
ಮಂಗಳೂರು: ಎಸ್ ಕೆಎಸ್ ಲಾ ಫರ್ಮ್ ಸುಸಜ್ಜಿತ ಕಚೇರಿಯನ್ನು ಸುರತ್ಕಲ್‌ನ ಅಭೀಶ್ ಮಾಲ್‌ನಲ್ಲಿ ಉದ್ಘಾಟಿಸಲಾಯಿತು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ವೈ. ಭರತ್ ಶೆಟ್ಟಿ ಮತ್ತು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ಕಚೇರಿಯನ್ನು ಉದ್ಘಾಟಿಸಿದರು.
ದೀಪ ಪ್ರಜ್ವಲಿಸಿ ಮಾತನಾಡಿದ ಶಾಸಕ ಭರತ್ ಶೆಟ್ಟಿ ಅವರು, “ಕ್ಷಿಪ್ರ ನ್ಯಾಯದಾನದಲ್ಲಿ ವಕೀಲರ ಪಾತ್ರ ಮಹತ್ವದ್ದು, ವಕೀಲರ ಸಕ್ರಿಯ ತೊಡಗಿಸಿಕೊಳ್ಳುವಿಕೆಯಿಂದ ನ್ಯಾಯದಾನ ಸುಲಲಿತವಾಗಿ ನಡೆಯುತ್ತದೆ“ ಎಂದರು.

ಕಚೇರಿಯನ್ನು ಉದ್ಘಾಟಿಸಿದ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ, ಸುರತ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಈ ಕಚೇರಿಯಿಂದ ಅನುಕೂಲವಾಗಲಿ ಎಂದು ಶುಭ ಹಾರೈಸಿದರು.
ಮಂಗಳೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಚ್.ವಿ. ರಾಘವೇಂದ್ರ, ಹಿರಿಯ ವಕೀಲರಾದ ಪುಷ್ಪಲತಾ ಯು.ಕೆ., ರಾಜೇಶ್ ಕುಮಾರ್ ಅಮ್ಟಾಡಿ, ನಟ ಗೌತಮ್ ಬಂಗೇರ, ನಿಕಟಪೂರ್ವ ಕಾರ್ಪೊರೇಟರ್ ಕುಮಾರಿ ಶ್ವೇತ ಪೂಜಾರಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ವಜ್ರಾಕ್ಷಿ ಶೆಟ್ಟಿ, ಉದ್ಯಮಿ ದಯಾನಂದ ಬಿ. ಶೆಟ್ಟಿ ಮೊದಲಾದವರು ಶುಭ ಹಾರೈಸಿದರು.
ವಕೀಲರಾದ ಶಕುಂತಳಾ ಕೆ. ಶೆಟ್ಟಿ, ಸುಕೇಶ್ ಕುಮಾರ್ ಶೆಟ್ಟಿ, ದಿನಕರ್ ಶೆಟ್ಟಿ, ಮೈನಾ ಶೆಟ್ಟಿ, ಸುಮಿತ್ರಾ ಶೆಟ್ಟಿ ಮತ್ತು ನಿವೃತ್ತ ಸರ್ಕಾರಿ ಅಭಿಯೋಜಕರಾದ ಶೇಖರ್ ಶೆಟ್ಟಿ ಬಳ್ಕೂರ್ ಮತ್ತು ಇತರರು ಸಂಯುಕ್ತವಾಗಿ ಕಚೇರಿಯನ್ನು ಮುನ್ನಡೆಸಲಿದ್ದಾರೆ.
