ಬೈಕ್ – ಟ್ರಾಕ್ಟರ ಡಿಕ್ಕಿ: ನವವಿವಾಹಿತ ಸೇರಿ ಇಬ್ಬರು ಸಾ*ವು

ಕಲಬುರಗಿ: ಬೈಕ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿಯಾಗಿ ನವವಿವಾಹಿತ ಸೇರಿ ಇಬ್ಬರು ಸಾವನ್ನಪ್ಪಿದ ಘಟನೆ ಕಲಬುರಗಿ ಹೊರವಲಯದ ಸೇಡಂ ರಸ್ತೆಯಲ್ಲಿ ನಡೆದಿದೆ.

ಮುಗಟಿ ಗ್ರಾಮದ ನವವಿವಾಹಿತ ಸಂದೀಪ ಕಂಟೀಕರ್ (25) ಹಾಗೂ ಅಂಕಲಗಿ ಗ್ರಾಮದ ದಿನೇಶ್ ಮೃತ ದುರ್ದೈವಿಗಳು.

ಕಳೆದ ಮೇ 15ರಂದು ಮದುವೆ ಆಗಿದ್ದ ಸಂದೀಪ್, ಮದುವೆ ಪಾರ್ಟಿ ಕೊಡಲು ಸ್ನೇಹಿತರನ್ನು ತನ್ನೊರಿಗೆ ಕರೆದುಕೊಂಡು ಹೋಗುತ್ತಿದ್ದರು. ಸಂದೀಪ್‌ ಹಾಗೂ ದಿನೇಶ್ ಬೈಕ್ ಮೇಲೆ ಹೊರಟಿದ್ದು, ಉಳಿದ ಸ್ನೇಹಿತರು ಕಾರನಲ್ಲಿದ್ದರು ಎನ್ನಲಾಗಿದೆ.

ಈ ಕುರಿತು ಸಂಚಾರಿ-2 ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!