್ಧರಿಸಲಾಯಿತು. ಸಂಸ್ಥೆಯವರಿಗೆ ನೋಟಿಸ್ ನೀಡಿ ಸೂಕ್ತ ಸಮಜಾಯಿಸಿ ನೀಡಲು ಸೂಚಿಸಿದ್ದಾರೆ.
