ಸೂರಿಂಜೆ: ವಿಷದ ಹಾವು ಕಡಿದು ಮಹಿಳೆ ಮೃತ್ಯುವಶ

ಸುರತ್ಕಲ್: ಮನೆಯ ಹೊರಗಡೆ ವಿಷದ ಹಾವು ಕಡಿದ ಪರಿಣಾಮ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಇಂದು ರಾತ್ರಿ ನಡೆದಿದೆ. ಸೂರಿಂಜೆ ಪೊನ್ನಗಿರಿ ದೇವಸ್ಥಾನ ಸಮೀಪದ ನಿವಾಸಿ ಭಾರತಿ ಮೃತಪಟ್ಟವರು ಎನ್ನಲಾಗಿದೆ.
ರಾತ್ರಿ ಮನೆಯ ಹೊರಗೆ ಯಾವುದೋ ವಿಷಪೂರಿತ ಹಾವು ಕಡಿದಿದ್ದು ಕೂಡಲೇ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

error: Content is protected !!