ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದಾಗಿ ಮನೆಯ ಮೇಲೆ ಉರುಳಿ ಬಿದ್ದ ಬೃಹತ್ ಮರ!

ಸುಳ್ಯ: ಅಪಾಯಕಾರಿ ಮರ ಕಡಿದು, ತೆಗೆದುಕೊಂಡು ಹೋಗದೆ ಬರೆಯ ಮೇಲೆ ಬಿಟ್ಟು ಹೋಗಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳ ಎಡವಟ್ಟಿನ ಪರಿಣಾಮ ಇಂದು(ಮೇ 7) ಮುಂಜಾನೆ ಮರ ಉರುಳಿ ಮನೆಯ ಅಂಗಳದಲ್ಲಿರುವ ಕೋಳಿಗೂಡಿನ ಮೇಲೆ ಬಿದ್ದಿದ್ದು, ಗೂಡಿನೊಳಗಿದ್ದ ಕೋಳಿಗಳು ಜಖಂಗೊಂಡಿರುವ ಘಟನೆ ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ನಡೆದಿದೆ.

ಕಾಂತಮಂಗಲ ಕೊರಂಬಡ್ಕ ನಿವಾಸಿ ಮೇರಿ ಡಿಸೋಜಾ ಎಂಬವರ ಮನೆಯ ಹಿಂಬದಿಯ ಬರೆಯ ಮೇಲೆ ಇದ್ದ ಹಲಸಿನ ಮರವೊಂದು ಅಪಾಯದಲ್ಲಿದ್ದು ಅದನ್ನು ಕಡಿಯಬೇಕೆಂದು ಪಂಚಾಯತ್‌ಗೆ ಹಾಗೂ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಈ ಮನವಿಯ ಮೇರೆಗೆ 2025 ರಲ್ಲಿ ಅರಣ್ಯ ಇಲಾಖೆಯವರು ಬಂದು ಮರ ಕಡಿದಿದ್ದರು.

ಮಳೆಗಾಲವಾದ್ದರಿಂದ ಮರ ಇಳಿಸಲು ಕಷ್ಟಸಾಧ್ಯವಾದ ಪರಿಣಾಮ ಮರವನ್ನು ಅಲ್ಲೇ ಬಿಟ್ಟು ಹೋದರು. ಇದೀಗ ಮರ ಒಣಗಿದ ಪರಿಣಾಮ ಇಂದು ಮಳೆ ಬಂದ ಪರಿಣಾಮ ಆ ಒಣಗಿದ ಮರ ಜಾರಿಬಂದು ಮೇರಿ ಡಿಸೋಜಾರವರ ಅಂಗಳಕ್ಕೆ ಬಿದ್ದಿದೆ. ಸುಮಾರು 20 ಅಡಿಗೂ ಎತ್ತರದ ಬರೆಯಿಂದ ಜಾರಿದ ಮರ ಅಂಗಳದಲ್ಲಿದ್ದ ಕೋಳಿ ಗೂಡಿನ ಮೇಲೆ ಬಿದ್ದಿದೆ. ಗೂಡಿನಲ್ಲಿ ಕೋಳಿಗಳಿದ್ದು ಗೂಡು ಹಾಗೂ ಕೋಳಿಗಳು ಮರದಡಿಗೆ ಸಿಲುಕಿ ಜಖಂಗೊಂಡಿದೆ.

error: Content is protected !!