ಜೂ.21ಕ್ಕೆ NEET-UG ಮರುಪರೀಕ್ಷೆ: NTA ಘೋಷಣೆ

ಹೊಸದಿಲ್ಲಿ: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ  ರದ್ದುಗೊಳಿಸಲಾಗಿದ್ದ 2026ರ NEET (UG)  ಪರೀಕ್ಷೆಯನ್ನು ಜೂ.21ರಂದು  ಮರುಪರೀಕ್ಷೆ ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಘೋಷಿಸಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದವು ಭಾರತದ ಅತಿದೊಡ್ಡ ಪ್ರವೇಶ ಪರೀಕ್ಷೆಗಳಲ್ಲಿ ಒಂದಾದ ನೀಟ್ ಪರೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿತ್ತು. ನೀಟ್ ರದ್ದತಿ ಹಿನ್ನೆಲೆ ದೇಶದಾದ್ಯಂತ ಪ್ರತಿಭಟನೆ ನಡೆದಿತ್ತು.

ಭಾರತ ಸರಕಾರದ ಅನುಮೋದನೆಯೊಂದಿಗೆ NTA ಹೊರಡಿಸಿದ ಅಧಿಸೂಚನೆಯ ಪ್ರಕಾರ, NEET-UG 2026 ಮರುಪರೀಕ್ಷೆಯನ್ನು 2026ರ ಜೂನ್ 21ರಂದು ನಡೆಸಲಾಗುವುದು ಎಂದು ತಿಳಿಸಿದೆ.

 

error: Content is protected !!