ಉದ್ಯಮಿ ಸಂದೀಪ್ ಸಾಲಿಯಾನ್ ಕೊಲೆ ಪ್ರಕರಣ: ಮಂಗಳೂರು ಮೂಲದ ಮಹಿಳೆ ವಶಕ್ಕೆ

ಗೋವಾ: ಉದ್ಯಮಿ ಉಡುಪಿ ನಿವಾಸಿ ಸಂದೀಪ್ ಸಾಲಿಯಾನ್ ಇಲ್ಲಿನ ಕ್ಯಾಲಂಗುಟ್ ಬೀಚ್ ಬಳಿಯ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾದ ನಂತರ ಗೋವಾ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಮೂಲದ ಬೆಂಗಳೂರಿನಲ್ಲಿ ವಾಸವಿದ್ದ ಅಕ್ಷತಾ ಎಂ.ಕೆ. ಎಂಬಾಕೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಂದೀಪ್ ಸಾವಿನ ಸಂದರ್ಭದಲ್ಲಿ ಅವರ ಬಳಿಯಿದ್ದ ಬೆಲೆಬಾಳುವ ವಸ್ತುಗಳು ಕಾಣೆಯಾಗಿವೆ ಎಂದು ವರದಿಯಾಗಿತ್ತು.
ಸಂದೀಪ್ ಸಾಲಿಯನ್ ತಮ್ಮ ಮೂವರು ಸ್ನೇಹಿತರೊಂದಿಗೆ ಗೋವಾದಲ್ಲಿದ್ದರು ಮತ್ತು ಕ್ಯಾಲಂಗುಟ್‌ನ ಹೋಟೆಲ್‌ನಲ್ಲಿ ತಂಗಿದ್ದರು. ಅವರು ಮಹಿಳೆಯೊಬ್ಬರು ಕೊಟ್ಟಿದ್ದ ಸಿಗರೇಟ್ ಸೇದಿದ ಬಳಿಕ ಸಾವನ್ನಪ್ಪಿದ್ದರು ಎನ್ನಲಾಗಿತ್ತು.


ಸಂದೀಪ್ ಸಾಲಿಯನ್ ಮತ್ತು ಸ್ನೇಹಿತರು ಕ್ಯಾಲಂಗುಟ್‌ನ ಕ್ಯಾಸಿನೊವೊಂದರಲ್ಲಿದ್ದಾಗ ಆಕೆಯ ಪರಿಚಯವಾಗಿತ್ತು ಎಂದು ಹೇಳಲಾಗಿತ್ತು. ಆದರೆ ಇನ್ನೂ ದೃಢಪಟ್ಟಿಲ್ಲ. ರಾತ್ರಿ ಸ್ನೇಹಿತರು ಸಂದೀಪ್ ಅವರನ್ನು ಹುಡುಕಲು ಪ್ರಾರಂಭಿಸಿದಾಗ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪಟ್ಟೆಯಾಗಿದ್ದರು. ಮಹಿಳೆ ರೂಮ್ ಬಾಯ್ ಬಳಿ ಕಟ್ಟರ್ ಕೇಳಿದ್ದರು ಎಂದು ಹೇಳಲಾಗಿದ್ದು ಮೈಮೇಲಿದ್ದ ಚಿನ್ನದ ಆಭರಣ ನಾಪತ್ತೆಗೆ ಪುಷ್ಠಿ ನೀಡಿತ್ತು.

error: Content is protected !!