ಬೆಳ್ತಂಗಡಿ: ಇಲ್ಲಿನ ಕೆ.ಇ.ಬಿ ಕಚೇರಿ ಪಕ್ಕದಲ್ಲಿ 20 ವರ್ಷಗಳಿಂದ ʻಪವನ್ ಕ್ಯಾಂಟಿನ್’ ಎನ್ನುವ ಗಂಜಿ ಊಟ ನಡೆಯುತ್ತಿತ್ತು. ಹಗಲೆಲ್ಲಾ ಸಾಮಾನ್ಯ ಗಂಜಿ-ಊಟ ಉಣಬಡಿಸುತ್ತಿದ್ದ ಮಾಲೀಕ ಸುಂದರ್ ಶೆಟ್ಟಿ, ಭಾನುವಾರ ಬಂತೆಂದರೆ ಸಾಕು, ಹೋಟೆಲ್ ಬಾಗಿಲು ಹಾಕಿ ಒಳಗಡೆ ʻಮಾದಕ’ ಮೆನು ಸಿದ್ಧಪಡಿಸುತ್ತಿದ್ದ. ಗಿರಾಕಿಗಳಿಗೆ ಬರಿ ಅನ್ನ-ಸಾರು ಸಾಲದು ಅಂತ, ಮಂಚದ ವ್ಯವಸ್ಥೆ ಮಾಡಿದ್ದ ಈ ಶೆಟ್ಟರು ಒಳಗಡೆ ಚಳಿ ಬಿಡುವಂತಹ ಸೌಲಭ್ಯಗಳನ್ನೇ ಇಟ್ಟುಕೊಂಡಿದ್ದನಂತೆ!

ಈ ಕ್ಯಾಂಟಿನ್‌ನ ವಿಶೇಷ ಏನೆಂದರೆ, ಭಾನುವಾರ ರಜೆ ಇದ್ದರೂ ಗಿರಾಕಿಗಳ ಕ್ಯೂ ಮಾತ್ರ ಕಡಿಮೆಯಿರಲಿಲ್ಲ. ಸುಂದರ್ ಶೆಟ್ಟಿ ಕ್ಯಾಂಟಿನ್ ಒಳಗೆ ಬೆಡ್ ರೂಂ ಸೆಟ್ ಮಾಡಿ, ಹೊರಗಿನಿಂದ ʻಸರಕು’ (ಮಹಿಳೆಯನ್ನು) ತರಿಸಿ, ಗಿರಾಕಿಗಳಿಗೆ ಮೋಜಿನ ರಸದೌತಣ ಬಡಿಸುತ್ತಿದ್ದ. ಇಲ್ಲಿ ಗಂಜಿಗಿಂತ ಹೆಚ್ಚಾಗಿ ‘ಜಿಂಜಿ’ (ಮೋಹ) ಜಾಸ್ತಿ ಇತ್ತು ಅನ್ನೋದು ಪೊಲೀಸರ ದಾಳಿಯಿಂದ ಸಾಬೀತಾಗಿದೆ. ಪಾಪ, ಗಿರಾಕಿಗಳು ಗಂಜಿ ಕುಡಿಯಲು ಬಂದವರಲ್ಲ, ತಮ್ಮ ಒಳಗಿನ ಕಾಮದ ಕಾವು ತಣಿಸಿಕೊಳ್ಳಲು ಬಂದವರು!


ಮೇ 10ರ ಸಾಯಂಕಾಲ ಈ ‘ಮಾದಕ’ ದಂಧೆಯ ಮೇಲೆ ಪೊಲೀಸರು ಎಂಟ್ರಿ ಕೊಟ್ಟಾಗ, ಅಲ್ಲಿ ನಡೆಯುತ್ತಿದ್ದದ್ದು ಊಟವಲ್ಲ, ಬೇರೆಯದ್ದೇ ಆಟ! 55 ವರ್ಷದ ಸುಂದರ್ ಶೆಟ್ಟಿಯ ಜೊತೆ ಮಜಾ ಮಾಡುತ್ತಿದ್ದ ನಾವೂರಿನ ಉಸ್ಮಾನ್ ಮತ್ತು ಕಲ್ಲೇರಿಯ ಹೈದರ್ ಎಂಬಿಬ್ಬರು ‘ಗಂಜಿ ಗಿರಾಕಿಗಳು’ ಲಾಕಪ್ ಪಾಲಾಗಿದ್ದಾರೆ. ಕೈಗೆ ಸಿಕ್ಕಿದ್ದು 5 ಸಾವಿರ ನಗದು ಮತ್ತು ಕೆಲವು ‘ಗರ್ಭ ನಿರೋಧಕ’ ಸಾಂಬಾರ ಪದಾರ್ಥಗಳು!

ಡಿವೈಎಸ್ಪಿ ರೋಹಿನಿ ಮತ್ತು ಇನ್ಸ್‌ಪೆಕ್ಟರ್ ರವಿ ಅವರ ತಂಡ ಈ ಅಕ್ರಮ ಅಡುಗೆ ಮನೆಗೆ ನುಗ್ಗಿ ಬೆಂಕಿ ಆರಿಸಿದ್ದಾರೆ. 29 ವರ್ಷದ ಸಂತ್ರಸ್ತೆಯನ್ನು ರಕ್ಷಿಸಿ, ಕಾಮದ ಕಡಲಲ್ಲಿ ತೇಲುತ್ತಿದ್ದ ಮೂವರು ಶೂರರನ್ನು ಈಗ ಜೈಲಿನಲ್ಲಿ ‘ಕಂಬಿ ಎಣಿಸುವ’ ಗಂಜಿ ಸವಿಯಲು ಕಳುಹಿಸಿಕೊಟ್ಟಿದ್ದಾರೆ. ಇನ್ಮುಂದೆ ಈ ಪವನ್ ಕ್ಯಾಂಟಿನ್ ನಲ್ಲಿ ಮೋಜಿನ ಗಾಳಿ ಬೀಸೋದು ಕಷ್ಟವೇ ಸರಿ!
