
ಮಂಗಳೂರು: ದೇರಳಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ರಾಣಿಪುರದ 49 ವರ್ಷ ಪ್ರಾಯದ ವೀಣಾ ಡೇಸಾ ಅವರು ಜೂನ್ 7ರಂದು ಭಾನುವಾರ ನಿಧನರಾಗಿದ್ದಾರೆ.
ಮೃತರು ಉಳ್ಳಾಲ ಕಾಪಿಕಾಡ್‌ನ ‘ಜೋನ್ ಬೇಕರಿ’ ಮಾಲೀಕರಾದ ಜೋನ್ ಡೆಸಾ ಅವರ ಪುತ್ರಿಯಾಗಿದ್ದು, ಉರ್ಬನ್ ಡಿಸೋಜ ಅವರ ಧರ್ಮಪತ್ನಿಯಾಗಿದ್ದಾರೆ. ಸದಾ ಹಸನ್ಮುಖಿ ಹಾಗೂ ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕಿಯಾಗಿದ್ದ ವೀಣಾ ಅವರ ನಿಧನಕ್ಕೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ರಾಣಿಪುರ ಪರಿಸರದ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದಾರೆ.
ಅಂತಿಮ ಸಂಸ್ಕಾರ:
ಮೃತರ ಅಂತಿಮ ದರ್ಶನ ಹಾಗೂ ಧಾರ್ಮಿಕ ವಿಧಿವಿಧಾನಗಳು *ಜೂನ್ 9ರಂದು ಮಂಗಳವಾರ* ನಡೆಯಲಿವೆ. ಅಂದು *ಸಂಜೆ 4:00 ಗಂಟೆಗೆ* ಮೃತರ ನಿವಾಸದಿಂದ ಶವಯಾತ್ರೆಯು ಹೊರಟು, *ರಾಣಿಪುರದ ‘ಲೇಡಿ ಕ್ವೀನ್ ಆಫ್ ಯುನಿವರ್ಸ್’ ಚರ್ಚ್*ನಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
