
ಕರ್ನಾಟಕದ ಅತೀ ದೊಡ್ಡ ರಿಯಾಲಿಟಿ ಶೋ ಸ ರಿ ಗ ಮ ಪ ಲಿಟಲ್ ಚಾಂಪಿಯನ್ಸ್ ವೈಟ್ ಗೋಲ್ಡ್ ವಿನ್ನರ್ ಅಶ್ಮಿತ್ ಎ ಜೆಗೆ ಅಭಿನಂದನಾ ಸಮಾರಂಭದಲ್ಲಿ ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘ ಹಾಗೂ ಇದರ ಅಂಗ ಸಂಸ್ಥೆಯಾದ ಚೈತನ್ಯ ಸಹಕಾರಿ ಸಂಘ* ದ ಜಂಟಿ ಸಹಭಾಗಿತ್ವದಲ್ಲಿ ನಗರದ ಮಿನಿ ವಿಧಾನಸೌಧ ಸಂಕೀರ್ಣದಲ್ಲಿರುವ NGO ನಂದಿನಿ ಸಭಾಂಗಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಜೀವ ಕೋಟ್ಯಾನ್, ಉಪಾಧ್ಯಕ್ಷ ಅಣ್ಣು ಕುಂಜತ್ತ್ ಬೈಲ್, ರಾಜ್ಯ ಸಾಂಸ್ಕೃತಿಕ ಕಾರ್ಯದರ್ಶಿ ದಿನಕರ್ ಪಿ,ಸದಸ್ಯೆ ಸವಿತಾ ಸತೀಶ್, ಹಿತೈಷಿಗಳಾದ ನಾಗೇಶ್ ಬಲ್ಮಠ ಹಾಗೂ ರಾಕೇಶ್ ಕುಂದರ್ ಕರಂಬಾರು ಉಪಸ್ಥಿತರಿದ್ದರು.
ಇದಕ್ಕೆ ಪೂರಕವಾಗಿ ಕಳೆದ ಎರಡು ವರ್ಷ ಹಿಂದೆ ತಾ:10/02/2024 ನಗರದ ಉರ್ವಸ್ಟೋರಿನ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ನಮ್ಮ ಜಂಟಿ ವಾರ್ಷಿಕೋತ್ಸವದ ಸಂಗೀತ
ಸ್ಪರ್ಧೆಯಲ್ಲಿ ಸದ್ರಿ ಈ ಲಿಟಲ್ ಚಾಂಪಿಯನ್ಸ್ ಪ್ರಥಮ ಪ್ರಶಸ್ತಿ ವಿಜೇತರಾಗಿರುವುದು ಕಾಕತಾಳೀಯವಾಗಿದೆ.
