
ಸುರತ್ಕಲ್ : ಕಾಟಿಪಳ್ಳ ಗ್ರಾಮದ ಬ್ಲಾಕ್ 8ಎ ಪರಿಶಿಷ್ಟ ಪಂಗಡ ಕುಟುಂಬದ ವಿಕಲ ಚೇತನರಾದ ಶ್ರೀಮತಿ ಗಿರಿಜಾರವರ ಮನೆಯು ಬಿದ್ದು ಹೋಗಿದ್ದು ಈ ಮನೆಯನ್ನು ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಮತ್ತು ಹಿಂದು ಧಾರ್ಮಿಕ ಸೇವಾ ಸಮಿತಿ ಗಣೇಶ್ ಪುರ ಕಾಟಿಪಳ್ಳ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ದಾನಿಗಳ ಸಹಕಾರದಿಂದ ಸುಮಾರು 10 ಲಕ್ಷ ಅಂದಾಜು ವೆಚ್ಚ ನಿರ್ಮಾಣ ಮಾಡಿ ಶ್ರೀ ಡಾ.ಭರತ್ ಶೆಟ್ಟಿ ವೈ ಮಾನ್ಯ ಶಾಸಕರು ಮಂಗಳೂರು ಉತ್ತರ ನಗರ ರವರು ಹಸ್ತಾಂತರಿಸಿ ಮಾತಾನಾಡಿ ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಮತ್ತು ಹಿಂದು ಧಾರ್ಮಿಕ ಸೇವಾ ಸಮಿತಿ ಮಾಡುತ್ತಿರುವಂತಹ ಇಂತಹ ಉತ್ತಮ ಕಾರ್ಯ ವು ಜನ ಮನ್ನಣೆಗೆ ಪಾತ್ರವಾಗಿದೆ ಹಾಗೂ ಈ ಮನೆ ನಿರ್ಮಾಣ ಸಹಕರಿಸಿದ ಸ್ಥಳೀಯ ಸಂಘ ಸಂಸ್ಥೆಗಳಿಗೆ ಮತ್ತು ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು
ಕಾರ್ಯಕ್ರಮದಲ್ಲಿ ಶ್ರೀ ಅರ್ಜುನ ಭಂಡಾರ್ಕರ್ ಅಧ್ಯಕ್ಷರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ , ಮಂಗಳೂರು ನಾರಾಯಣ ಶೆಟ್ಟಿ, ಸುಮತಿ ನಾರಾಯಣ ಶೆಟ್ಟಿ ಉದ್ಯಮಿಗಳಾದ ಅನಿಲ್ ಶೆಟ್ಟಿ ತೇವು,ನಿಕಟ ಪೂರ್ವ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಲೋಕೇಶ್ ಬೊಳ್ಳಾಜೆ, ಲಕ್ಷ್ಮೀ ಶೇಖರ ದೇವಾಡಿಗ, ಭಾರತೀಯ ಜನತಾ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದ ಭರತ್ ರಾಜ್ ಕೃಷಾಪುರ, ಸಾಮಾಜಿಕ ಕಾರ್ಯ ಕರ್ತ ರಾದ ಗುಣಕರ್ ಇಡ್ಯಾ, ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ
ಜಯಕುಮಾರ್, ಹಿಂದು ಧಾರ್ಮಿಕ ಸೇವಾ ಸಮಿತಿ ಯ ಅಧ್ಯಕ್ಷರಾದ ಹರೀಶ್ ಮೂಡಾಯಿ ಕೋಡಿ ಅತಿಥಿ ಅಭ್ಯಾಗತರಾಗಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಕೇಶವ ಶಿಶುಮಂದಿರದ ಅಧ್ಯಕರಾದ ಜಯಶೀಲ ಸೂರಿಂಜೆ, ವಸಂತ್ ರಾವ್, ಲಕ್ಮ್ಮೀಶ ದೇವಾಡಿಗ, ಮನೋಹರ ಶೆಟ್ಟಿ ಸೂರಿಂಜೆ, ಬಾಲಕೃಷ್ಣ ಸುರ್ವಣ, ಜಯಪ್ರಕಾಶ್ ಪಡುಪದವು, ಚಂದ್ರಶೇಖರ ಬೊಳ್ಳಾಜೆ, ಕೀರ್ತನ್ ಬಾಳ, ಚೇತನ್ ಗುರುನಗರ, ದುರ್ಗಾ ಪ್ರಸಾದ್, ವರಮಹಾಲಕ್ಷ್ಮೀ ಪೂಜಾನ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಹಿಂದು ಧಾರ್ಮಿಕ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು ಜಯಪ್ರಕಾಶ್ ಸೂರಿಂಜೆ ಸ್ವಾಗತಿಸಿದರು, ಹರೀಶ್ ಮೂಡಾಯಿ ಕೋಡಿ ವಂದಿಸಿದರು. ಲೋಕನಾಥ ಭಂಡಾರಿ ಕಾರ್ಯಕ್ರಮವನ್ನು ನಿರೂಪಿಸಿದರು.
