ಶ್ರೀ ಕ್ಷೇತ್ರ ಕದ್ರಿಯಲ್ಲಿ ಕದ್ರಿ ಕಲ್ಕೂರ ಪ್ರತಿಷ್ಠಾನದಿಂದ ಸೆ.4ರಂದು ರಾಷ್ಟ್ರೀಯ ಮಕ್ಕಳ ಉತ್ಸವ ಕೃಷ್ಣ ವೇಷ ಸ್ಪರ್ಧೆ

ಮಂಗಳೂರು: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ ನಾಲ್ಕು ದಶಕಗಳಿಂದ ಶ್ರೀ ಮಂಜುನಾಥ ದೇವಳದ ಸಹಯೋಗದೊಂದಿಗೆ ಕಲ್ಕೂರ ಪ್ರತಿಷ್ಠಾನವು ನಡೆಸಿಕೊಂಡು ಬಂದಿರುವ ರಾಷ್ಟ್ರ ಮಟ್ಟದ ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ಏರ್ಪಡಿಸಲಾಗಿದೆ. ಸೆ.4 ಶುಕ್ರವಾರ ಕೃಷ್ಣಾಷ್ಟಮಿಯಂದು ಬೆಳಗ್ಗೆ 9ರಿಂದ ಶ್ರೀ ಕೃಷ್ಣ ವರ್ಣ ವೈಭವ, ಬೆಳಿಗ್ಗೆ 10.30ಕ್ಕೆ ಮಹಿಳೆಯರು ಸಾಮೂಹಿಕವಾಗಿ ಸಾಂಪ್ರದಾಯಿಕವಾಗಿ ಹಾಡನ್ನು ಹಾಡುತ್ತಾ ಕಡಗೋಲಿನಿಂದ ಮೊಸರು (ಮಜ್ಜಿಗೆ) ಕಡೆದು ಬೆಣ್ಣೆ ತೆಗೆಯುವುದು. ಮಧ್ಯಾಹ್ನ 12 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆಯಲ್ಲಿ ಗಣ್ಯಾತಿಗಣ್ಯರು ಮತ್ತು ಪುಟಾಣಿ ಕೃಷ್ಣರು ಮತ್ತು ಮಾತೆಯರ ಸಮ್ಮುಖದಲ್ಲಿ ದೀಪ ಪ್ರಜ್ವಲನೆ, ಮಹಿಳೆಯರು ತಮ್ಮದೇ ಆದ ಸಾಂಪ್ರದಾಯಿಕ ಶೈಲಿಯಲ್ಲಿ 6 ತಿಂಗಳ ಕೆಳಗಿನ ಕಂದಮ್ಮಗಳನ್ನು ತೊಟ್ಟಿಲಿಗೆ ಹಾಕುತ್ತಾ ಅವರದೇ ಭಾಷೆಯಲ್ಲಿ ಜೋಗುಳ ಹಾಡುತ್ತಾ ಮಗುವನ್ನು ತೊಟ್ಟಿಲಲ್ಲಿ ತೂಗುವುದು. ಅವರ ಮನೆಮಂದಿ ಬಂಧುಬಳಗ ಇಷ್ಟ ಮಿತ್ರರೊಂದಿಗೆ, ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದರು.
ರಾತ್ರಿ 12ರ ತನಕ ವಿವಿಧ ಸ್ಪರ್ಧೆಗಳನ್ನು ಒಟ್ಟು 44 ವಿಭಾಗಗಳಲ್ಲಿ, 12 ವೇದಿಕೆಗಳಲ್ಲಿ ಏಕಕಾಲದಲ್ಲಿ ಆಯೋಜಿಸಲಾಗಿದೆ. ಮಧ್ಯಾಹ್ನ 12ರಿಂದ ರಾತ್ರಿ 12ರವರೆಗೆ ವಿವಿಧ ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿ ಜೋಡಿಸಲಾಗಿದೆ. ರಾತ್ರಿ 12 ಗಂಟೆಗೆ ಆರ್ರ್ಘ್ಯ ಪ್ರದಾನ – ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಳ್ಳಲಿದೆ.


ರಾಷ್ಟ್ರವ್ಯಾಪಿ ಮಾನ್ಯತೆಗೊಂಡ ಶ್ರೀ ಕೃಷ್ಣವೇಷ ಸ್ಪರ್ಧೆಗಳು ಒಟ್ಟು 44 ವಿಭಾಗಗಳಲ್ಲಿ ಕದ್ರಿ ದೇವಳದ ಒಟ್ಟು ಆವರಣದಲ್ಲಿ, ಶ್ರೀ ಮಹಾಗಣಪತಿ ದೇವಸ್ಥಾನ, ಅಭಿಷೇಕ ಮಂದಿರ, ಕದ್ರಿಕೆರೆ, ಅಶ್ವತಕಟ್ಟೆ ಬಳಿ, ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ ನಂದಗೋಕುಲ ವೇದಿಕೆ, ಅಭಿಷೇಕ ಮಂದಿರ 1ನೇ ಮಹಡಿ, ಕಲ್ಯಾಣ ಮಂಟಪ, ಮಂಜುಶ್ರೀ, ಅಭಿಷೇಕ ಮಂದಿರ, ಮಾತಾಕೃಪಾ ಸಹಿತ ಎಲ್ಲೆಡೆ ಏಕಕಾಲದಲ್ಲಿ ನಡೆಯಲಿದೆ.

ಯಾವೆಲ್ಲ ವಿಭಾಗಗಳಲ್ಲಿ ನಡೆಯಲಿದೆ?
ತೊಟ್ಟಿಲ ಕೃಷ್ಣ: ವಿಭಾಗದಲ್ಲಿ 6 ತಿಂಗಳ ಕೆಳಗಿನ ಶಿಶುಗಳಿಗೆ. ಸ್ಥಳ : ಪ್ರಧಾನ ವೇದಿಕೆ (ಮಕ್ಕಳ ಮಾತಾಪಿತರು ತಮ್ಮ ಮಾತೃ ಭಾಷಾ ಶೈಲಿಯಲ್ಲಿ ಜೋಗುಳ ಹಾಡುವ ಮೂಲಕ ಸಾಂಪ್ರದಾಯಿಕ ಉಡುಗೆಯೊಂದಿಗೆ ಭಾಗವಹಿಸಬಹುದು) ಸಮಯ ಮಧ್ಯಾಹ್ನ 1.30 ರಿಂದ

ಕಂದ ಕೃಷ್ಣ: ವಿಭಾಗದಲ್ಲಿ 6 ತಿಂಗಳಿಂದ 12 ತಿಂಗಳ ಒಳಗಿನ ಕಂದಮ್ಮಗಳು ಭಾಗವಹಿಸಬಹುದಾಗಿದ್ದು ಮುದ್ದು ಕಂದಮ್ಮಗಳ ಜೊತೆ ತಾಯಂದಿರು ಕೂಡಾ ವೇದಿಕೆಗೆ ಬರಬಹುದು. ಸ್ಥಳ : ಮಾತಾಕೃಪಾ (ಎಲ್ಲೂರು ರಾಮಚಂದ್ರ ಭಟ್) ಸಮಯ: ಮಧ್ಯಾಹ್ನ 2 ರಿಂದ ಅವಧಿ : 2 ನಿ.

ಮುದ್ದು ಕೃಷ್ಣ : ವಿಭಾಗದಲ್ಲಿ 1 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 2 ವರ್ಷಕ್ಕಿಂತ ಕೆಳಗಿನ ಕಂದಮ್ಮಗಳು ಪಾಲ್ಗೊಳ್ಳಬಹುದಾಗಿದ್ದು, ಮುದ್ದು ಕಂದಮ್ಮಗಳ ಜೊತೆ ತಾಯಂದಿರು ಕೂಡಾ ವೇದಿಕೆಗೆ ಬರಬಹುದು. ಸ್ಥಳ: ಅಭಿಷೇಕ ಮಂದಿರ ಸಮಯ : 2 ರಿಂದ ಅವಧಿ : 2 ನಿ.

ತುಂಟ ಕೃಷ್ಣ : ವಿಭಾಗದಲ್ಲಿ 2 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 3 ವರ್ಷಕ್ಕಿಂತ ಕೆಳಗಿನ ಪುಟಾಣಿಗಳು ಭಾಗವಹಿಸಬಹುದು. ಸ್ಥಳ:ಶ್ರೀ ಮಂಜುಶ್ರೀ ಸಭಾಂಗಣದ ಪಡುವೇದಿಕೆ. ಸಮಯ: ಮಧ್ಯಾಹ್ನ 2 ರಿಂದ

ಬಾಲಕೃಷ್ಣ: ವಿಭಾಗದಲ್ಲಿ ಅಂಗನವಾಡಿ, ಎಲ್.ಕೆ.ಜಿ. ಪುಟಾಣಿಗಳು ಭಾಗವಹಿಸಬಹುದಾಗಿದೆ. ಸ್ಥಳ: ಅಭಿಷೇಕ ಮಂದಿರದ ಪ್ರಥಮ ಅಂತಸ್ತು ಸಮಯ: 2 ರಿಂದ ಅವಧಿ: 3 ನಿ.

ಕಿಶೋರ ಕೃಷ್ಣ: ವಿಭಾಗದಲ್ಲಿ ಯು.ಕೆ.ಜಿ. ಮತ್ತು 1ನೇ ತರಗತಿ ಪುಟಾಣಿಗಳು ಪಾಲ್ಗೊಳ್ಳಬಹುದು . ಸ್ಥಳ: ಶನಿಪೂಜಾ ಮಂದಿರ ಸಮಯ: 2 ರಿಂದ ಅವಧಿ : 3 ನಿ.

ಶ್ರೀ ಕೃಷ್ಣ : ವಿಭಾಗದಲ್ಲಿ 2, 3, 4ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಸ್ಥಳ:”ಮಂಜಶ್ರೀ” (ಮೂಡು ವೇದಿಕೆ), ಸಮಯ: 2 ರಿಂದ ಅವಧಿ : 3 ನಿ.

ಗೀತಾ ಕೃಷ್ಣ : ವಿಭಾಗದಲ್ಲಿ 7ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. (ವೇಷಭೂಷಣದೊಂದಿಗೆ ಗೀತೋಪದೇಶದ ಚಿತ್ರಣ ಮತ್ತು ಯಾವುದೇ ಅಧ್ಯಾಯದ ಶ್ಲೋಕಗಳನ್ನು ಕಂಠಪಾಠ ಹೇಳಬೇಕು. 3+ 2 ನಿ.) ಸ್ಥಳ: ಶನಿಪೂಜಾ ಮಂದಿರ ಕೆಳ ಅಂತಸ್ತು ಸಮಯ : ಸಂಜೆ 4 ರಿಂದ

ಶಂಖನಾದ : 7ನೇ ತರಗತಿವರೆಗಿನ ಮಕ್ಕಳಿಗಾಗಿ ಸಾಂಪ್ರದಾಯಿಕ ಉಡುಗೆ ಅಥವಾ ಕೃಷ್ಣವೇಷಧಾರಿಗಳು ಭಾಗವಹಿಸಬಹುದು. ಸ್ಥಳ : ಕದ್ರಿ ಕೆರೆ ಅಶ್ವಥ ಕಟ್ಟೆ ಬಳಿ ಸಮಯ: ಮಧ್ಯಾಹ್ನ : 2 ರಿಂದ

ಉದ್ಯೋಷ: ಸಮಯ : 2 ರಿಂದ 7ನೇ ತರಗತಿ ಮೇಲ್ಪಟ್ಟು ಹಾಗೂ ಮುಕ್ತ ವಿಭಾಗ ಸಾಂಪ್ರದಾಯಿಕ ಉಡುಗೆ ಅಥವಾ ಕೃಷ್ಣವೇಷಧಾರಿಗಳು ಭಾಗವಹಿಸಬಹುದು. ಸ್ಥಳ : ಕದ್ರಿಕೆರೆ ಅಶ್ವಥಕಟ್ಟೆ ಬಳಿ.

ರಾಧಾಕೃಷ್ಣ: ವಿಭಾಗದಲ್ಲಿ 7ನೇ ತರಗತಿಯ ವರೆಗಿನ ಮಕ್ಕಳಿಗೆ. ರಾಧಾ ಮತ್ತು ಕೃಷ್ಣ ಜೋಡಿ ಅಭಿನಯ. ಭಾಗವಹಿಸಬಹುದಾಗಿದೆ.(ಜೋಡಿ) ಸ್ಥಳ : ಪ್ರಧಾನ ವೇದಿಕೆ. ಸಮಯ: 2 ರಿಂದ. ಅವಧಿ : 3 ನಿ.

ರಾಧಾ ಮಾಧವ: ವಿಭಾಗದಲ್ಲಿ 7ನೇ ತರಗತಿ ಮೇಲ್ಪಟ್ಟ ಮಕ್ಕಳು ಭಾಗವಹಿಸಬಹುದಾಗಿದೆ.(ರಾಧಾ ಮತ್ತು ಮಾಧವ ಜೋಡಿ) ಸ್ಥಳ : ಪ್ರಧಾನ ವೇದಿಕೆ. ಸಮಯ: 3 ರಿಂದ ಅವಧಿ : 3 ನಿ.

ಯಶೋದ ಕೃಷ್ಣ: ವಿಭಾಗದಲ್ಲಿ ಯಾವುದೇ ವಯೋಮಾನದ ನಿರ್ಬಂಧವಿಲ್ಲದೆ ಮಹಿಳೆ ಯಶೋದೆಯಾಗಿ ಯಾವುದೇ ಮಗು ಕೃಷ್ಣನಾಗಿ ಅಭಿನಯಪೂರ್ವಕವಾಗಿ ಭಾಗವಹಿಸಬಹುದು. ಮಹಿಳೆಗೆ ವಯೋಮಿತಿ ನಿರ್ಬಂಧವಿಲ್ಲ. ಮಗು(ಕೃಷ್ಣ) ವಯೋಮಿತಿ ನಿರ್ಬಂಧವಿಲ್ಲ. ಸ್ಥಳ : ಪ್ರಧಾನ ವೇದಿಕೆ. ಸಮಯ: 4.00ರಿಂದ ಅವಧಿ : 3 ನಿ.

ದೇವಕಿ ಕೃಷ್ಣ: ಈ ಹಿಂದೆ ಕದ್ರಿ ಶ್ರೀ ಕ್ಷೇತ್ರದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಕೃಷ್ಣ ವೇಷ ಧರಿಸಿ ಸ್ಪರ್ಧಾಳುಗಳಾಗಿ ಭಾಗವಹಿಸಿದ ತಾಯಂದಿರು ದೇವಕಿಯಾಗಿ ಅಥವಾ ಯಶೋಧೆಯಾಗಿ ಭಾಗವಹಿಸಬಹುದಾಗಿದೆ. ಈ ಸ್ಪರ್ಧಾಳು ತಮ್ಮ ಮಗು ಅಥವಾ ಯಾವುದೇ ಕೃಷ್ಣವೇಷಧಾರಿ ಮಗುವಿನೊಂದಿಗೆ ಬರಬಹುದು. ಸ್ಥಳ : ಪ್ರಧಾನ ವೇದಿಕೆ. ಸಮಯ: 5ರಿಂದ ಅವಧಿ : 3 ನಿ.

ವಸುದೇವ ಕೃಷ್ಣ : ( ಮುಕ್ತ ವಿಭಾಗ)
ಪುರುಷ ವಸುದೇವನಾಗಿ ಮಗುವನ್ನು ಪ್ಲಾಸ್ಟಿಕ್ ರಹಿತವಾದ ಯಾವುದೇ ಬೆತ್ತ ಅಥವಾ ಬೀಳು ಇನ್ನಿತರ ಬುಟ್ಟಿಗಳಲ್ಲಿ ತಲೆಯ ಮೇಲೆ ಹೊತ್ತು ಸಾಂಪ್ರದಾಯಿಕ ಉಡುಗೆಯೊಂದಿಗೆ ಭಾಗವಹಿಸಬಹುದು. ವಯೋಮಿತಿ ನಿರ್ಬಂಧವಿಲ್ಲ. (ಮಹಿಳೆಯರೂ ಪುರುಷವೇಷದೊಂದಿಗೆ ವಸುದೇವನಾಗಿ ಭಾಗವಹಿಸಬಹುದು.) ಸ್ಥಳ: ಪ್ರಧಾನ ವೇದಿಕೆ. ಸಮಯ : 6ರಿಂದ ಅವಧಿ : 3 ನಿ.

ಯಕ್ಷ ಕೃಷ್ಣ: ವಿಭಾಗದಲ್ಲಿ ಜಿಲ್ಲೆಯ ವಿಶೇಷ ಸಾಂಪ್ರದಾಯಿಕ ಶೈಲಿಯಾದ ಯಕ್ಷಗಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿಯನ್ನು ಮೂಡಿಸುವದೃಷ್ಟಿಯಿಂದ “ಯಕ್ಷ ಕೃಷ್ಣ” (ತೆಂಕು /ಬಡಗು) 10ನೇ ತರಗತಿವರೆಗಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಬಹುದಾಗಿದೆ. ಈ ವಿಭಾಗದಲ್ಲಿ ಭಾಗವಹಿಸುವ ಮಕ್ಕಳು ಸಾಂಪ್ರದಾಯಿಕಯಕ್ಷಗಾನ ವೇಷಭೂಷಣಧರಿಸಬೇಕಾಗುವುದು (ಗರಿಷ್ಠ 5 ನಿ.)

ಸ್ಥಳ: ಪ್ರಧಾನ ವೇದಿಕೆ ಸಮಯ: ಬೆಳಿಗ್ಗೆ 11ರಿಂದ ಗರಿಷ್ಠ 5 ನಿ.

ಕೃಷ್ಣ- ಕುಚೇಲ: ಕೃಷ್ಣ ಸುದಾಮರ ಸನ್ನಿವೇಶವನ್ನು (ಕನಿಷ್ಠ 2 ಜನ) ಗುಂಪಿನಲ್ಲಿ ದೃಶ್ಯ ನೃತ್ಯದೊಂದಿಗೆ ಪ್ರದರ್ಶಿಸಲು ಅವಕಾಶ. ಅವಧಿ : 3ನಿ. ವಯೋಮಿತಿ ನಿರ್ಬಂಧವಿಲ್ಲ. ಸ್ಥಳ : ಪ್ರಧಾನ ವೇದಿಕೆ – ಸಂಜೆ : 7ರಿಂದ

ನಂದ (ಸಮೂಹ ವಿಭಾಗ)
ಗೋಕುಲ : ಸಾಮೂಹಿಕವಾಗಿ ಶ್ರೀ ಕೃಷ್ಣನ ಕಥಾನಕದ ಯಾವುದೇ ಸನ್ನಿವೇಶದ ಪ್ರದರ್ಶನವನ್ನು (ಕನಿಷ್ಠ 5 ಜನ) ಗುಂಪಿನಲ್ಲಿ ಸ್ತಬ್ಧ ಚಿತ್ರದೃಶ್ಯ ಸ್ವರೂಪದೊಂದಿಗೆ ಪ್ರದರ್ಶಿಸಲು ಅವಕಾಶ ವಯೋಮಿತಿ ನಿರ್ಬಂಧವಿಲ್ಲ. ಸ್ಥಳ : ಪ್ರಧಾನ ವೇದಿಕೆ. ಸಮಯ: 8.00ರಿಂದ (ಸಮಯ 4+1 ನಿಮಿಷ)

ಛಾಯಾಕೃಷ್ಣ: ದೇವಳದ ಪ್ರಾಂಗಣದ ನಿಗದಿತ ವೇದಿಕೆಯಲ್ಲಿ ಶ್ರೀ ಕೃಷ್ಣ ವೇಷಧಾರಿಯಾಗಿ ಛಾಯಾಚಿತ್ರಕ್ಕೆ : ಅನುಕೂಲಕರವಾಗಿ ಆಕರ್ಷಕ ಭಂಗಿಯಲ್ಲಿ ಎಲ್ಲಾ ಸ್ಪರ್ಧಾಳುಗಳು ಪಾಲ್ಗೊಳ್ಳಬಹುದು. (ವಯೋಮಿತಿ 2.) STILL PHOTOGRAPHY kalkuraadvt@gmial.com तं 6ರೊಳಗೆ ಕಳುಹಿಸಿಕೊಡಬೇಕು. ಸ್ಥಳ : ಛಾಯಾ ಕೃಷ್ಣ ವೇದಿಕೆ

ಶ್ರೀಕೃಷ್ಣ ವರ್ಣ ವೈಭವ
: ವರ್ಗ 1: ಬಣ್ಣಗಾರಿಕೆ ಸ್ಪರ್ಧೆ : ಪುಟಾಣಿ (LKG-II), ಶಿಶು (III-IV), ಬಾಲ (V-VII)

ಚಿತ್ರಕಲಾ ಸ್ಪರ್ಧೆ

ವರ್ಗ 2: ಚಿತ್ರಕಲಾ ಸ್ಪರ್ಧೆ :- ಕಿಶೋರ (VIII-X) – ವಿಷಯ : ಸುಧಾಮ ಕೃಷ್ಣ ಮುಕ್ತ ವಿಭಾಗ (ಪಿಯುಸಿ ಮತ್ತು ಮೇಲ್ಪಟ್ಟ ವಿಷಯ : ವಿಶ್ವರೂಪ ದರ್ಶನ ಅಥವಾ ಗೋಪಾಲ ಕೃಷ್ಣ ಭಾಗವಹಿಸುವವರು ಅಗತ್ಯವಿರುವ ಸಾಮಗ್ರಿಗಳೊಂದಿಗೆ ಬರಬೇಕೆಂದು ನಿರೀಕ್ಷಿಸಲಾಗಿದೆ ಸ್ಥಳ: ಮಂಜುಶ್ರೀ ಸಭಾಂಗಣ. ಸಮಯ: ಬೆಳಿಗ್ಗೆ 9:00 ಗಂಟೆಗೆ

ಅಚ್ಚುತ್ತ ರಸಪ್ರಶ್ನೆ : -ថ

7ನೇ ತರಗತಿವರೆಗಿನ (ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳುಭಾಗವಹಿಸಬಹುದು.) ಸ್ಥಳ :ಅಭಿಷೇಕ ಮಂದಿರ ಸಮಯ: 6.00ರಿಂದ.

ಮಾಧವ
: ಹೈಸ್ಕೂಲ್ ಪಿ.ಯು.ಸಿ (ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳುಭಾಗವಹಿಸಬಹುದು.)

ರಸಪ್ರಶ್ನೆ-
ಸ್ಥಳ :ಅಭಿಷೇಕ ಮಂದಿರ ಸಮಯ: 6.00ರಿಂದ.

ಮುಕ್ತ ವಿಭಾಗ (18 ವರ್ಷ ಮೇಲ್ಪಟ್ಟವರಿಗೆ)ಸ್ಥಳ : ಅಭಿಷೇಕ ಮಂದಿರ ಸಮಯ: 6.00ರಿಂದ

(ಅಂತಿಮ ಸುತ್ತು ಪ್ರಧಾನ ವೇದಿಕೆಯಲ್ಲಿ)

ರಸಪ್ರಶ್ನೆ-ಲಿಖಿತ

ಪಂಡರಾ :

ಪ್ರಾಥಮಿಕ ಶಾಲಾ ವಿಭಾಗ (1-7ನೇ ತರಗತಿ) 1)

ಪುರ ವಿಠಲ

2) ಪ್ರೌಢ ಶಾಲಾ ವಿಭಾಗ (8-10ನೇ ತರಗತಿ)

ಕೇಶವ
( ನೃತ್ಯ ಭಜನಾ ಸ್ಪರ್ಧೆ)

ಸ್ಥಳ : ಕದ್ರಿ ದೇವಳದ ಪ್ರಾಂಗಣ ಪ್ರಾರಂಭ : ಬೆಳಿಗ್ಗೆ : 9.00ಕ್ಕೆ ತಂಡದಲ್ಲಿ ಕನಿಷ್ಟ 8. ಗರಿಷ್ಠ 12 ಮಂದಿ, ಮಂಡಲದ ಮಧ್ಯೆ ಇರುವ ಕೃಷ್ಣ ವೇಷಧಾರಿಯ ಸುತ್ತ ನೃತ್ಯ ಮಾಡುತ್ತಾ ಭಜನೆ ಮಾಡಬೇಕು. ಧ್ವನಿ ಮುದ್ರಿತ ಸಂಗೀತಕ್ಕೆ ಅವಕಾಶವಿಲ್ಲ. ಒಂದು ತಂಡದಲ್ಲಿರುವವರು ಮತ್ತೊಂದು ತಂಡದಲ್ಲಿ ಭಾಗವಹಿಸುವಂತಿಲ್ಲ. ಭಾಷಾ ನಿರ್ಬಂದವಿಲ್ಲ. ಸಮಯ : 6ನಿ.

ಪೂರ್ವಭಾವಿ ಸ್ಪರ್ಧೆಗಳು : ಆಗಸ್ಟ್ 30, ಆದಿತ್ಯವಾರ ಬೆಳಿಗ್ಗೆ 9ರಿಂದ ಶಾರದಾ ವಿದ್ಯಾಲಯ ಕೊಡಿಯಾಲ್‌ ಬೈಲ್

ಶ್ರೀಕೃಷ್ಣ ಗಾನ : ವೈಭವ

ಮಕ್ಕಳಿಗಾಗಿ ಶ್ರೀಕೃಷ್ಣನಿಗೆ ಸಂಬಂಧಪಟ್ಟ ಸಂಗೀತ ಸ್ಪರ್ಧೆ.4 ವಿಭಾಗಗಳಲ್ಲಿ ನಡೆಯುವುದು. (ಶಿಶು, ಬಾಲ, ಕಿಶೋರ, ತರುಣ) ಗರಿಷ್ಠ 4 ನಿಮಿಷ.

ರಂಗೋಲಿಯಲ್ಲಿ : ಚುಕ್ಕಿ ರಂಗೋಲಿಯನ್ನೇ ರಚಿಸತಕ್ಕದ್ದು. ರಂಗೋಲಿಯನ್ನು ರಂಗೋಲಿ ಪುಡಿಯಿಂದಲೇ ಅಲಂಕರಿಸುವುದು. 3×3 ಅಡಿ ಸ್ಥಳಾವಕಾಶವನ್ನು ನೀಡಲಾಗುವುದು. 10ನೇ ತರಗತಿವರೆಗೆ – ಚುಕ್ಕಿ ರಂಗೋಲಿ ಮುಕ್ತ ವಿಭಾಗ ಚುಕ್ಕಿರಹಿತ (ಪ್ರೀಹ್ಯಾಂಡ್) ವಿನ್ಯಾಸದಿಂದ ರಂಗೋಲಿಯಲ್ಲಿ ಶ್ರೀಕೃಷ್ಣ ಕಾಲವಕಾಶ ಗರಿಷ್ಟ 2 ಗಂಟೆ

ಶ್ರೀ ಕೃಷ್ಣ ಕಥಾ

: ಶ್ರೀ ಕೃಷ್ಣ ಕುರಿತ ಕಥೆ ಹೇಳುವುದು

1) ಪ್ರಾಥಮಿಕ ಶಾಲಾ ವಿಭಾಗ (1-7ನೇ ತರಗತಿ) 2) ಪ್ರೌಢ ಶಾಲಾ ವಿಭಾಗ (8-10ನೇ ತರಗತಿ)

3) ಕಾಲೇಜು ವಿಭಾಗ ಭಾಷಾ ನಿರ್ಬಂಧವಿಲ್ಲ ಸಮಯ : 5 ನಿ.

ONLINE ವಿಭಾಗ ರಾಷ್ಟ್ರೀಯ ಅಂತರಾಷ್ಟ್ರೀಯ ಸ್ಪರ್ಧಾಳುಗಳಿಗೆ

ವೃಕ್ಷ ಕೃಷ್ಣ

: ಶ್ರೀ ಕೃಷ್ಣ ವೇಷಧಾರಿ ಮನೆಮಂದಿಯೊಂದಿಗೆ ಗಿಡ ನೆಡುವ / ವೃಕ್ಷಪ್ರೇಮ ತೋರುವ 3 ನಿಮಿಷದ 2 MP4 format &, kalkuravrikshakrishna36@gmail.com

ಗೋಪಾಲಕೃಷ್ಣ

: ಶ್ರೀ ಕೃಷ್ಣ ವೇಷಧಾರಿ ದನಕರುವಿನೊಂದಿಗೆ ಗೋಪ್ರೇಮ ತೋರುವ ಸನ್ನಿವೇಶದ 3 ನಿಮಿಷದ ವಿಡಿಯೋ MP4 formatನಲ್ಲಿ ಕಳುಹಿಸಬೇಕು.

ಕೃಷ್ಣ ರೀಲ್ಸ್ (Reels)

ಕೃಷ್ಣವೇಷ ಸ್ಪರ್ಧೆ ನಡೆಯುವ ದಿನ ಕದ್ರಿಯ ದೇವಸ್ಥಾನದ ಪರಿಸರದಲ್ಲಿ ಚಿತ್ರೀಕರಿಸಿದ ರೀಲ್ಸ್ 06-09- 2026ರ ಸಂಜೆಯೊಳಗೆ ಈ ಕೆಳಗಿನ ಇನ್ಮಾಗ್ರಾಮ್‌ ಗೆ ಟ್ಯಾಗ್ ಮಾಡಿ. ಸಮಯಾವಕಾಶ: 40-60 ಸೆಕೆಂಡು. ಯಾವುದೇ ಹಿನ್ನೆಲೆ ಸಂಗೀತ ಬಳಸಬಹುದು. R Size 9:16 Vertical Instagram – @kalkurakrishnavesha

ಸ್ಪರ್ಧಾಳುಗಳೆಲ್ಲರಿಗೂ ಬಹುಮಾನ ಉಡುಗೊರೆ :ಭಾಗವಹಿಸುವ ಎಲ್ಲಾ ವೇಷಧಾರಿಗಳಿಗೆ ಉಡುಪಿ ಕಡಗೋಲು ಕೃಷ್ಣನ

ಪಂಚಲೋಹದ ವಿಗ್ರಹ, ಶ್ರೀ ಕೃಷ್ಣ ಚರಿತ್ರೆ ಪುಸ್ತಕ, ಕದ್ರಿ ಶ್ರೀ ಮಂಜುನಾಥದೇವರ ಭಾವಚಿತ್ರ, ಕೊಳಲು, ಪ್ರೋತ್ಸಾಹಕರಿಂದ ನೀಡಲ್ಪಟ್ಟ ಇತರ ಉಡುಗೊರೆಗಳು ಹಾಗೂ ಪ್ರಶಂಸನಾ ಪತ್ರ ಮತ್ತು ಶ್ರೀಮದ್ ಭಗವದ್ಗೀತೆಯ ಪ್ರತಿಯನ್ನು ಆಕರ್ಷಕ ಬಟ್ಟೆ ಚೀಲದೊಂದಿಗೆ ನೀಡಲಾಗುವುದು.

ಬಹುಮಾನಗಳು :ಎಲ್ಲಾ ವಿಭಾಗದ ವಿಜೇತರಿಗೆ ಮೇಲ್ಕಾಣಿಸಿದ ಉಡುಗೊರೆಯ ಜೊತೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು. ವಿಶೇಷ ಉಡುಗೊರೆಗಳನ್ನು ಸ್ಪರ್ಧಾ ಸ್ಥಳದಲ್ಲೇ ಭಾಗವಹಿಸಿದ ತಕ್ಷಣ ನೀಡುವುದಲ್ಲದೆ ಫಲಿತಾಂಶವನ್ನು ಅದೇ ದಿನ ಸಂಜೆ ಸಮಾರೋಪ ಸಮಾರಂಭದಲ್ಲಿ ಮತ್ತು ಬಹುಮಾನಗಳನ್ನು ಮುಂದಿನ ದಿನಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೀಡಲಾಗುವುದು.

* ಅತೀ ಹೆಚ್ಚಿನ ಸ್ಪರ್ಧಾಳುಗಳು ಭಾಗವಹಿಸಿದ ವಿದ್ಯಾ ಸಂಸ್ಥೆಗೆ ಪಾರಿತೋಷಕ ನೀಡಲಾಗುವುದು.

* ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.

* ಕೃಷ್ಣ ವೇಷಧಾರಿ ಪುಟಾಣಿಗಳ ಗ್ರೂಪ್ ಫೋಟೋ: ಮಧ್ಯಾಹ್ನ 3.30ಕ್ಕೆ ಪತ್ರಿಕೆ /ದೃಶ್ಯ ಮಾಧ್ಯಮಗಳಿಗೆ ವಿಶೇಷವಾಗಿ ಕಂದಮ್ಮಗಳಗ್ರೂಪ್ ಫೋಟೋ ತೆಗೆಯುವ ವ್ಯವಸ್ಥೆ ಶ್ರೀ ಕ್ಷೇತ್ರದ ದೀಪಸ್ತಂಭದ ಎದುರುಗಡೆ ಮಾಡಲಾಗಿದೆ.

ಎಲ್ಲಾ ಮಕ್ಕಳಿಗೆಬಿಸಿ ಹಾಲು / ಪೇಡ- ಐಸ್‌ಕ್ರೀಮ್

ಬಿಸಿ ಹಾಲು / ಪೇಡ- ಐಸ್‌ಕ್ರೀಮ್, ಚಾಕ್‌ಲೆಟ್ ಮಕ್ಕಳಿಗೆ ಮಾತ್ರ: ಈ ಮಕ್ಕಳ ಉತ್ಸವದಲ್ಲಿ ಸ್ಪರ್ಧಿಸುವ ಸ್ಪರ್ಧಾಳು ಮಕ್ಕಳಿಗೆ ನೀಡಲಾಗುವುದು.

*ಈ ವಿಶೇಷ ಉತ್ಸವದಲ್ಲಿ ಭಾಗವಹಿಸುವ ಅಸಕ್ತ ಅಂಗವಿಕಲ ಹಾಗೂ ಬುದ್ದಿಮಾಂದ್ಯ ಮಕ್ಕಳಿಗೆ ಮತ್ತು ಸಂಘಟನೆಗಳಿಗೆ ವಿಶೇಷವಾಗಿ ಪ್ರೋತ್ಸಾಹ ನೀಡಲಾಗುವುದು

ಈ ಬಾರಿಯ ವಿಶೇಷತೆ

*ಒಟ್ಟು 44 ವಿಭಾಗದಲ್ಲಿ ಏಕ ಕಾಲದಲ್ಲಿ ಕದ್ರಿ ದೇವಳದ ಒಟ್ಟು 12 ವೇದಿಕೆಗಳಲ್ಲಿ ಸ್ಪರ್ಧೆಗಳು ಜರಗಲಿವೆ.

* ಶ್ರೀ ಕೃಷ್ಣ ರಸಪ್ರಶ್ನೆ-ಬಾಲಕೃಷ್ಣ ರಸಪ್ರಶ್ನೆ ಸ್ಪರ್ಧಾಳುಗಳಿಗೆ ಬಹುಮಾನಾರ್ಥವಾಗಿ ಸುಮಾರು 200ಕ್ಕೂ ಮಿಕ್ಕಿ ನಿತ್ಯ ಪೂಜಾ ಅಥವಾ ಸಾಂಸ್ಕೃತಿಕ ಪರಿಕರಗಳನ್ನು (ಶಂಖ, ಜಾಗಟೆ, ಬೆಳ್ಳಿ ತುಳಸಿ ಮಣಿ ಸರ, ಬೆಳ್ಳಿಕಟ್ಟಿದ ಅಭಿಷೇಕ ಶಂಖ, ಮುದ್ರೆ, ತಾಳ, ಆರತಿ, ದೀಪ ಇತ್ಯಾದಿ ನೀಡಲಾಗುವುದು.)

* ರಾತ್ರಿ 12 ಗಂಟೆಗೆ ಶ್ರೀ ಕೃಷ್ಣ ದೇವರಿಗೆ 12 ಬಗೆಯ ಉಂಡೆಗಳು, ಚಕ್ಕುಲಿ, ಕಡುಬು ಇನ್ನಿತರ ಖಾದ್ಯಗಳನ್ನು ನೈವೇದ್ಯ ಮಾಡಿ ನೆರೆದ ಮಕ್ಕಳಿಗೆ ಪ್ರಸಾದರೂಪವಾಗಿ ಉಂಡೆ ಚಕ್ಕುಲಿಗಳನ್ನು ವಿತರಿಸಲಾಗುವುದು. ಸಾರ್ವಜನಿಕರಿಗೂ ಅರ್ಥ್ಯ ಪ್ರದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

* ಪಾಲಕರು ತಮ್ಮ ಮಕ್ಕಳಿಗೆ ಅವರವರ ಮನೆಗಳಲ್ಲೇ ಅಥವಾ ಇತರ ಕಡೆಗಳಲ್ಲಿ ವೇಷ ಭೂಷಣವನ್ನು ಹಾಕಿಸಿ ತರಬಹುದು ಅಥವಾ ಸ್ಥಳದಲ್ಲೇ ಅವರವರ ವೆಚ್ಚದಲ್ಲಿ ವೇಷವನ್ನು ಹಾಕಿಸ ಬಹುದಾಗಿದೆ. ವೇಷಭೂಷಣಗಳಲ್ಲಿ ಆಡಂಬರಕ್ಕೆ ಹೆಚ್ಚಿನ ಪ್ರಾಶಸ್ತ್ರ ನೀಡದೆ ಮಕ್ಕಳ ಮುಗ್ಧ ಸೌಂದಯ್ಯದ ನೈಜತೆಯನ್ನು ಹೊರಸೂಸುವ ವೇಷಗಳನ್ನು ಧರಿಸಿಕೊಂಡಿರಲಿ ಎಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.

* ಖ್ಯಾತ ಛಾಯಾಗ್ರಾಹಕರು ಸ್ಥಳದಲ್ಲಿ ಹಾಜರಿದ್ದು ಆಸಕ್ತರು ತಮ್ಮ ಮಕ್ಕಳ ವೈಯಕ್ತಿಕ ಛಾಯಾಚಿತ್ರವನ್ನು ಅವರವರ ಸ್ವಂತ ವೆಚ್ಚದಲ್ಲಿ ತೆಗೆಯುವ ಬಗ್ಗೆ ವ್ಯವಸ್ಥೆ ಮಾಡಲಾಗಿದೆ.

ತೊಟ್ಟಿಲ ಕೃಷ್ಣ : ಮಹಿಳೆಯರು ತಮ್ಮದೇ ಆದ ಸಾಂಪ್ರದಾಯಿಕ ಶೈಲಿಯಲ್ಲಿ 6ತಿಂಗಳ ಕೆಳಗಿನ ಕಂದಮ್ಮಗಳನ್ನು ತೊಟ್ಟಿಲಿಗೆ ಹಾಕುತ್ತಾ ಅವರದೇ ಭಾಷೆಯಲ್ಲಿ ಜೋಗುಳ ಹಾಡುತ್ತಾ ಮಗುವನ್ನು ತೊಟ್ಟಿಲಲ್ಲಿ ತೂಗುವುದು. ಅವರ ಮನೆಮಂದಿ ಬಂಧುಬಳಗ ಇಷ್ಟ ಮಿತ್ರರೊಂದಿಗೆ.

ಮೊಸರು ಕಡೆಯುವುದು : ಬೆಳಿಗ್ಗೆ ಗಂಟೆ 10.00ಕ್ಕೆ ಮಹಿಳೆಯರು ಸಾಮೂಹಿಕವಾಗಿ ಸಾಂಪ್ರದಾಯಿಕವಾಗಿ ಹಾಡನ್ನು ಹಾಡುತ್ತಾ ಕಡಗೋಲಿನಿಂದ ಮೊಸರು (ಮಜ್ಜಿಗೆ) ಕಡೆದು ಬೆಣ್ಣೆ ತೆಗೆಯುತ್ತಾ ಸಂಭ್ರಮಿಸುವ ಕಾರ್ಯಕ್ರಮ.

ಸುಮಾರು ನಾಲ್ಕುವರೆ ದಶಕಗಳಿಂದ ವರ್ಷಂಪ್ರತಿ ನಡೆಯುತ್ತಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆ ಉತ್ಸವವಾಗಿ ಪರಿವರ್ತಿತವಾಗಿ ಸರ್ವರಿಂದಲೂ ಪ್ರಶಂಸಿಸಲ್ಪಟ್ಟಿದ್ದು ವಿವಿಧ ವಿಭಾಗಗಳಲ್ಲಿ ಸಾಮೂಹಿಕವಾಗಿ ಕೃಷ್ಣ ವೇಷ ಸ್ಪರ್ಧೆಯ ಮುಖೇನ ಮಕ್ಕಳ ಉತ್ಸವವನ್ನು ಆಚರಿಸುವ ಪದ್ಧತಿ ಇಂದು ಕರಾವಳಿಯ ಜಿಲ್ಲೆಯಾದ್ಯಂತ, ರಾಜ್ಯದಾದ್ಯಂತ ಹಾಗೂ ರಾಷ್ಟ್ರಾದ್ಯಂತ ಇದೇ ಮಾದರಿಯಲ್ಲಿ ನಡೆಯುತ್ತಿರುವುದು ಕಲ್ಕೂರ ಪ್ರತಿಷ್ಠಾನಕ್ಕೆ ಅತ್ಯಂತ ಸಂತಸದ ವಿಷಯ. ಪ್ರಸ್ತುತ ರಾಷ್ಟ್ರೀಯ ಮಕ್ಕಳ ಉತ್ಸವವಾಗಿ ವಿಜೃಂಬಿಸುತ್ತಿದೆ. ಸ್ಪರ್ಧಾಳುಗಳು ಅವರ ಹೆತ್ತವರು ಸಮಯಕ್ಕೆ ಸರಿಯಾಗಿ ಆಗಮಿಸಿ ಇದರ ಯಶಸ್ವಿಗೆ ಸಹಕರಿಸಬೇಕೆಂದು ವಿನಂತಿಸಲಾಗಿದೆ.

ಸ್ಪರ್ಧಾ ಸ್ಥಳದಲ್ಲೇ ಹೆಸರು ನೋಂದಾಯಿಸಲು ಅವಕಾಶವಿರುವುದು. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.

ಈ ಉತ್ಸವದ ಬಗ್ಗೆ ಹೆಚ್ಚಿನ ವಿವರಗಳಿಗೆ: ಕಲ್ಲೂರ ಪ್ರತಿಷ್ಠಾನ, ಶೀ ಕೃಷ್ಣ ಸಂಕೀರ್ಣ. ಮಹಾತ್ಮಗಾಂಧಿರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು ಫೋನ್: 0824-2492239, 9448125949, 9845083736. e:kalkuraadvt@gmail.com, pradeep.kalkura@gmail.com , 2, ລຳ: 2493089/94485 45578, dayakateel1992@gmail.com, ໖ ថ ធ្នូ. : 2213061/94481 23061, ៥ (9844284175) ಸುಧಾಕರರಾವ್ ಪೇಜಾವರ, ಫೋನ್: 2214093/2443360, ಗೋಕುಲ ಕೆ. ಫೋನ್: 2214176, 9448549456 ಯೋಜನಾಧಿಕಾರಿಗಳು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಫೋನ್: 2425059, ಕದ್ರಿ ಶ್ರೀ ಮಂಜುನಾಥದೇವಸ್ಥಾನ ಪೋನ್: 2214176, ಶಿವಪ್ರಸಾದ್ ಪ್ರಭು : 9742997707 ಇವರನ್ನು ಸಂಪರ್ಕಿಸಬಹುದು.

ಈ ವರ್ಷ ಮೂರುಸಾವಿರಕ್ಕೂ ಮಿಕ್ಕಿ ಪುಟಾಣಿಗಳು ಭಾಗವಹಿಸುವ ನಿರೀಕ್ಷೆಯಲ್ಲಿದ್ದು ಈ ರಾಷ್ಟ್ರಮಟ್ಟದ ಮಕ್ಕಳ ಉತ್ಸವದಲ್ಲಎಲ್ಲಾ ನಾಗರಿಕ ಬಂಧುಗಳು, ಗಣ್ಯರು, ಆಡ್ಯ ಮಹನೀಯರು ಪಾಲ್ಗೊಂಡು ಮಕ್ಕಳ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸಿ ಯಶಸ್ವಿಗೊಳಿಸಬೇಕೆಂದು ಕಲ್ಕೂರ ಪ್ರತಿಷ್ಠಾನದಅಧ್ಯಕ್ಷರಾದಎಸ್. ಪ್ರದೀಪಕುಮಾರಕಲ್ಲೂರ ವಿನಂತಿಸಿದ್ದಾರೆ.

Advt

ಎಸ್. ಪ್ರದೀಪಕುಮಾರಕಲ್ಕೂರ ಅಧ್ಯಕ್ಷರು, ಕಲ್ಕೂರ ಪ್ರತಿಷ್ಠಾನ

9845083736/9448125949

Email: pradeep kalkura@gmail.com

error: Content is protected !!