ಸ್ಕೂಟಿ ಸವಾರ ನೀರಿನ ಟ್ಯಾಂಕರ್‌ಗೆ ಡಿಕ್ಕಿ; ಸವಾರ ಸಾ*ವು

ಕಾಪು: ಸ್ಕೂಟಿ ಸವಾರ ನೀರಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು(ಮೇ 19) ಮುಂಜಾನೆ ಪಣಿಯೂರಿನಲ್ಲಿ ನಡೆದಿದೆ.

ಪಣಿಯೂರು ಸೆಂಟರ್ ನಿವಾಸಿ ಕೃಷ್ಣ ಮೂಲ್ಯ (22) ಮೃತ ಸವಾರ.

ಪಣಿಯೂರಿಗೆ ಹಾಲು ಖರೀದಿಗೆ ಬಂದ ಕೃಷ್ಣ ಅವರು, ಸ್ಕೂಟರ್‌ನಲ್ಲಿ ಮರಳಿ ಮನೆಗೆ ತೆರಳುತ್ತಿದ್ದಾಗ ಎದುರಿನಿಂದ ಹೋಗುತ್ತಿದ್ದ ನೀರಿನ ಟ್ಯಾಂಕರ್ ಕಂಚುಗರ ರಸ್ತೆಗೆ ತೆರಳಲು ಬಲಬದಿಗೆ ತಿರುಗಿದ್ದ ವೇಳೆ ಸ್ಕೂಟರ್‌ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದನು ಎನ್ನಲಾಗಿದೆ.

ಸ್ಥಳೀಯರು ಉಚ್ಚಿಲದ ಎಸ್‌ಡಿಪಿಐ ಆಂಬುಲೆನ್ಸ್ ಮೂಲಕವಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!