ಉಪ್ಪಿನಂಗಡಿ: ಲಾರಿ-ಸ್ಕೂಟರ್ ಡಿಕ್ಕಿ, ಯುವಕ ಸ್ಥಳದಲ್ಲೇ ಸಾವು, ಯುವತಿ ಗಂಭೀರ

ಉಪ್ಪಿನಂಗಡಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವಳಾಲು ನೀರಕಟ್ಟೆ ಎಂಬಲ್ಲಿ ಬುಧವಾರ ಸಂಜೆ ಲಾರಿ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಮೃತಪಟ್ಟು, ಸಹಸವಾರೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಉಪ್ಪಿನಂಗಡಿ ಪದವಿ ಮಹಾವಿದ್ಯಾಲಯದ ಅಂತಿಮ ಬಿಎ ವಿದ್ಯಾರ್ಥಿ ಪೆರಿಯಡ್ಕ ಸಮೀಪದ ಬೊಳ್ಳಾವು ನಿವಾಸಿ ಶಿವಣ್ಣ ಸಪಲ್ಯ ಎಂಬವರ ಪುತ್ರ ಕಾರ್ತಿಕ್ (19) ಅಪಘಾತದಲ್ಲಿ ಮೃತಪಟ್ಟ ಯುವಕ.
ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಯುವತಿ ಹಿರೆಬಂಡಾಡಿ ಗ್ರಾಮದ ಎಲಿಯ ನಿವಾಸಿಯಾಗಿರುವ ಅಧ್ಯಾಪಕಿಯೊಬ್ಬರ ಮಗಳಾಗಿದ್ದಾಳೆ.


ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಘಟನೆಗೆ ಲಾರಿ ಚಾಲಕನ ನಿರ್ಲಕ್ಷ್ಯ ಕಾರಣವೆಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳದಲ್ಲಿಯೇ ಕಾರ್ತಿಕ್ ಮೃತಪಟ್ಟಿದ್ದು, ಸಹಸವಾರೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

error: Content is protected !!