
ಮಲಪ್ಪುರಂ: ವ್ಯೂ ಪಾಯಿಂಟ್ ನಲ್ಲಿ ಸಿಡಿಲು ಬಡಿದು ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಮಂಕಡದಲ್ಲಿ ಮಂಗಳವಾರ(ಮೇ 12) ಸಂಜೆ 5:30 ಗಂಟೆಗೆ ನಡೆದಿದೆ.

ಮಲ್ಲಪುರಂ ಮೂಲದ ರಹೀಸ್(20), ಫಹಾದ್(19), ಬಹಾಸ್(18) ಮತ್ತು ಜಿಯಾದ್(18) ಮೃತರು.

7 ವಿದ್ಯಾರ್ಥಿಗಳ ಗುಂಪು ವ್ಯೂ ಪಾಯಿಂಟ್‌ಗೆ ತಲುಪಿದ ವೇಳೆ ಈ ಅವಘಡ ಸಂಭವಿಸಿದ್ದು, ಈ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ. ಮೂವರು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಗಾಯಳುಗಳು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.