
ಹಾವೇರಿ: ಪರ ಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಅಕ್ಕನನ್ನ ಅಂಗನವಾಡಿಯಲ್ಲಿಯೇ ತಮ್ಮ ಕತ್ತು ಸೀಳಿ ಭೀಕರವಾಗಿ ಹತ್ಯೆಗೈದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ನಡೆದಿದೆ.

ಸುಮಾ ಶಿವಶಂಕರ್ ವನಹಳ್ಳಿ(29) ಹತ್ಯೆಗೀಡಾದ ಮಹಿಳೆ.
ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
ಸುಮಾ ಶಿಗ್ಗಾವಿ ಪಟ್ಟಣದ ಮೌಲಾಲಿ ಗುಡ್ಡದಲ್ಲಿರೋ ಅಂಗನವಾಡಿ ಕೇಂದ್ರದಲ್ಲಿ ಆಯಾ ಕೆಲಸ ಮಾಡಿಕೊಂಡಿದ್ದಳು. ಬೆಳಗ್ಗೆ ಸುಮಾರು 10:15ಕ್ಕೆ ಸ್ವಂತ ತಮ್ಮ ಸಂಜು ಮಚ್ಚಿನಿಂದ ಸುಮಾಳ ಕುತ್ತಿಗೆ ಹಾಗೂ ಕೈಗೆ ಭೀಕರ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಮಚ್ಚು ಬೀಸಿದ ರಭಸಕ್ಕೆ ಸುಮಾಳ ಕೈ ಕಟ್ ಆಗಿದೆ. ಕುತ್ತಿಗೆಗೂ ಗಂಭೀರ ಗಾಯಗಳಾದ ಹಿನ್ನೆಲೆ ಸುಮಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಶಿಗ್ಗಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.