ಮಂಗಳೂರಿನಲ್ಲಿ ಝೈಸ್ ವಿಷನ್ ಸೆಂಟರ್ ಶುಭಾರಂಭ!


ಮಂಗಳೂರು: ಪ್ರಿಮಿಯಂ ಲೈಫ್‍ಸ್ಟೈಲ್ ಐವೇರ್ ಬ್ರ್ಯಾಂಡ್ ಆಗಿರುವ ಕ್ಯಾವೋಲಿನ್, ನಗರದ ಫೋರಂ ಫಿಜಾ ಮಾಲ್‍ನಲ್ಲಿ ಮಂಗಳೂರಿನ ಮೊದಲ ಝೈಸ್ ವಿಷನ್ ಸೆಂಟರ್ ಆರಂಭಿಸಿದೆ.
ಝೈಸ್ ಇಂಡಿಯಾ ಸಹಭಾಗಿತ್ವದಲ್ಲಿ ಆರಂಭಗೊಂಡಿರುವ ಈ ಹೊಸ ಕೇಂದ್ರವು ಕ್ಯಾವೋಲಿನ್‍ನ ಪ್ರೀಮಿಯಂ ಐವೇರ್ ಪರಿಣತಿಯನ್ನು ಝೈಸ್‍ನ ನಿಖರ ಆಪ್ಟಿಕ್ಸ್ ಮತ್ತು ದೃಷ್ಟಿ ಆರೈಕೆ ಪರಿಹಾರಗಳೊಂದಿಗೆ ಸಂಯೋಜಿಸುತ್ತದೆ. ಇದರ ಮೂಲಕ ಈ ಭಾಗದ ಗ್ರಾಹಕರಿಗೆ ಹೆಚ್ಚು ಸಮಗ್ರ ಮತ್ತು ವೈಯಕ್ತಿಕಗೊಳಿಸಿದ ದೃಷ್ಟಿ ಆರೈಕೆ ಅನುಭವ ದೊರೆಯಲಿದೆ ಎಂದು ಕ್ಯಾವೋಲಿನ್ ವ್ಯವಸ್ಥಾಪಕ ನಿರ್ದೇಶಕ ನಿಖಿಲ್ ನಂದೀಶ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.
ಮಂಗಳೂರಿನ ಫಿಜಾ ಬೈ ನೆಕ್ಸಸ್ ಮಾಲ್‍ನ ಮೊದಲ ಮಹಡಿಯಲ್ಲಿ ಸ್ಥಾಪಿತವಾಗಿರುವ ಈ ಕೇಂದ್ರವು ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ. ಗ್ರಾಹಕರಿಗೆ ಸುಗಮ ಮತ್ತು ಉನ್ನತ ಮಟ್ಟದ ದೃಷ್ಟಿ ಆರೈಕೆ ಅನುಭವವನ್ನು ಒದಗಿಸುವ ಉದ್ದೇಶದಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ವಿವರಿಸಿದರು. ಉನ್ನತ ದೃಷ್ಟಿ ಪರಿಕಲ್ಪನೆಯು ವೈಯಕ್ತಿಕ ಸಮಾಲೋಚನೆ, ಸುಧಾರಿತ ಝೈಸ್ ತಂತ್ರಜ್ಞಾನ ಮತ್ತು ಪ್ರೀಮಿಯಂ ದೃಷ್ಟಿ ಪರಿಹಾರಗಳನ್ನು ಸಂಯೋಜಿಸಿ, ಪ್ರತಿಯೊಬ್ಬ ಗ್ರಾಹಕರ ದೃಷ್ಟಿ ಅಗತ್ಯತೆಗಳು ಮತ್ತು ಜೀವನಶೈಲಿಗೆ ಅನುಗುಣವಾದ ಸೇವೆಯನ್ನು ಒದಗಿಸುತ್ತದೆ. ನಿಖರ ದೃಷ್ಟಿ ವಿಶ್ಲೇಷಣೆ, ಪರಿಣಿತ ಸಮಾಲೋಚನೆ ಮತ್ತು ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾದ ZಇISS ಲೆನ್ಸ್ ಪರಿಹಾರಗಳ ಮೇಲೆ ಕೇಂದ್ರೀಕರಿಸಿವೆ ಎಂದು ವಿವರಿಸಿದರು.
ಝೈಸ್ ಇಂಡಿಯಾ ವ್ಯವಹಾರ ಮುಖ್ಯಸ್ಥ ರೋಹನ್ ಪಾಲ್ ಮಾತನಾಡಿದರು.
ಝೆಡ್‍ವಿಎಸ್ ಕೇಂದ್ರ ವೈಯಕ್ತಿಕಗೊಳಿಸಿದ ಕಣ್ಣಿನ ಆರೈಕೆ, ಪ್ರೀಮಿಯಂ ZಇISS ಲೆನ್ಸ್ ಪರಿಹಾರಗಳು ಮತ್ತು ಪರಿಣಿತ ಸಮಾಲೋಚನೆಯನ್ನು ಒದಗಿಸುತ್ತಿದೆ ಎಂದು ಹೇಳಿದರು.

Advt
error: Content is protected !!