ರಾಜ್ಯ ಸ್ಕ್ವಾಯ್ ಚಾಂಪಿಯನ್ ಶಿಪ್ ನಲ್ಲಿ ಮಜ್ಲಿಸ್ ಪಬ್ಲಿಕ್ ಸ್ಕೂಲ್ ಗಾಣೆಮಾರ್ ವಿದ್ಯಾರ್ಥಿಗಳ ಸಾಧನೆ

ಬಂಟ್ವಾಳ: ಸ್ಕ್ವಾಯ್ ಅಶೋಸಿಯೇಷನ್ ಆಫ್ ಕರ್ನಾಟಕ ಆಯೋಜಿಸಿದ ಕರ್ನಾಟಕ ರಾಜ್ಯ ಸ್ಕ್ವಾಯ್ ಚಾಂಪಿಯನ್ ಶಿಪ್ ಮತ್ತು ಸೆಲೆಕ್ಷನ್ ಟ್ರಯಲ್ ನಲ್ಲಿ ಮಜ್ಲಿಸ್ ಪಬ್ಲಿಕ್ ಸ್ಕೂಲ್ ಗಾಣೆಮಾರ್ ಬಡಕಬೈಲ್ ಇದರ ವಿದ್ಯಾರ್ಥಿನಿಯಾದ ಆಯಿಷಾ ಇನಾಝ್ ಪ್ರಥಮ ಸ್ಥಾನ ಪಡೆದು (ಅಂಡರ್ 14 – open category) ಚಿನ್ನದ ಪದಕದ ಸಾಧನೆ ಮಾಡಿದರು. ಈ ಮೂಲಕ ಒಡಿಶಾ ದಲ್ಲಿ ನಡೆಯಲಿರುವ ರಾಷ್ಟ್ರ ಸ್ಕ್ವಾಯ್ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆದು ಆಯ್ಕೆಯಾದರು.
ಮತ್ತೋರ್ವ ವಿದ್ಯಾರ್ಥಿನಿ ಆಯಿಷಾ ರಿಮಾಸ್ ತೃತೀಯ ಸ್ಥಾನ ಪಡೆದು (under 14, -45 category) ಕಂಚಿನ ಪದಕದ ಸಾಧನೆ ಮಾಡಿದರು.
ಈ ಇಬ್ಬರು ವಿದ್ಯಾರ್ಥಿಗಳು ಸರ್ಫರಾಜ್ ಅಬ್ದುಲ್ ಖಾದಿರ್ ಇವರಿಂದ ತರಬೇತಿ ಪಡೆಯುತ್ತಿದ್ದಾರೆ. ಇವರ ಸಾಧನೆ ಯನ್ನು ಮಜ್ಲಿಸ್ ಪಬ್ಲಿಕ್ ಸ್ಕೂಲ್ ಗಾಣೆಮಾರ್ ಬಡಕಬೈಲ್ ಸಂಸ್ಥೆ ಅಭಿನಂದಿಸುತ್ತದೆ.

Advt
error: Content is protected !!