ಪ್ರಗತಿಯ ಪಥದಲ್ಲಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ: ಗ್ರಾಹಕ ಸ್ನೇಹಿ ಸೇವೆಗಳಿಗೆ ಜನಮನ್ನಣೆ!

ಹಳೆಯಂಗಡಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಾದ್ಯಂತ ತನ್ನ ಉತ್ಕೃಷ್ಟ ಸೇವೆಯಿಂದ ಜನಮನ್ನಣೆ ಗಳಿಸಿರುವ ‘ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಲಿ. ಹಳೆಯಂಗಡಿ’ ಸಂಸ್ಥೆಯು ಪ್ರಗತಿಯ ಪಥದಲ್ಲಿ ದಾಪುಗಾಲಿಡುತ್ತಿದೆ. ಸಂಸ್ಥೆಯ ಅಧ್ಯಕ್ಷರಾದ ಹೆಚ್. ವಸಂತ ಬೆರ್ನಾರ್ಡ್ ಅವರ ದಕ್ಷ ಆಡಳಿತ, ಆಡಳಿತ ಮಂಡಳಿಯ ದೂರದೃಷ್ಟಿ ಹಾಗೂ ಗ್ರಾಹಕ ಸ್ನೇಹಿ ಸಿಬ್ಬಂದಿಯ ಕಾರ್ಯವೈಖರಿಯಿಂದಾಗಿ ಅತೀ ಕಡಿಮೆ ಅವಧಿಯಲ್ಲಿ ಸಂಸ್ಥೆಯು 5 ಯಶಸ್ವಿ ಶಾಖೆಗಳನ್ನು ತೆರೆದು ಪ್ರಮುಖ ಹೆಗ್ಗುರುತು ಮೂಡಿಸಿದೆ.

ಪ್ರಶಸ್ತಿಗಳ ಗರಿ ಹಾಗೂ ಅತ್ಯಾಕರ್ಷಕ ಬಡ್ಡಿ ದರ:
ಸಂಸ್ಥೆಯು 72ನೇ ಅಖಿಲ ಭಾರತ ಸಹಕಾರ ಸಪ್ತಾಹ 2025 ರ ದ.ಕ. ಜಿಲ್ಲಾ “ಉತ್ತಮ ಪತ್ತಿನ ಸಹಕಾರ ಸಂಘ ಪ್ರಶಸ್ತಿ” ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 2023-24, 2024-25 ಹಾಗೂ 2025-26ನೇ ಸಾಲಿನ “ವಿಶಿಷ್ಟ ಸಾಧನ ಪ್ರಶಸ್ತಿ”ಗಳನ್ನು ಪಡೆದುಕೊಂಡು ಮುನ್ನಡೆಯುತ್ತಿದೆ. ಗ್ರಾಹಕರ ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸೊಸೈಟಿಯು ನಿರಖು ಠೇವಣಿಗಳ ಮೇಲೆ 10.25% ವರೆಗೆ ಅತ್ಯಾಕರ್ಷಕ ಬಡ್ಡಿ ದರವನ್ನು ನೀಡುತ್ತಿದೆ.

ಅತ್ಯಾಧುನಿಕ ಹಾಗೂ ತಂತ್ರಜ್ಞಾನ ಆಧಾರಿತ ಗ್ರಾಹಕ ಸೇವೆಗಳು:
ಗ್ರಾಹಕರ ಅನುಕೂಲಕ್ಕಾಗಿ ಹವಾನಿಯಂತ್ರಿತ ಬ್ಯಾಂಕಿಂಗ್ ವಿಭಾಗ, ಸಂಪೂರ್ಣ ಸಿಸಿ ಕ್ಯಾಮರಾ ಕಣ್ಣಾವಲಿನ ಭದ್ರತೆ ಹಾಗೂ Safe Locker ಸೌಲಭ್ಯಗಳನ್ನು ಒದಗಿಸಲಾಗಿದೆ. ಜೊತೆಗೆ ತಂತ್ರಜ್ಞಾನ ಆಧಾರಿತ SMS ಸಂದೇಶ ಸೌಲಭ್ಯ, ಮೊಬೈಲ್ ಬ್ಯಾಂಕಿಂಗ್, ಇ-ಸ್ಟಾಂಪ್ ಸೌಲಭ್ಯ, RTGS / NEFT ಮತ್ತು UPI / Scan & Pay ಪಾವತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಊಟದ ವಿರಾಮವಿಲ್ಲದೆ ನಿರಂತರ ವ್ಯವಹಾರ ನಡೆಸುವ ವ್ಯವಸ್ಥೆಯೊಂದಿಗೆ ಪ್ರತಿಯೊಂದು ಶನಿವಾರವೂ ಮಧ್ಯಾಹ್ನದವರೆಗೆ ಬ್ಯಾಂಕಿಂಗ್ ಸೇವೆ ಲಭ್ಯವಿದೆ.

ವಿವಿಧ ಸಾಲ ಸೌಲಭ್ಯಗಳು ಮತ್ತು ಮಹಿಳಾ ಸಬಲೀಕರಣ:
ಗ್ರಾಹಕರ ವಿವಿಧ ಅಗತ್ಯಗಳಿಗಾಗಿ ವಾಹನ ಸಾಲ, ಗೃಹ ಸಾಲ, ಚಿನ್ನಾಭರಣ ಸಾಲ, ಅಲ್ಪಾವಧಿ ಸಾಲ ಹಾಗೂ ವೇತನಾಧಾರಿತ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ ನೀಡಲು ಮಹಿಳಾ ಸ್ವ-ಸಹಾಯ ಗುಂಪುಗಳನ್ನು ಪ್ರೋತ್ಸಾಹಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ‘0’ ಬ್ಯಾಲೆನ್ಸ್ ಉಳಿತಾಯ ಖಾತೆ ತೆರೆಯುವ ವಿಶೇಷ ಅವಕಾಶ ಕಲ್ಪಿಸಲಾಗಿದೆ.

ಹೊಸ ತಂತ್ರಜ್ಞಾನ ಆಧಾರಿತ ಗೋಲ್ಡ್ ಪ್ಯೂರಿಟಿ ಟೆಸ್ಟಿಂಗ್ ಮೆಷಿನ್:
ಗ್ರಾಹಕರ ಚಿನ್ನಾಭರಣಗಳ ನೈಜತೆ ಹಾಗೂ ಪರಿಶುದ್ಧತೆಯನ್ನು ನಿಖರವಾಗಿ ಪರಿಶೀಲಿಸಲು ಹಳೆಯಂಗಡಿಯ ಪ್ರಧಾನ ಕಚೇರಿ ಶಾಖೆಯಲ್ಲಿ ಅತ್ಯಾಧುನಿಕ “ಗೋಲ್ಡ್ ಪ್ಯೂರಿಟಿ ಟೆಸ್ಟಿಂಗ್ ಮೆಷಿನ್” ಅಳವಡಿಸಲಾಗಿದೆ. ಸಾರ್ವಜನಿಕರೂ ಸಹ ತಮ್ಮ ಚಿನ್ನಾಭರಣಗಳನ್ನು ಅತ್ಯಂತ ಕಡಿಮೆ ಶುಲ್ಕದಲ್ಲಿ ಇಲ್ಲಿ ಪರಿಶುದ್ಧತೆ ತಪಾಸಣೆ (Purity Test) ಮಾಡಿಸಿಕೊಳ್ಳಬಹುದಾಗಿದೆ.
ಸಂಸ್ಥೆಯು ಹಳೆಯಂಗಡಿ (ಪ್ರಧಾನ ಕಚೇರಿ), ಪಡುಬಿದ್ರಿ, ಕಿನ್ನಿಗೋಳಿ, ಮೂಡಬಿದ್ರಿ ಹಾಗೂ ಉಡುಪಿಯಲ್ಲಿ ತನ್ನ ಸುಸಜ್ಜಿತ ಶಾಖೆಗಳ ಮೂಲಕ ಸಾರ್ವಜನಿಕರಿಗೆ ನಿರಂತರ ಮತ್ತು ಶ್ರೇಷ್ಠ ಸೇವೆಯನ್ನು ನೀಡುತ್ತಾ ಮುನ್ನಡೆಯುತ್ತಿದೆ.

Advt
error: Content is protected !!