ಕರಂಬಾರು ಶಾಲಾ ಪ್ರಾರಂಭೋತ್ಸವ


ಮಂಗಳೂರು: ಕರಂಬಾರು ದ. ಕ. ಜಿ. ಪಂ. ಹಿ. ಪ್ರಾ. ಶಾಲೆಯ ಪ್ರಾರಂಭೋತ್ಸವ ಅದ್ದೂರಿಯಿಂದ ನಡೆಯಿತು.


ಕರಂಬಾರು ಜಂಕ್ಷನ್ ನಿಂದ ಕರಂಬಾರು ಶಾಲೆಯವರೆಗೆ ಬ್ಯಾಂಡ್ ಘೋಷಣೆಯೊಂದಿಗೆ ಶಾಲಾ ವಿದ್ಯಾರ್ಥಿಗಳು, ಪೋಷಕರು, ಎಸ್.ಡಿ.ಎಮ್.ಸಿ ಪದಾಧಿಕಾರಿಗಳು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮೆರವಣಿಗೆ ನಡೆಸಿದರು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಶಾಲೆಯನ್ನು ತಳಿರು ತೋರಣವನ್ನು ಕಟ್ಟಿ ಶೃಂಗಾರಿಸಲಾಗಿತ್ತು. ಹೂಗಳಿಂದ ಸ್ವಾಗತಿಸಲಾಯಿತು. ಸಿಹಿ ತಿಂಡಿ ವಿತರಿಸಲಾಯಿತು. ಶಾಲಾ ಎಸ್. ಡಿ. ಎಮ್. ಸಿ ಅಧ್ಯಕ್ಷರಾದ ಗುಣಪಾಲ್ ದೇವಾಡಿಗ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,ಮುಖ್ಯ ಅತಿಥಿಗಳಾಗಿ ಕರಂಬಾರು ಪಟ್ಟಣ ಪಂಚಾಯತ್ ಸದಸ್ಯರಾದ ಶ್ರೀಮತಿ ಸುಪ್ರಿತಾ ಶೆಟ್ಟಿ, ಕೆಂಜಾರು ಪಟ್ಟಣ ಪಂಚಾಯತ್ ಸದಸ್ಯರಾದ ದಿನೇಶ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗ, ಉಪಾಧ್ಯಕ್ಷರಾದ ರಾಕೇಶ್ ಕುಂದರ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, SDMC ಉಪಾಧ್ಯಕ್ಷರಾದ ಶ್ರೀಮತಿ ಲಾವಣ್ಯ ಮುಂತಾದವರು ಉಪಸ್ಥಿತರಿದ್ದರು.


ಶಾಲಾ ಮುಖ್ಯ ಶಿಕ್ಷಕಿ ಸೀತಮ್ಮ. ಜೆ ಸ್ವಾಗತಿಸಿದರು, ದೈಹಿಕ ಶಿಕ್ಷಣ ಶಿಕ್ಷಕಿ ನವೀನ ಕುಮಾರಿ ಕಾರ್ಯಕ್ರಮ ನಿರೂಪಿಸಿದರು, ಮಾಲಾಶ್ರೀ ಪ್ರಾಸ್ತವಿಕ ಮಾತನಾಡಿದರು, ಗುಣವತಿ ವಂದಿಸಿದರು.

error: Content is protected !!