
ಮಂಗಳೂರು: ಬ್ರಹ್ಮಕುಮಾರೀಸ್ ಮಂಗಳೂರು ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ 10 ದಿನಗಳ ಉಚಿತ “ಯೋಗ ಮತ್ತು ಯೋಗಾಸನ” ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರವು ಜೂನ್ 21 ರಿಂದ ಜೂನ್ 30, 2026ರವರೆಗೆ ಪ್ರತಿದಿನ ಸಾಯಂಕಾಲ 6.00 ರಿಂದ 7.30 ಗಂಟೆಯವರೆಗೆ ನಡೆಯಲಿದ್ದು, ಬ್ರಹ್ಮಕುಮಾರೀಸ್ ವಿಶ್ವಶಾಂತಿ ಮಂದಿರ, ಗಣೇಶ ದೇವಸ್ಥಾನದ ಹತ್ತಿರ, ಉರ್ವಸ್ಟೋರ್, ಮಂಗಳೂರು ಇಲ್ಲಿ ಜರುಗಲಿದೆ.
ಶಿಬಿರದಲ್ಲಿ ಯೋಗಾಭ್ಯಾಸ, ಯೋಗಾಸನಗಳು, ಪ್ರಾಣಾಯಾಮ, ಧ್ಯಾನ ಹಾಗೂ ಮೆಡಿಟೇಷನ್ ಜ್ಞಾನ ಕುರಿತು ಅನುಭವಿ ತರಬೇತುದಾರರಿಂದ ಪ್ರಾಯೋಗಿಕ ತರಬೇತಿ ನೀಡಲಾಗುವುದು. ಇಂದಿನ ಒತ್ತಡದ ಜೀವನಶೈಲಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗವು ಅತ್ಯುತ್ತಮ ಸಾಧನವಾಗಿದ್ದು, ಈ ಶಿಬಿರವು ಸಾರ್ವಜನಿಕರಿಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ.
ಶಿಬಿರದಲ್ಲಿ ಭಾಗವಹಿಸುವವರಿಗೆ ಮನಸ್ಸಿನ ಏಕಾಗ್ರತೆ ಮತ್ತು ನೆನಪಿನ ಶಕ್ತಿ ವೃದ್ಧಿಯಾಗುವುದು, ದೇಹದ ತೂಕ ನಿಯಂತ್ರಣ, ಬೆನ್ನು ಹಾಗೂ ಕುತ್ತಿಗೆ ನೋವಿನ ನಿವಾರಣೆ, ಹೈಬಿಪಿ, ಮಧುಮೇಹ, ಅಸ್ತಮಾ ಮೊದಲಾದ ಜೀವನಶೈಲಿ ಸಂಬಂಧಿತ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯಕವಾಗುವ ಯೋಗಾಭ್ಯಾಸಗಳನ್ನು ಕಲಿಸಲಾಗುವುದು. ಅಲ್ಲದೆ, ಜೀರ್ಣಕ್ರಿಯೆ ಸುಧಾರಣೆ, ರೋಗನಿರೋಧಕ ಶಕ್ತಿ ಹೆಚ್ಚಳ, ಒತ್ತಡ ನಿವಾರಣೆ ಹಾಗೂ ಆಂತರಿಕ ಶಾಂತಿ ಮತ್ತು ಸಂತೋಷವನ್ನು ಅನುಭವಿಸಲು ಸಹಕಾರಿ ಧ್ಯಾನಾಭ್ಯಾಸವನ್ನೂ ನಡೆಸಲಾಗುವುದು.
ಆಸಕ್ತ ಸಾರ್ವಜನಿಕರು ಈ ಉಚಿತ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯಕರ, ಸಂತೋಷಕರ ಹಾಗೂ ಸಮತೋಲನಯುತ ಜೀವನದತ್ತ ಹೆಜ್ಜೆ ಇಡಬೇಕೆಂದು ಬ್ರಹ್ಮಕುಮಾರಿ ವಿಶ್ವೇಶ್ವರಿ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9886247272.