
ಮಂಗಳೂರು: ಪ್ರೊಡಕ್ಟಿವಿಟಿ ಕೌನ್ಸಿಲ್ ಮತ್ತು ರೋಟರಿ ಕ್ಲಬ್, ಮಂಗಳೂರು ಸೆಂಟ್ರಲ್ ಜಂಟಿಯಾಗಿ ಇದೇ ಆಗಸ್ಟ್ 21, 2026 ರಂದು ಮಂಗಳೂರಿನ ಓಲ್ಡ್ ಪೋರ್ಟ್ ರಸ್ತೆಯ ತಾಜ್ ವಿವಾಂತ ಹೋಟೆಲ್ ಎದುರಿನ ರೆಡ್ ಕ್ರಾಸ್ ಪ್ರೇರಣಾ ಸಭಾಂಗಣದಲ್ಲಿ ಒಂದು ದಿನದ ಮೆಗಾ ಎಂ.ಎಸ್.ಎಂ.ಇ ಮತ್ತು ಸ್ಮಾರ್ಟ್ ಅಪ್ ಕಾವ್ ಅನ್ನು ಆಯೋಜಿಸಲಾಗಿದೆ ಎಂದು ನಿರ್ದೇಶಕ ಎಸ್.ಎಸ್.ನಾಯಕ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಕರಾವಳಿ ಕರ್ನಾಟಕದ ಅನೇಕ ಉದ್ಯಮಿಗಳು ಮತ್ತು ಸ್ಮಾರ್ಟ್ ಅಪ್‌ಗಳು ಅನೇಕ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಮತ್ತು ಮರೆಯಲಾಗದ ಕೊಡುಗೆಗಳನ್ನು ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಉದ್ಯಮಿಗಳು ಹಾಗೂ ಸ್ಮಾರ್ಟ್ ಅಪ್ ಗಳು ಭಾಗವಹಿಸುವ ನಿರೀಕ್ಷೆಯಿದೆ.

ತಂತ್ರಜ್ಞಾನ ವಲಯ, ವ್ಯಾಪಾರ, ಇ-ವಾಣಿಜ್ಯ, ಪ್ರವಾಸೋದ್ಯಮ, ಉತ್ಪಾದನೆ, ಸೇವೆಗಳು ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ MSMEಗಳು ಮತ್ತು ನವೋದ್ಯಮಗಳನ್ನು ಉತ್ತೇಜಿಸಲು ಕರಾವಳಿ ಪ್ರದೇಶದ ಉದ್ಯಮಿಗಳು, ಹೂಡಿಕೆದಾರರು, ಕೈಗಾರಿಕಾ ಮುಖಂಡರು, ನೀತಿ ನಿರೂಪಕರು, 2 sqrt(e) 8 C ಮತ್ತು ಪರಿಸರ ವ್ಯವಸ್ಥೆಯ ಪಾಲುದಾರರನ್ನು ಒಟ್ಟುಗೂಡಿಸುವುದು ಈ ಒಂದು ದಿನದ ಸಮಾವೇಶದ ಉದ್ದೇಶವಾಗಿದೆ.
ನಮ್ಮ ಕರಾವಳಿ ಕರ್ನಾಟಕದ ಮಿನಿ ರತ್ನ ಕಂಪನಿ MRPL ಸಹ ಮುಖ್ಯ ಪ್ರಾಯೋಜಕತ್ವ ವಹಿಸಿದೆ. SKF ಎಲಿಕ್ಸರ್, ರೈನ್ ಲ್ಯಾಂಡ್ ಇಸುಜು, ಕೆನರಾ ರೊಬೆಕೊ ಮ್ಯೂಚುಯಲ್ ಫಂಡ್ ಮತ್ತು ಕ್ಯಾಂಪ್ರೊ, ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಗಳು ಸಹ ಪೋಷಕ ಪ್ರಾಯೋಜಕರಾಗಿದ್ದಾರೆ.
ಬೆಳಿಗ್ಗೆ 9.15 ಕ್ಕೆ ಉದ್ಘಾಟನಾ ಸಮಾರಂಭ ನೆರವೇರಲಿದೆ. ಉಡುಪಿ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಪ್ರಾಯೋಜಕ ಬ್ಯಾಂಕ್‌ಗಳು ಮತ್ತು MRPL ನ ಇತರ ಗಣ್ಯರು ಉಪಸ್ಥಿತರಿರುತ್ತಾರೆ. ಭಾರತದಾದ್ಯಂತದ ಖ್ಯಾತ ತಜ್ಞರಿಂದ ಎಂ.ಎಸ್.ಎಂ.ಇ, ಸ್ಮಾರ್ಟ್ ಅಪ್, CIBIL Score Issues, ಸರಕಾರಗಳ ಸಬ್ಸಿಡಿ, ವಿವಿಧ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ, ಮೀನುಗಾರಿಕೆ, ಕೃಷಿ, ಹೈನುಗಾರಿಕೆ, ಪಶು ಸಂಗೋಪನೆ ಹಾಗೂ ಆಹಾರ ಸಂಸ್ಕರಣೆ ವಲಯಗಳಲ್ಲಿ ವಿಶೇಷ ಅಧಿವೇಶನಗಳು ನಡೆಯಲಿವೆ. ಸಂಜೆ ವರ್ಣರಂಜಿತ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ದಕ್ಷಿಣ ಕನ್ನಡ ಕ್ಷೇತ್ರದ ಗೌರವಾನ್ವಿತ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಸಮ್ಮುಖದಲ್ಲಿ ಮಾದರಿ MSME ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪತ್ರಿಕಾಗೋಷ್ಠಿಯಲ್ಲಿ Dr P G ಮಹೇಶ್, ರೊ .ರವೀಂದ್ರ ಬಿ ಎನ್, ರೊ ಜಾಕ್ಸನ್ ಸಲ್ಮಾನಾ, ರೊ ಡ್ಯಾರಿಲ್ ಡಿಸೋಜ, ಕಾರ್ಯಕ್ರಮ ಸಂಯೋಜಕ, ಡಾ.ದೇವದಾಸ್, ಸತೀಶ್ ಮಾಬೆನ್ ಮತ್ತಿತರರು ಉಪಸ್ಥಿತರಿದ್ದರು.