ಪಂಜದಲ್ಲಿ ಶಾಲಾ ಪ್ರಾರಂಭೋತ್ಸವ: ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಗೌರವಿಸಿದ ಹಳೆಯ ವಿದ್ಯಾರ್ಥಿಗಳು

ಪಂಜ: ಸಾರ್ವಜನಿಕ ಶಿಕ್ಷಣ ಇಲಾಖೆ ದ. ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪಂಜ ಮಂಗಳೂರು ಉತ್ತರ ವಲಯ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಪಂಜ ಶಾಲಾ ವಠಾರದಲ್ಲಿ ನಡೆಯಿತು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ SDMC ಅಧ್ಯಕ್ಷರಾದ ನವೀನ್ ಸಾಲಿಯನ್ ಪಂಜ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ಎಂ ಶೆಟ್ಟಿ ಬೈಲಗುತ್ತು, ಸತೀಶ್ .ಜೆ. ಶೆಟ್ಟಿ ಪಂಜದ ಗುತ್ತು, ಚಂದ್ರಹಾಸ ಶೆಟ್ಟಿ ಮೊಗಪಾಡಿ, ರಾಜೇಶ್ ಶೆಟ್ಟಿ ಮಜಲಗುತ್ತು ಮಾಜಿ ಪಂಚಾಯತ್ ಸದಸ್ಯರಾದ ಸುರೇಶ್ ಪಂಜ, ಕೇಶವ ಪೂಜಾರಿ ಪಂಜ, ನವೀನ ಶೆಟ್ಟಿ ನಲ್ಯಗುತ್ತು, ಸುಂದರ ಪೂಜಾರಿ ಉಲ್ಯ, ನವಜ್ಯೋತಿ ಮಹಿಳಾ ಮಂಡಲ ಇದರ ಅಧ್ಯಕ್ಷರಾದ ಮಮತಾ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ತಾರಾ ಶೆಟ್ಟಿ ಉಪಸ್ಥಿತರಿದ್ದರು.

ವರ್ಷಪ್ರತಿಯಂತೆ ಶಾಲಾ ಮಕ್ಕಳಿಗೆ ಬರವಣಿಗೆ ಪುಸ್ತಕ ಸೀತಾರಾಮ. ಎಲ್. ಶೆಟ್ಟಿ ಮುಂಬೈ ನೀಡಿದರು. ಸಹ ಶಿಕ್ಷಕಿ ಪಲ್ಲವಿ ಕಾರ್ಯಕರ್ಮ ನಿರೂಪಿಸಿದರು, ಶಾಲಾ ಮುಖ್ಯ ಶಿಕ್ಷಕಿ ವಸಂತಿ. ಕೆ. ಸ್ವಾಗತಿಸಿದರು. ಸಹ ಶಿಕ್ಷಕಿ ಕವಿತಾ ವಂದಿಸಿದರು.

error: Content is protected !!