ಮಣಿಪಾಲದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಬಾದಾಮಿ ಮೂಲದ ದಂಪತಿ ವಶಕ್ಕೆ

ಮಣಿಪಾಲ: ಅನುಮಾನಾಸ್ಪದವಾಗಿ ನಿಂತಿದ್ದ ದಂಪತಿಯನ್ನು ಇಂದ್ರಾಳಿ ರೈಲ್ವೆ ಸ್ಟೇಷನ್ ಬಳಿ ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ರಮೇಶ ಬಂಡಿ ವಡ್ಡರ(45) ಹಾಗೂ ಆತನ ಪತ್ನಿ ಸುಧಾ(30) ಬಂಧಿತ ಆರೋಪಿಗಳು.

ರಮೇಶ್ ಕೈಯಲ್ಲಿ ಎರಡು ಮೊಬೈಲ್ ಇದ್ದು ಅದರಲ್ಲಿ ಒಂದು ಸಿಮ್ ಹಾಗೂ ಸುಧಾ ಕೈಯಲ್ಲಿ ಒಂದು ಮೊಬೈಲ್ ಇತ್ತು. ಈ ಬಗ್ಗೆ ಸಮರ್ಪಕ ಉತ್ತರ ನೀಡದೆ ಇರುವುದರಿಂದ ಪೊಲೀಸರು ಅನುಮಾನಗೊಂಡು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!